ಕಾಲುಬಾಯಿ ರೋಗಕ್ಕೆ ಜಾನುವಾರುಗಳು ಸಾವು
ರಾಮನಗರ: ನಗರ ವ್ಯಾಪ್ತಿಯ ಕೊತ್ತೀಪುರ ಬಡಾವಣೆಯಲ್ಲಿ ಕಾಲುಬಾಯಿ ರೋಗಕ್ಕೆ ತುತ್ತಾಗಿ ಜಾನುವಾರುಗಳು ಸಾವನ್ನಪ್ಪಿದ್ದು, ಜಾನುವಾರು ಕಳೆದುಕೊಂಡ ರೈತರಿಗೆ ಜಿಲ್ಲಾಡಳಿತ ಪರಿಹಾರ ನೀಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಾನುವಾರು ಮಾಲೀಕರು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರಿಗೆ ಮನವಿ ಸಲ್ಲಿಸಿದರು. ಕಳೆದ 15 ದಿನಗಳಿಂದ ಕೊತ್ತೀಪುರದಲ್ಲಿ ಕಾಲುಬಾಯಿ ರೋಗ ಉಲ್ಬಣಿಸಿದ್ದು, 2 ಸೀಮೆ ಹಸುಗಳು, 7 ಎಮ್ಮೆಗಳು ಸಾವನ್ನಪ್ಪಿವೆ. ನೂರಾರು ರಾಸುಗಳಿಗೆ ರೋಗ ಹರಡಿದೆ. ಜೀವನಕ್ಕೆ ಆಶ್ರಯವಾಗಿದ್ದ ರಾಸುಗಳನ್ನು ಕಳೆದುಕೊಂಡ ರೈತರ ಸ್ಥಿತಿ ಹೇಳತೀರದಾಗಿದೆ. ಹೀಗಾಗಿ ತಕ್ಷಣ ಪರಿಹಾರ ವಿತರಣೆಗೆ ಮುಂದಾಗಿ ಎಂದು ಆಗ್ರಹಿಸಿದರು. ನಿಯೋಗದಲ್ಲಿ ಕರವೇ ಜಿಲ್ಲಾಧ್ಯಕ್ಷ ಬಿ.ಶೀಧರ್ ಹೊಸೂರು, ಟಿ.ಆರ್.ದೇವರಾಜು, ಸಾಗರ, ಜಿ.ಶಿವಣ್ಣ, ರಮಾನಂದಗೌಡ, ಚೆನ್ನಕೇಶವ, ಶಂಭೂಗೌಡ, ರಘುರಾಮ್, ಗ್ರಾಮಸ್ಥರಾದ ವಿಜಯ್ಕುಮಾರ್, ಪುಟ್ಟಮಾರಯ್ಯ, ಸೋಮಣ್ಣ, ಗೋಪಾಲ್, ಲಕ್ಷ್ಮಿನಾರಾಯಣ, ಪ್ರಕಾಶ್, ಆಸೀಫ್ ಅಲಿ ಖಾನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

