ವಿದ್ಯೆ ವಂಚಿತರ ಸೇವೆ ದೊಡ್ಡದು: ಕೆ.ಬಿ.ಸಿದ್ದಯ್ಯ
ಕ.ಪ್ರ.ವಾರ್ತೆ ತುಮಕೂರು ಡಿ.1
ವಿದ್ಯೆ ವಂಚಿತ ರೈತರು, ಮಹಿಳೆಯರು, ದೀನ ದುರ್ಬಲರು ಮಾನವೀಯತೆಯಿಂದ ಮಾಡುವ ಸೇವೆ ವಿದ್ಯಾವಂತರ ಸೇವೆಗಿಂತ ದೊಡ್ಡದು. ಇದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿ, ಚಿಂತಕ ಕೆ.ಬಿ. ಸಿದ್ದಯ್ಯ ಮಾರ್ಮಿಕವಾಗಿ ನುಡಿದರು.
ಅವರು ತುಮಕೂರಿನ ಕಲರ್ ಗ್ರೂಪ್ ವತಿಯಿಂದ ಏರ್ಪಾಟಾಗಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಅಕ್ಷರ ಜ್ಞಾನಕ್ಕಿಂತ ಅನುಭವ ಜ್ಞಾನ ದೊಡ್ಡದು. ಅಕ್ಷರ ಜ್ಞಾನದಿಂದ ಮಾಡುವ ಸಾಧನೆಗಿಂತ, ಮುಗ್ಧ ಮನಸ್ಸಿನ ನಿಸ್ವಾರ್ಥ ಸೇವೆಗೈದ, ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮನವರಿಗೆ ಸಿಕ್ಕ ಪ್ರಶಸ್ತಿಯ ಮುಂದೆ ತಮ್ಮ ಸಾಧನೆ ಏನೇನೂ ಅಲ್ಲ. ಅಕ್ಷರ ಕಲಿಯದೆ ಸಾಧಿಸಿದ ತಿಮ್ಮಕ್ಕ, ನರಸಮ್ಮನವರ ಮುಂದೆ ತಮ್ಮದು ಏನೇನೂ ಅಲ್ಲ. ಇವರ ಸೇವೆ ವಿದ್ಯಾವಂತರಿಗಿಂತ ಮಿಗಿಲಾದದ್ದು. ಅಂತಹ ಜ್ಞಾನ ಜೀವಿಗಳಿಗೆ ತಮ್ಮ ಪ್ರಶಸ್ತಿಯನ್ನು ಅರ್ಪಿಸುವುದಾಗಿ ಸಿದ್ದಯ್ಯ ತಿಳಿಸಿದರು. ಜತೆಗೆ ಅಂತಹವರನ್ನು ಗುರುತಿಸಿ, ಸನ್ಮಾನಿಸಿರುವುದು ಈ ಭಾರಿಯ ಪ್ರಶಸ್ತಿ ಮೌಲ್ಯವನ್ನು ಹೆಚ್ಚಿಸಿದೆ ಎಂದರು.
ಚಿಂತಕ ಕೆ. ಗೋವಿಂದಯ್ಯ ಮಾತನಾಡಿ, ಪ್ರಶಸ್ತಿ ಪಡೆಯುವವರಿಗಿಂತ, ಪ್ರಶಸ್ತಿ ಕೊಡುವವರಿಗೂ ಅರ್ಹತೆ
ಬೇಕಾಗುತ್ತದೆ. ಪ್ರೊ. ಕೆ.ಬಿ. ಸಿದ್ದಯ್ಯನವರಿಗೆ ಅಂತಹ ಸೌಭಾಗ್ಯ ಈ ಬಾರಿ ದೊರೆತಿರುವುದು ಸಂತಸ ತಂದಿದೆ. ದೊಡ್ಡ ಜ್ಞಾನಿಗಳಿಂದ ನಿಕೃಷ್ಟ ವ್ಯಕ್ತಿಯ ಜತೆ ಸರಿ ಸಮಾನವಾಗಿ ಬೆರೆತು ಬದುಕುವ ದೊಡ್ಡತನ ಸಿದ್ದಯ್ಯನವರಂತವರಿಗೆ ಮಾತ್ರ ಸಾಧ್ಯ. ಅವರಲ್ಲಿರುವ ನಿಷ್ಠುರ, ನಿರ್ಭಯ ನಡೆ-ನುಡಿಗಳು ಇಂದಿನ ಯುವಕರಿಗೆ ಮಾರ್ಗದರ್ಶನವಾಗಲಿ ಎಂದು ಹಾರೈಸಿದರು.
ಕಲರ್ಸ್ ಗ್ರೂಪ್ನ ಕಾರ್ಯದರ್ಶಿ ಕೋಟೆ ಕುಮಾರ್ ಮಾತನಾಡಿ, ಕೆ.ಬಿ. ಸಿದ್ದಯ್ಯನವರ ಬಕಾಲ, ಅನಾತ್ಮ, ದಕ್ಲ ಕಥಾದೇವಿ, ಗಲ್ಲೇ ಬಾನಿಯಂತಹ ಕಾವ್ಯಗಳು ನಮ್ಮ ಸಂಸ್ಕೃತಿಯ ಮೂಲ ಸೆಲೆಯ ಕೃತಿಗಳಾಗಿವೆ ಎಂದರು.
ಆರ್. ಶಾಂತಮೂರ್ತಿ ಮಾತನಾಡಿ, ಕೆ.ಬಿ. ಸಿದ್ದಯ್ಯನವರ ಸರಳ ವ್ಯಕ್ತಿತ್ವ ಹಾಗೂ ಕ್ಲಿಷ್ಟ ವಿಷಯವನ್ನು ಸರಳವಾಗಿ ಅರ್ಥೈಸುವ ಅವರ ಅನುಭವ ದೊಡ್ಡದೆಂದರು. ಕಲಾವಿದ ಪ್ರಭು ಹರಸೂರ್ ಮಾತನಾಡಿ, ಕೆ.ಬಿ.ಯವರ ಸಾಹಿತ್ಯವನ್ನು ದೃಶ್ಯಕಾವ್ಯಗಳಾಗಿ ಕಲಾಕೃತಿಯ ಮೂಲಕ ದರೈಸ್ತ್ರೀ ಮೂಲ ಆಶಯವನ್ನು ಕಲಾಕೃತಿಯನ್ನು ರಚಿಸಿ ಅನುಭವಿಸಿದ್ದೇನೆ ಎಂದರು.
ಕಲಾವಿದರಾದ ಮನುಚಕ್ರವರ್ತಿ, ಅಕ್ರಂ ಪಾಷಾ, ಕಲರ್ಸ್ ಗ್ರೂಪ್ನ ಅಧ್ಯಕ್ಷೆ ಶೋಭಾ ಶಾಂತಮೂರ್ತಿ, ಸದಸ್ಯರಾದ ಶೋಭಾ ರಾಣಿ, ಚಂದ್ರಕಲಾ, ಗಿರೀಶ್ ಹರಸೂರ್, ದೀಪಾ ಉಪಸ್ಥಿತರಿದ್ದರು. ದೀಕ್ಷಾ ಕೋಟೆ ಪ್ರಾರ್ಥಿಸಿ, ಅಮೂಲ್ಯ ಶ್ಯಾಮ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

