ನೌಕರರ ಕ್ರೀಡಾಕೂಟ
ಹೊಸಕೋಟೆ ಆ. 24, 25 ರಂದು ಇಲ್ಲಿನ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಹೊಸಕೋಟೆ ತಾಲೂಕು ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಕ್ರೀಡಾಕೂಟದಲ್ಲಿ 45 ವರ್ಷದೊಳಗಿನ ಮತ್ತು 45ವರ್ಷ ಮೇಲ್ಪಟ್ಟ ವಯೋವುತಿಯ ಪುರುಷ ಮತ್ತು ಮಹಿಳೆಯರ ಕ್ರೀಡಾ ಸ್ಪರ್ಧೆಗಳಾದ ಅಥ್ಲೆಟಿಕ್ಸ್ ಮತ್ತು ನಿಗದಿತ ಒಳಾಂಗಣ ಆಟಗಳುಹಾಗೂ ಗುಂಪು ಆಟಗಳನ್ನು ಹಮ್ಮಿಕೊಂಡಿದೆ. ಇದರೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳು ಎಲ್ಲಾ ವಯೋವುತಿ ಸೇರಿ ಹಮ್ಮಿಕೊಂಡಿದೆ. ಆಸಕ್ತರು ಎಂ.ನರೇಶ್ ದೂ-9845146641 ಚಂದ್ರಮೌಳಿ ಕ್ರೀಡಾಧಿಕಾರಿ ದೂ-9902537037 ಇವರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದು. ಭಾಗವಹಿಸುವ ಸ್ಪರ್ಧಿಗಳಿಗೆ ಅನ್ಯ ಕಾರ್ಯ ನಿಮಿತ್ತ ಸೌಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.
ಥ್ರೋಬಾಲ್ ಪಂದ್ಯ;ವಸತಿ ಶಾಲೆ ಪ್ರಥಮ
ದೊಡ್ಡಬಳ್ಳಾಪುರ: ಅಂತರ್‌ಶಾಲಾ ಜಿಲ್ಲಾ ಮಟ್ಟದ ಕೇಂದ್ರೀಯ ಪಠ್ಯ ಕ್ರಮ ಮತ್ತು ಐಸಿಎಸ್‌ಇ ಶಾಲೆಗಳ ಥ್ರೋಬಾಲ್ ಪಂದ್ಯಾವಳಿಯಲ್ಲಿ ಶ್ರೀದೇವರಾಜ ಅರಸ್ ಅಂತರಾರಾಷ್ಟ್ರೀಯ ವಸತಿ ಶಾಲೆ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಅಂತರಶಾಲಾ ಥ್ರೋಬಾಲ್ ಪಂದ್ಯಾವಳಿ ಗೌರಿಬಿದನೂರಿನ ಅಲ್ಲಿಪುರದ ನೋಬಲ್ ಪಬ್ಲಿಕ್ ಶಾಲೆ ಆವರಣದಲ್ಲಿ ನಡೆದವು. ವಿಜೇತ ತಂಡವನ್ನು ಶಾಲೆಯ ಆಡಳಿತ ಮಂಡಲಿ ಮತ್ತು ಬೋಧಕ ವೃಂದ ಅಭಿನಂದಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

