'ನೆಲ್ಸನ್ ಮಂಡೇಲಾ ಆಧುನಿಕ ಜಗತ್ತಿನ ಶಾಂತಿದೂತ'
ದೊಡ್ಡಬಳ್ಳಾಪುರ: ಆಧುನಿಕ ಜಗತ್ತಿನ ಶಾಂತಿದೂತ, ಸತ್ಯಾಗ್ರಹಿ, ದಕ್ಷಿಣ ಆಫ್ರಿಕಾದ ಸ್ವಾತಂತ್ರ್ಯ ಸೇನಾನಿ ನೆಲ್ಸನ್ ಮಂಡೇಲಾ ಮಹಾತ್ಮ ಗಾಂಧಿಯ ನಂತರ ಅಹಿಂಸೆ ಮತ್ತು ಶಾಂತಿ ಪ್ರತಿಪಾದನೆಗೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಮಹತ್ವದ ಮಾನವತಾವಾದಿ ಎಂದು ಇಲ್ಲಿನ ಹಲವು ಸಂಘಟನೆಗಳು ಅಭಿಪ್ರಾಯಪಟ್ಟಿವೆ. ನೆಲ್ಸನ್ ಮಂಡೇಲಾ ಸಾರ್ವಕಾಲಿಕ ಮಹಾನ್ ನಾಯಕ. ವರ್ಣಭೇದ ನೀತಿಯ ವಿರುದ್ಧದ ಅವರ ಹೋರಾಟ ಅವಿಸ್ಮರಣೀಯ ದಶಕಗಳ ಕಾಲ ವರ್ಣಭೇದ ನೀತಿಯ ವಿರುದ್ಧ ಹೋರಾಡಿದ್ದ ಅವರು, 27 ವರ್ಷಗಳ ಕಾಲ ಜೈಲುವಾಸ ಅನುಬವಿಸಿದ್ದರು. ಜೈಲಿನಿಂದ ಬಿಡುಗಡೆಯಾಗಿ ಬಂದ ಬಳಿಕ ಬಿಳಿಯ ಅಲ್ಪಸಂಖ್ಯಾತರ ಆಳ್ವಿಕೆಯನ್ನು ಆಫ್ರಿಕಾದಲ್ಲಿ ಅಂತ್ಯಗೊಳಿಸಿ ನೀಗ್ರೋಗಳಿಗೆ ಅಧಿಕಾರ ತಂದಿತ್ತ ಮಹಾನ್ ನಾಯಕ. 1944ರಷ್ಟು ಹಿಂದೆಯೇ ಹೋರಾಟದ ಹಾದಿ ತುಳಿದಿದ್ದ ಅವರು ಆಫ್ರಿಕಾದ ಮೂಲವಾಸಿಗಳ ಅಸ್ತಿತ್ವದ ಬಗ್ಗೆ ಜಗತ್ತು ಗುರ್ತಿಸುವ ಹೋರಾಟ ನಡೆಸಿದ್ದರು ಎಂದು ಸ್ಮರಿಸಲಾಯಿತು.
ಸಂತಾಪ: ಮಂಡೇಲಾ ನಿಧನಕ್ಕೆ ಇಲ್ಲಿನ ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಮುಖಂಡ ರಾಜುಸಣ್ಣಕ್ಕಿ, ಛಲವಾದಿ ಮಹಾಸಭಾದ ಅಧ್ಯಕ್ಷ ಜಿ.ಲಕ್ಷ್ಮೀಪತಿ, ಪ್ರೊ.ಚಂದ್ರಪ್ಪ, ತಾ.ಕಸಾಪ ಅಧ್ಯಕ್ಷ ರವಿಕಿರಣ್, ಕಾರ್ಯದರ್ಶಿ ಪ್ರಕಾಶ್, ಪ್ರವೀಣ್, ಕೋಶಾಧ್ಯಕ್ಷ ಚಿಕ್ಕಣ್ಣ, ಕರ್ನಾಟಕ ದಲಿತ ಸಂಘಟನೆಗಳ ಒಕ್ಕೂಟ, ಪ್ರಜಾ ವಿಮೋಚನಾ ಚಳವಳಿ, ಕನ್ನಡ ಜಾಗೃತ ಪರಿಷತ್ತು, ಪತ್ರಕರ್ತರ ಟ್ರಸ್ಟ್, ಹಲವಾರು ದಲಿತ, ಪ್ರಗತಿಪರ ಸಂಘಟನೆಗಳು ಸಂತಾಪ ಸೂಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

