ಬೆಂಗಳೂರು ಗ್ರಾಮಾಂತರ

ನಾಲ್ಕು ದಿನಗಳಿಂದ ಕುಡಿಯುವ ನೀರಿಗೆ ಪರದಾಟ

Published On :

ಚನ್ನಪಟ್ಟಣ: ನೀರು ಸರಬರಾಜು  ಮಂಡಲಿಯ ಅಧಿಕಾರಿಗಳ ಉದಾಸೀನತೆಯಿಂದಾಗಿ ಪಟ್ಟಣದ ಜನತೆ ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿಲ್ಲದೆ ಪರದಾಡುವಂತಾಗಿದೆ. ಪಟ್ಟಣಕ್ಕೆ ಕಾವೇರಿ ನೀರು ಪೂರೈಕೆ ಮಾಡುವ ಕೊಳವೆ ತೊರೆಕಾಡನಹಳ್ಳಿ ಸಮೀಪ ಒಡೆದು ಹೋಗಿದೆ ಎಂದು ಜವಾಬು ಹೇಳುತ್ತಾ ಕಾಲಹರಣ ಮಾಡುತ್ತಿರುವ ಅಧಿಕಾರಿಗಳಿಂದಾಗಿ ಜನತೆ ಪರದಾಡುವಂತಾಗಿದೆ. ಪಟ್ಟಣದ 72ಸಾವಿರ ಮಂದಿಗೆ ಕುಡಿಯಲು ಕಾವೇರಿ ನೀರು ಅಗತ್ಯವಾಗಿದ್ದು ನಾಲ್ಕು ದಿನಗಳಿಂದ ಕುಡಿಯುವ ನೀರಿಗಾಗಿ ಅಲೆದಾಡುವಂತಾಗಿದೆ. ನೀರಿನ ವ್ಯಾಪಾರ ಬಲು ಜೋರು  ನೀರು ಸರಬರಾಜು ಮಂಡಲಿಯ ಸಿಬ್ಬಂದಿಯ ಉದಾಸೀನ ಧೋರಣೆಯ ಪರಿಣಾಮ ಪಟ್ಟಣದಲ್ಲಿ ಕರ್ಮಯೋಗಿ ಚಾರಿಟಬಲಲ್ಟ್ರಸ್ಸ್ಥಾಪಿಸಿರುವ ಶುದ್ದಕುಡಿಯುವ ನೀರಿನ ಕೇಂದ್ರದ ಮುಂದೆ ಸಾಕಷ್ಟು ಮಂದಿ ಸಾಲು ಗಟ್ಟಿನಿಂತಿದ್ದರೆ ಮತ್ತೆ ಕೆಲವರು ನೀರಿಗೆ ಗಂಟೆ ಗಟ್ಟಲೆ ಕಾಯುವುದು ಬೇಡ ಎಂದು ಖಾಸಗಿ ವ್ಯಕ್ತಿಗಳಿಂದ 20 ಲೀಟರರ್ನೀರಿಗೆ 40 ರು. ನೀಡಿ ಕುಡಿಯುವ ನೀರು ಖರೀದಿಸುತ್ತಿದ್ದು ಕುಡಿಯುವ ನೀರಿನ ವ್ಯಾಪಾರಮಾಡುವವರ ಗಲ್ಲಾ ತುಂಬುತ್ತಿದೆ. ಇತ್ತ ಗೃಹ ಬಳಕೆಗೂ ನೀರು ಇಲ್ಲದಂತಾಗಿದ್ದು ಗೃಹ ಬಳಕೆಗೆ  ಟ್ಯಾಂಕರ್ ಮೂಲಕ ಮನೆಗೆ ನೀರು ಪೂರೈಕೆ ಮಾಡಿ ಕೊಳ್ಳುತ್ತಿದ್ದು ಕಳೆದ ನಾಲ್ಕು ದಿನಗಳಿಂದ ಕುಡಿಯುವ ನೀರಿಗೆ ಜನತೆ ಪಡುತ್ತಿರುವ ಪ್ರಾಯಾಸ ಅಷ್ಟಿಷ್ಟಲ್ಲ.
ಮಳೆಗಾಲ ಬಂದರೂ ಬರ ನೀಗಲಿಲ್ಲ ರಾಜ್ಯಾದ್ಯಂತ ಉತ್ತಮ ಮಳೆ ಸುರಿದು ಎಲ್ಲಾ ನದಿಗಳು ತುಂಬಿ ಹರಿಯುತ್ತಿವೆಯಾದರೂ ಪಟ್ಟಣದ ಜನತೆ ಮಾತ್ರ ಕುಡಿಯಲು ನೀರಿಲ್ಲದೆ ಪರದಾಡುವಂತಾಗಿದೆ. ಬೇಸಿಗೆಯ ದಿನಗಳಲ್ಲಿ ಮಾತ್ರ ಕಾಡುತ್ತಿದ್ದ ಕುಡಿಯುವ ನೀರಿನ ಸಮಸ್ಯೆ ಇದೀಗ ಮಳೆಗಾಲದಲ್ಲಿ ಅಧಿಕಾರಿಗಳ ಉದಾಸೀನತೆಯಿಂದ ನಿರ್ಮಾಣಗೊಂಡಿದೆ.ಇಲ್ಲ ಸಲ್ಲದ ನೆಪ ಹೇಳಿ ಅಧಿಕಾರಿಗಳು ಜಾರಿ ಕೊಳ್ಳುವ ಬದಲು ಪಟ್ಟಣದ ನಾಗರೀಕರಿಗೆ ಕೂಡಲೇ ಕುಡಿಯುವ ನೀರು ಪೂರೈಕೆ ಮಾಡಲು ಕ್ರಮ ಕೈಗೊಳ್ಳ ಬೇಕಿದೆ.
ಅತಿಥಿ ಉಪನ್ಯಾಸಕರ
ಹುದ್ದೆಗೆ ಅರ್ಜಿ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯ ಪ್ರದರ್ಶನ ಕಲಾ ವಿಭಾಗ 2013-14ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ನೃತ್ಯ, ನಾಟಕ ಮತ್ತು ಸಂಗೀತ ಸ್ನಾತಕೋತ್ತರ ಪದವಿ ತರಗತಿಗಳಿಗೆ ಬೋಧಿಸಲು ಪೂರ್ಣ ಮತ್ತು ಅಲ್ಪಾವಧಿ ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಎನ್ಇಟಿ ಮತ್ತು ಪಿಎಚ್ಡಿ ಪದವಿ ಪಡೆದವರಿಗೆ ಹೆಚ್ಚಿನ ಆದ್ಯತೆ ನೀಡಲಿದೆ. ಅರ್ಜಿಗಳನ್ನು ಆ.21ರೊಳಗೆ ಮುಖ್ಯಸ್ಥರು, ಪ್ರದರ್ಶನ ಕಲಾವಿಭಾಗ, ಸ್ನೇಹಭವನ, ಜ್ಞಾನಭಾರತಿ ಆವರಣ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು 560056 ಈ ವಿಳಾಸಕ್ಕೆ ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ 22961701.


ಕೇಂದ್ರ ಸರ್ಕಾರ ವಿರುದ್ಧ ಎಬಿವಿಪಿ ಪ್ರತಿಭಟನೆ


ಕೋಲಾರ: ಭ್ರಷ್ಟಾಚಾರದಲ್ಲಿ ಮುಳುಗಿರುವ ಕೇಂದ್ರದ ಯುಪಿಎ ಸರ್ಕಾರನ್ನು ತಕ್ಷಣ ವಜಾ ಮಾಡುವಂತೆ ಒತ್ತಾಯಿಸಿ ನಗರದಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನಿಂದ ಮಂಗಳವಾರ ಪ್ರತಿಭಟನೆ ನಡೆಯಿತು. ನಗರದ ನೂತನ ಪದವಿ ಪೂರ್ವ ಕಾಲೇಜಿನಿಂದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿಗಳ ಕಚೇರಿ ತಲುಪಿದ ಕಾರ್ಯಕರ್ತರು ಕೆಲ ನಿಮಿಷ ಧರಣಿ ನಡೆಸಿ ನಂತರ ಅಪರ ಜಿಲ್ಲಾಧಿಕಾರಿ ಡಾ.ವೆಂಕಟೇಶಮೂರ್ತಿ ಅವರಿಗೆ ಮನವಿ ಸಲ್ಲಿಸಿ ರಾಷ್ಟ್ರಪತಿಗಳಿಗೆ ಕಳುಹಿಸಿಕೊಡುವಂತೆ ಕೋರಿದರು. ಕೇಂದ್ರದ ಯುಪಿಎ ಸರ್ಕಾರ ಹಲವು ಹಗರಣಗಳ ಮೂಲಕ ಸುಮಾರು 12 ಲಕ್ಷ ಕೋಟಿ ರು.ಗೂ ಮೀರಿ ಭ್ರಷ್ಟಾಚಾರವೆಸಗಿದೆ. ಹಣದುಬ್ಬರ ಮತ್ತು ಬೆಲೆ ಏರಿಕೆ ತಡೆಗಟ್ಟುವಲ್ಲಿ ಸಂಪೂರ್ಣ ವಿಫಲಗೊಂಡಿದೆ ಎಂದು ಮುಖಂಡರು ಆರೋಪಿಸಿದರು. ಎಬಿವಿಪಿ ಜಿಲ್ಲಾ ಸಂಚಾಲಕ ಸುನೀಲ್ಕುಮಾರ್, ನಗರ ಸಂಘಟನಾ ಕಾರ್ಯದರ್ಶಿ ಚೇತನ್, ಜಿಲ್ಲಾ ಪ್ರಮುಖ್ ಪುನೀತ್ಕುಮಾರ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.