ಬೆಂಗಳೂರು ಗ್ರಾಮಾಂತರ

ಅಂಬೇಡ್ಕರ್ ಚಿಂತನೆ ಭಾಷಣಕ್ಕಷ್ಟೇ ಸೀಮಿತ'

Published On :

ದೊಡ್ಡಬಳ್ಳಾಪುರ: ಅಂಬೇಡ್ಕರ್ ಚಿಂತನೆಗಳು ಇಂದು ಕೇವಲ ಭಾಷಣ-ಉಪದೇಶಗಳಿಗಷ್ಟೇ ಸೀಮಿತಗೊಂಡಿರುವುದು ಈ ದೇಶದ ದುರಂತನಿಜವಾದ ಅರ್ಥದಲ್ಲಿ ಭವಿಷ್ಯದ ಭಾರತದ ನಿರ್ಮಾತೃ ಎನಿಸಿದ್ದ ಅಂಬೇಡ್ಕರ್ ವಿಚಾರಧಾರೆ ಕಾರ್ಯರೂಪಕ್ಕೆ ಬಾರದಿರುವುದು ವಿಷಾದನೀಯ ಎಂದು ಹಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ.
ಸಂವಿಧಾನ ಶಿಲ್ಪಿ, ಭಾರತರತ್ನ ಡಾ.ಬಿ.ಆರ್.ಅಂಬೇಡ್ಕರ್  ಪರಿನಿಬ್ಬಾಣ ದಿನಾಚರಣೆ ಅಂಗವಾಗಿ ಶುಕ್ರವಾರ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪುತ್ಥಳಿಗೆ ಹಲವು ಸಂಘಟನೆಗಳು ಮತ್ತು ರಾಜಕೀಯ ಪಕ್ಷಗಳ ನೇತೃತ್ವದಲ್ಲಿ ಮಾಲಾರ್ಪಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಗಣ್ಯರು, ದೇಶದಲ್ಲಿ ಇಂದು ಅಸಮಾನತೆಯ ವಿಷಬೀಜ ಸಂಪೂರ್ಣವಾಗಿ ಮರೆಯಾಗಿಲ್ಲ. ಅಸ್ಪಶ್ಯತೆ ಇಂದಿಗೂ ಜೀವಂತವಾಗಿರುವುದಕ್ಕೆ ಸಾಂವಿಧಾನಿಕ ವಿಚಾರಗಳ ಅನುಷ್‌ಠಾನದ ವೈಫಲ್ಯವೇ ಕಾರಣ. ದುಡಿಯುವ ಮತ್ತು ಶೋಷಿತ ವರ್ಗದ ದನಿ ಕೇವಲ ಓಟ್‌ಬ್ಯಾಂಕ್‌ಗಳಾಗಿ ಮಾತ್ರ ಬಳಕೆಯಾಗುತ್ತಿರುವುದು ಆತಂಕಕಾರಿ. ಈ ದೇಶದಲ್ಲಿ ಸಮಾನ ಹಕ್ಕು, ಸಮಾನ ಅವಕಾಶ ಮತ್ತು ಸಮಾನ ಮಾನ್ಯತೆ ಎಲ್ಲ ವರ್ಗಗಳಿಗೆ ದೊರೆಯಬೇಕಿದೆ. ಆಗ ಮಾತ್ರ ಅಂಬೇಡ್ಕರ್ ಕನಸು ನನಸಾಗಲು ಸಾಧ್ಯ ಎಂದರು.
ಛಲವಾದಿ ಮಹಾಸಭಾ: ನೇತೃತ್ವದಲ್ಲಿ ಪುತ್ಥಳಿಗೆ ಮಾಲಾರ್ಪಣೆ ಮಾಡಲಾಯಿತು. ಅಧ್ಯಕ್ಷ ಲಿಂಗನಹಳ್ಳಿ ಜಿ.ಲಕ್ಷ್ಮೀಪತಿ, ಮುಖಂಡರಾದ ಚಂದ್ರಪ್ಪ, ಮಹದೇವಯ್ಯ, ಬಾಲಕೃಷ್ಣ, ಸಿ.ಹನುಮಂತರಾಯಪ್ಪ, ತಿಮ್ಮರಾಯಪ್ಪ ಮತ್ತಿತರರು ಹಾಜರಿದ್ದರು. ಮಹಾಸಭಾದ ನೇತೃತ್ವದಲ್ಲಿ ಇದೇ ಸಂದರ್ಭದಲ್ಲಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.
ತಾಲೂಕು ಕಾಂಗ್ರೆಸ್ ಘಟಕ: ನೇತೃತ್ವದಲ್ಲಿ ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ,  ಡಿ.ವಿ.ಅಶ್ವತ್ಥಪ್ಪ, ಜಿ.ಲಕ್ಷ್ಮೀಪತಿ,  ಸಿ.ಜಿ.ನಾಗೇಶ್, ಎಚ್.ಎಸ್.ರೇವತಿ, ಆಲ್ತಾಫ್, ಆಂಜನಮೂರ್ತಿ ಸೇರಿದಂತೆ ಅನೇಕರು ಭಾಗವಹಿಸಿ ಮಾಲಾರ್ಪಣೆ ಮಾಡಿದರು.
ಮಾದಾರ ಚನ್ನಯ್ಯ ಮಹಾಸಭಾ, ದಲಿತ ಸಂಘಟನೆಗಳ ಒಕ್ಕೂಟ, ದಲಿತ ವಿಮೋಚನಾ ಸೇನೆ, ದಲಿತ ಸಂಘರ್ಷ ಸಮಿತಿ, ಪಿವಿಸಿ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ ಸೇರಿದಂತೆ ಹಲವು ದಲಿತ ಸಂಘಟನೆಗಳು, ವಿವಿಧ ರಾಜಕೀಯ ಪಕ್ಷಗಳ  ನೇತೃತ್ವದಲ್ಲಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ನಮನ ಸಲ್ಲಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.