ರಾಮನಗರದ ವೈದ್ಯೆ ನೆರವಿನಿಂದ ಮಗು ಅಕ್ರಮ ದತ್ತು
ದಾವಣಗೆರೆ: ರಾಮನಗರ ಜಿಲ್ಲೆಯ ಆಸ್ಪತ್ರೆಯೊಂದರ ವೈದ್ಯೆ ಸಹಾಯದಿಂದ ಕಾನೂನು ಬಾಹಿರವಾಗಿ ನವಜಾತ ಹೆಣ್ಣು ಶಿಶುವೊಂದನ್ನು ದತ್ತು ಪಡೆಯಲಾಗಿದ್ದು, ಇದೀಗ ಶಿಶುವನ್ನು ರಕ್ಷಿಸುವಲ್ಲಿ ಮಕ್ಕಳ ಸಹಾಯವಾಣಿ, ಪೊಲೀಸ್ ಇಲಾಖೆ ಯಶಸ್ವಿಯಾಗಿವೆ.
ದಾವಣಗೆರೆ ವಿದ್ಯಾನಗರದ ಬಾಪೂಜಿ ಬಡಾವಣೆ ನಿವಾಸಿಗಳಾದ ಖಾಸಗಿ ಶಾಲೆಯೊಂದರ ಶಿಕ್ಷಕಿ ಪ್ರಭಾ, ಪಿಜಿ ನಡೆಸುತ್ತಿರುವ ಜಗದೀಶ ಗೌಡರ್ ದಂಪತಿ ಕಾನೂನು ಬಾಹಿರವಾಗಿ ಹೆಣ್ಣು ಮಗುವನ್ನು ದತ್ತು ಪಡೆದವರು. ರಾಮನಗರದ ವೈದ್ಯೆ ಡಾ. ವಾಣಿ ಎಂಬವರ ಸಹಾಯದಿಂದ ಅದೇ ಊರಿನ ಗೌರಿಬಾಯಿ ಎಂಬ ಮಹಿಳೆ ಎಂಟು ದಿನಗಳ ಹಿಂದಷ್ಟೇ ಐದನೇ ಹೆಣ್ಣು ಮಗುವೊಂದಕ್ಕೆ ಜನ್ಮ ನೀಡಿದ್ದರು. ಮಗು ಹುಟ್ಟಿದ ಮೂರು ದಿನಕ್ಕೆ ಅದನ್ನು ಅದರ ತಾಯಿಯಿಂದ ವೈದ್ಯೆ ನೆರವಿನಿಂದ ದತ್ತು ಪಡೆದಿದ್ದಾಗಿ ದಂಪತಿ ಹೇಳುತ್ತಾರೆ.
ದತ್ತು ಪಡೆದಿದ್ದಕ್ಕೆ ಸಂಬಂಧಿಸಿದಂತೆ ಅಧಿಕೃತ ದಾಖಲೆಗಳನ್ನು ಸಲ್ಲಿಸಲು ಅಧಿಕಾರಿಗಳು ಕೇಳಿದಾಗ, ಛಾಪಾ ಕಾಗದದ ಮೇಲೆ ಮಗುವಿನ ತಾಯಿಯೊಂದಿಗೆ ಒಪ್ಪಂದ ಮಾಡಿಕೊಂಡು, ಸಹಿ ಮಾಡಿಸಿಕೊಂಡಿದ್ದೇವೆ. ಆ ಪತ್ರ ಚಿತ್ರದುರ್ಗದ ರಘು ಬಳಿ ಇದೆ ಎಂಬುದಾಗಿ ದತ್ತು ಪಡೆದ ದಂಪತಿ ಹೇಳಿದರು.
ಮಕ್ಕಳ ನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ ಪ್ರಕಾರ ಈ ದಂಪತಿ ಮಗುವನ್ನು ಕಾನೂನು ಬದ್ಧವಾಗಿ ದತ್ತು ಪಡೆದಿಲ್ಲವೆಂಬುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ 8 ದಿನದ ಶಿಶುವನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಅಕ್ರಮ ದತ್ತು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಮಗು ದತ್ತು ಪಡೆದ ದಂಪತಿ, ಸಂಬಂಧಿಸಿದವರನ್ನು ವಿಚಾರಣೆಗೊಳಪಡಿ, ಪ್ರಕರಣದ ಸತ್ಯಾಸತ್ಯತೆ ತಿಳಿಯಲಾಗುತ್ತದೆ. ಮಗುವಿನ ಹಿತದೃಷ್ಟಿಯಿಂದ ಮುಂದಿನ ಕ್ರಮಕ್ಕಾಗಿ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಮಂದಿರಕ್ಕೆ ದಾಖಲಿಸಲಾಗಿದೆ ಎಂದು ಡಾನ್ ಬಾಸ್ಕೋ ಬಾಲ ಕಾರ್ಮಿಕರ ಮಿಷನ್ ನ ಮಕ್ಕಳ ಸಹಾಯವಾಣಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

