28 ರೌಡಿಗಳು ಪೊಲೀಸ್ ವಶಕ್ಕೆ: ಬಿ. ರಮೇಶ್
ನೆಲಮಂಗಲ: ತಾಲೂಕಿನ ನಾಲ್ಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ರೌಡಿ ಪಟ್ಟಿಯಲ್ಲಿರುವ 28 ರೌಡಿಗಳನ್ನು ಶುಕ್ರವಾರ ರಾತ್ರಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವುದಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್ ತಿಳಿಸಿದ್ದಾರೆ.
ಬಂದಿತ 28 ರೌಡಿಗಳನ್ನು ಖಾಸಿಂ, ಎಚ್.ಎಸ್.ಉಮೇಶ್, ಶರವಣ, ಮೋಹನ್ಕುಮಾರ್ ಅಲಿಯಾಸ್ ಕುಳ್ಳ, ನಾಗರಾಜು, ಬಸವರಾಜು ಅಲಿಯಾಸ್ ಅಪ್ಪಿ, ಜಿ.ಮೂರ್ತಿ, ಜಬಿ, ಜಪ್ರುಲ್ಲಾ, ಯತೀಶ್, ಮಂಜುನಾಥ, ಗೋವಿಂದರಾಜು, ಹೇಮಂತ್ಕುಮಾರ್ ಅಲಿಯಾಸ್ ಹುಸ್ಕೂರು ಶಿವ, ದಿಲೀಪ್, ರಾಜು, ಕೆಂಪರಾಜು, ಮಹಾದೇವಯ್ಯ, ಮಂಜುನಾಥ್, ಧರ್ಮಪ್ರಕಾಶ್, ನಿಂಗೇಗೌಡ, ಕೆಂಪರಾಜು, ಎಚ್.ಡಿ.ಕಿರಣ್, ಮುನಿರಾಜು, ನಾಗರಾಜು, ಕೆಂಪರಾಜು, ಗಿರೀಶ್, ಮೌಲಾ, ಯತೀಶ್ ಅಲಿಯಾಸ್ ಬೆಟ್ಟಹಳ್ಳಿ ಯತೀಶ್ ಎಂದು ಗುರುತಿಸಲಾಗಿದೆ. ತಾಲೂಕಿನ ಪಟ್ಟಣ, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಕೆಲ ರೌಡಿಗಳು ಮಾರಕಾಸ್ತ್ರ, ರಿವಾಲ್ವರ್ಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
ತಾಲೂಕಿನ ಪೊಲೀಸ್ ಠಾಣೆ ವ್ಯಾಪ್ತಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಲ್ಲಿ ದಿಢೀರ್ ವಿಶೇಷ ತಂಡ ರಚಿಸಿ ಈ ಕಾರ್ಯಾಚರಣೆ ನಡೆಸಿದ್ದೇವೆ ಎಂದರು.
28 ಜನ ರೌಡಿಗಳನ್ನು ವೀಕ್ಷಿಸಲು ನೂರಾರು ಜನ ಸಾರ್ವಜನಿಕರು ಠಾಣೆ ಮುಂಭಾಗ ಕುತೂಹಲದಿಂದ ಗುಂಪುಕೂಡಿದ್ದರು
ಕಾರ್ಯಾಚರಣೆಯಲ್ಲಿ ಅಡಿಷನಲ್ ಎಸ್ಪಿ ಅಬ್ದುಲ್ ಅಹಮದ್, ಡಿವೈಎಸ್ಪಿ ಆರ್.ಮಲ್ಲೇಶ್, ಸರ್ಕಲ್ ಇನ್ಸ್ಪೆಕ್ಟರ್ ಪರಮೇಶ್ವರ್, ಸಬ್ ಇನ್ಸ್ಪೆಕ್ಟರ್ಗಳಾದ ಬಾಲಾಜಿ ಬಾಬು, ನವೀನ್ಕುಮಾರ್, ಚೇತನ್ಕುಮಾರ್, ರವಿ ಸೇರಿದಂತೆ ಸಿಬ್ಬಂದಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

