ಎಲ್ಲರೂ ವಿದ್ಯಾವಂತರಾದರೆ ಸಾಮಾಜಿಕ ಸಮಾನತೆ ಸಾಧ್ಯ
ಕ.ಪ್ರ.ವಾರ್ತೆ ಟಿ ನೆಲಮಂಗಲ ಟಿ ಆ.15
ದೇಶದಲ್ಲಿ ಎಲ್ಲರೂ ವಿದ್ಯಾವಂತರಾದರೆ ಮಾತ್ರ ಸಾಮಾಜಿಕ ಸಮಾನತೆ ಮೂಡಿ, ಬಡತನ ನಿವಾರಣೆಯಾಗಿ ಸರ್ವರೂ ಅಭಿವೃದ್ಧಿಯಾಗಲು ಸಾಧ್ಯ ಎಂದು ತಹಸೀಲ್ದಾರ್ ರಾಜೇಂದ್ರ ಹೇಳಿದರು.
ಗುರುವಾರ 67ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಇಲ್ಲಿನ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣಲ್ಲಿ ಧ್ವಜಾರೋಹಣ ಕಾರ್ಯಕ್ರಮ ನೆರವೇರಿಸಿ ಮಾತನಾಡಿ ರಾಷ್ಟ್ರದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ದೇಶಭಕ್ತರ ಕನಸಿನಂತೆ ಭವ್ಯ ಭಾರತ ನಿರ್ಮಾಣಕ್ಕಾಗಿ ನಾವೆಲ್ಲರೂ ನಿಸ್ವಾರ್ಥವಾಗಿ ದುಡಿಯಬೇಕು. ಪ್ರತಿಯೊಬ್ಬ ಯುವಕರು ರಾಷ್ಟ್ರಪ್ರೇಮವನ್ನು ರಕ್ತಗತವಾಗಿ ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಮಾತನಾಡುತ್ತಾ ದೇಶದ ಸ್ವತಂತ್ರ್ಯಕ್ಕಾಗಿ ದುಡಿದ ವೀರ ಹಾಗೂ ವೀರ ಯೋಧ ಮಹಿಳೆಯರ ಸಾಹಸ ನೆನೆಯುತ್ತಾ, ಹಿರಿಯರ ಮಾರ್ಗದರ್ಶನ ಸಲಹೆ ಪಡೆದು ಅಧಿಕಾರಿಗಳ ಸಹಕಾರದಿಂದ ಮತಕ್ಷೇತ್ರವನ್ನು ಮಾದರಿ ಮಾಡುವುದಾಗಿ ಭರವಸೆ ನೀಡಿದರು.
ಭಾರತ ಪ್ರಪಂಚದಲ್ಲಿ ವಿಶಿಷ್ಟ ರೀತಿ ಅಭಿವೃದ್ಧಿ ಪಥದತ್ತ ಹೆಜ್ಜೆ ಹಾಕುತ್ತಿದ್ದರೆ, ನಮ್ಮ ರಾಷ್ಟ್ರಗಳು ಅಸೂಯೆ ಪಡುತ್ತಿದ್ದು, ಅಭಿವೃದ್ಧಿ ಹಿನ್ನೆಡೆಗೊಳಿಸಲು ಭಯೋತ್ಪಾದನೆ ಅಸ್ತ್ರ ಬಳಸುತ್ತಿದ್ದು, ನಾವೆಲ್ಲರೂ ಭಯೋತ್ಪಾದನೆ ಖಂಡಿಸಿ ಅದನ್ನು ದಮನಗೊಳಿಸಿ ಈ ರಾಷ್ಟ್ರ ರಕ್ಷಿಸಲು ಸೈನಿಕರಾಗಬೇಕಿದೆ ಎಂದು ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಹೇಳಿದರು.
ಪಟ್ಟಣದ ಸರ್ಕಾರಿ ಶಾಲೆಗಳು, ಸನ್ರೈಸ್ ಶಾಲೆ, ಸೆಂಟ್ ಆನ್ ಬಸವೇಶ್ವರ ಶಾಲೆಗಳಿಂದ ದೇಶಭಕ್ತಿ ಗೀತೆಗಳುಳ್ಳ ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು. ಉತ್ತಮ ಕಾರ್ಯಕ್ರಮ ನೀಡಿದ ಶಾಲೆಗಳಿಗೆ ಬಹುಮಾನ ವಿತರಿಸಿದರು. ಸ್ವಾತಂತ್ರ್ಯ ಹೋರಾಟಗಾರ ಆಂಜಿನಪ್ಪ, ನಾಟಿ ವೈದ್ಯ ಗಂಗಣ್ಣ, ಪೌರ ಕಾರ್ಮಿಕ ಈರಪ್ಪ, ಮಾಜಿ ಸೈನಿಕ ಎನ್.ಎಸ್.ಮೂರ್ತಿ ಅವರನ್ನು ತಾಲೂಕು ಆಚರಣ ಸಮಿತಿಯವರು ಸನ್ಮಾನಿಸಿ ಗೌರವಿಸಿದರು.
ತಾಪಂ ಮಾಜಿ ಅಧ್ಯಕ್ಷ ರಂಗಸ್ವಾಮಿ, ಉಪಾಧ್ಯಕ್ಷ ಶ್ರೀನಿವಾಸ್, ಪುರಸಭೆ ಸದಸ್ಯ ಎಚ್.ಜಿ.ರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಹನುಮನಾಯಕ್, ಜಿ.ಪಂ.ಸದಸ್ಯ ಎಂ.ಎನ್.ರಾಮ್, ಸುನಂದಶಿವಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

