ಬೆಂಗಳೂರು ಗ್ರಾಮಾಂತರ

ಪುತ್ರಿ, ಪತ್ನಿ ಜತೆ ತಂದೆ ಆತ್ಮಹತ್ಯೆ

Published On :

ಕನ್ನಡಪ್ರಭ ವಾರ್ತೆ ದೇವನಹಳ್ಳಿ ಆ.23
ವ್ಯಕ್ತಿಯೊಬ್ಬ ತನ್ನ ಕಾರಿನಲ್ಲಿಯೇ ಪತ್ನಿ ಹಾಗೂ ಪುತ್ರಿಗೆ ವಿಷ ನೀಡಿ, ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು-ದೇವನಹಳ್ಳಿ ರಸ್ತೆಯ ಚಿಕ್ಕಸಣ್ಣೆ ಗೇಟ್ ಸಮೀಪ ಶುಕ್ರವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಚಿಂತಾಮಣಿ ಮೂಲದ ಸಂದೀಪ್ (38), ಪತ್ನಿ ಅರ್ಚನಾ (34) ಹಾಗೂ ಪುತ್ರಿ ನಗರದ ಬಿಷಪ್ ಕಾಟನ್ ಶಾಲೆಯಲ್ಲಿ ಓದುತ್ತಿರುವ ಅದಿತಿ (7) ಶವಗಳು ಪತ್ತೆಯಾಗಿದ್ದು, ಬೆಳಗಿನ ಜಾವ ಸುಮಾರು ನಾಲ್ಕು ಗಂಟೆ ವೇಳೆ ಇವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ.   
ಕಳೆದೈದು ವರ್ಷಗಳಿಂದ ಬೆಂಗಳೂರಿನ ಗಾಂಧಿಬಜಾರಿನಲ್ಲಿ ಜ್ಞಾನಾಕ್ಷಿ ಜ್ಯೂಯಲ್ಲರ್ಸ್ ಆಭರಣ ಮಳಿಗೆಯಲ್ಲಿ ಸಂದೀಪ್ ವ್ಯಾಪಾರ ನಡೆಸುತ್ತಿದ್ದರು. ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದ ಇವರ ಮಗಳು ಅದಿತಿ ಶಾಲೆಯಲ್ಲಿ ಪ್ರತಿಭಾನ್ವಿತೆ ಎಂದು ಗುರುತಿಸಿಕೊಂಡಿದ್ದಳು ಎಂದು ಸಂದೀಪ್ ಪೋಷಕರು ತಿಳಿಸಿದ್ದಾರೆ.
ಸ್ನೇಹಿತನಿಗೆ ಎಸ್‌ಎಂಎಸ್: ಬೆಂಗಳೂರು ಹನುಮಂತನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದ ಸಂದೀಪ್ ಸಂಸಾರ ಸಮೇತ ಗುರುವಾರ ರಾತ್ರಿ 10 ಗಂಟೆಯಲ್ಲಿ ತನ್ನ ಪತ್ನಿ ಮತ್ತು ಪುತ್ರಿಯೊಂದಿಗೆ ಮನೆ ಬಿಟ್ಟಿದ್ದಾರೆ. ಶುಕ್ರವಾರ ಬೆಳಗಿನ ಜಾವ 3.30ರ ವೇಳೆಗೆ ಸ್ನೇಹಿತ ವೆಂಕಟೇಶಮೂರ್ತಿಗೆ 'ದೇವನಹಳ್ಳಿ ರಸ್ತೆಯಲ್ಲಿ ನಾನು, ಪತ್ನಿ ಮತ್ತು ಪುತ್ರಿ ಬೇರೆ ಲೋಕಕ್ಕೆ ಹೋಗುತ್ತಿದ್ದೇವೆ' ಎಂದು ಎಸ್‌ಎಂಎಸ್ ಕಳುಹಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಸಂದೇಶ ನೋಡಿದ ವೆಂಕಟೇಶ್‌ಮೂರ್ತಿ, ಸಂದೀಪ್ ತಮ್ಮ ಸತೀಶ್‌ರೊಂದಿಗೆ ದೇವನಹಳ್ಳಿ ಮಾರ್ಗವಾಗಿ ಹುಡುಕಿಕೊಂಡು ಹೋದಾಗ ಈ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ದೇವನಹಳ್ಳಿ ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಆತ್ಮಹತ್ಯೆ ಮಾಡಿಕೊಂಡ ಸಂದೀಪ್ ತನ್ನ ಪತ್ನಿ ಮತ್ತು ಪುತ್ರಿಗೆ ಸೈನೈಡ್ ನೀಡಿರುವುದಾಗಿ ಬರೆದಿದ್ದು, ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಡೆತ್‌ನೋಟಲ್ಲಿ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.