ಬೆಂಗಳೂರು ಗ್ರಾಮಾಂತರ

ಅನಿತಾ ಆಯ್ಕೆಯಾಗಲಿ: ಎಂಎಲ್ಸಿ ಇ.ಕೃಷ್ಣಪ್ಪ

Published On :

ಚನ್ನಪಟ್ಟಣ: ಗಂಭೀರ ಕ್ರಿಮಿನಲ್ ಮೊಕದ್ದಮೆಗಳನ್ನು ಎದುರಿಸುತ್ತಿರುವ ವ್ಯಕ್ತಿಯನ್ನು ಜನಪ್ರತಿನಿಧಿಯಾಗಿ ಆಯ್ಕೆ ಮಾಡದೆ ಸರಳ ಸಜ್ಜನಿಕೆ ಪ್ರತಿರೂಪವಾದ ಅನಿತಾ ಕುಮಾರಸ್ವಾಮಿ ಅವರನ್ನು ಗೆಲ್ಲಿಸಬೇಕು ಎಂದು ವಿಧಾನಪರಿಷತ್ ಸದಸ್ಯ ಇ.ಕೃಷ್ಣಪ್ಪ ಮನವಿ ಮಾಡಿದರು.
ಮಾಜಿ ಶಾಸಕ ಎಂ.ಸಿ.ಅಶ್ವಥ್ ನಿವಾಸದಲ್ಲಿ ಕರೆಯಲಾಗಿದ್ದ ಗಂಗಾಮತಸ್ಥ ಸಮುದಾಯದ ಮುಖಂಡರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಚಾರಿತ್ರ್ಯವನ್ನು ಅವರ ಮೇಲೆ ದಾಖಲಾಗಿರುವ ಪ್ರಕರಣಗಳು ಸಾರಿ ಹೇಳುತ್ತಿವೆ ಎಂದು ವಾಗ್ದಾಳಿ ನಡೆಸಿದರು.
ಹಣ, ಆಮಿಷಗಳಿಗೆ ಬಲಿಯಾಗದಿರಿ: ಹಿಂದುಳಿದ ಜನಾಂಗದ ಮುಖಂಡರು ಯಾವುದೇ ಕಾರಣಕ್ಕೂ  ಕಾಂಗ್ರೆಸ್‌ನ ಹಣ, ಆಮಿಷಗಳಿಗೆ ಬಲಿಯಾಗದೆ, ಜನಹಿತಕ್ಕಾಗಿ ದುಡಿಯುವ ಜೆಡಿಎಸ್ ಬೆಂಬಲಿಸಿ ಎಂದು ಮನವಿ ಮಾಡಿದ ಅವರು, ಕಾಂಗ್ರೆಸ್ ದುರಾಡಳಿತಕ್ಕೆ ತಕ್ಕ ಪಾಠಕಲಿಸಬೇಕೆಂದು ಕಿವಿಮಾತು ಹೇಳಿದರು.
ಸಮಸ್ಯೆಗೆ  ಸ್ಪಂದಿಸುತ್ತೇನೆ: ಗಂಗಾಮಸ್ಥ ಸಮುದಾಯದ ಸಮಸ್ಯೆಗೆ ನಾನು ಸದಾಕಾಲ ಸ್ಪಂದಿಸುತ್ತೇನೆ, ಕುಮಾರಸ್ವಾಮಿ ಸಂಸದರಾಗಿದ್ದಾಗ ಅವರ ಅನುದಾನದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ನೆರವು ನೀಡಲಾಗಿತ್ತು ಈ ಹಣ ಸಾಲದಿದ್ದರೆ ನಮ್ಮ ಅನುದಾನದಿಂದಲೂ ನೆರವು ನೀಡುವುದಾಗಿ ತಿಳಿಸಿದರು.
ಮಾಜಿ ಶಾಸಕ ಎಂ.ಸಿ.ಅಶ್ವಥ್ ಮಾತನಾಡಿ, ಹಿಂದುಳಿದ ವರ್ಗಗಳಿಗೆ ರಾಜಕೀಯ ಪ್ರಾತಿನಿಧ್ಯತೆ ನೀಡಿದ್ದು ಜೆಡಿಎಸ್ ಮಾತ್ರ. ದೇವೇಗೌಡರು ಮುಖ್ಯಮಂತ್ರಿಯಾಗಿದ್ದಾಗ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಬಲಿಷ್ಠ ಸಮುದಾಯದ ಜತೆ ಪೈಪೋಟಿ ನೀಡುವಂತೆ ಮಾಡಿದರು ಎಂದರು.
ಗಂಗಾಮಸ್ಥ ಜನಾಂಗದ ಮುಖಂಡರು ಜೆಡಿಎಸ್‌ನ ಜನಪರ ಧೋರಣೆಗಳನ್ನು ಜನತೆಗೆ ಮನವರಿಕೆ ಮಾಡಿ ಕೊಟ್ಟು ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷಕ್ಕೆ ಮತ ಚಲಾವಣೆಯಾಗುವಂತೆ ನೋಡಿ ಕೊಳ್ಳ ಬೇಕೆಂದು ಮನವಿ ಮಾಡಿದರು.
ಸಭೆಯಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ನಗರಸಭಾ ಸದಸ್ಯ ಎಸ್.ಉಮಾಶಂಕರ್, ಮುಖಂಡರಾದ ಶಿವಪ್ಪ ಅರಳಾಳು ಸಂದ್ರ, ಮೋಳೆದೊಡ್ಡಿ ಬಿಳಯಪ್ಪ, ತಾರಕೇಶ್, ರಾಕಯ್ಯ, ನಾಗರಾಜು ಇನ್ನು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.