ಬೆಂಗಳೂರು ಗ್ರಾಮಾಂತರ

ಮೋದಿ ಟೀಕಾಕಾರರಿಗೆ ಮತದಾರನ ಸ್ಪಷ್ಟ ಉತ್ತರ

Published On :

ಕ.ಪ್ರ. ವಾರ್ತೆ ,   ಆನೇಕಲ್ಲು ,   ಡಿ.9
ಬಿಜೆಪಿಗೆ ಅತಿ ಹೆಚ್ಚಿನ ಮತ ನೀಡುವ ಮೂಲಕ ಉತ್ತರ ಭಾರತದ ಜನತೆ ಆಶೀರ್ವಾದ ಮಾಡಿದ್ದಾರೆ. ಇದು ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದ್ದು ರಾಜ್ಯದಲ್ಲೂ ಬಿಜೆಪಿ ಕಹಳೆ ಮತ್ತೆ ಮೊಳಗಲಿದೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದ್ದಾರೆ.
ಅವರು ಆನೇಕಲ್ ತಾಲೂಕು ಬಿಜೆಪಿ ಘಟಕದ ಕಾರ್ಯಕರ್ತರು ಉತ್ತರ ಭಾರತದ 4 ರಾಜ್ಯಗಳಲ್ಲಿ ಪಕ್ಷ ಜಯಭೇರಿ ಬಾರಿಸಿದ್ದಕ್ಕೆ ಸಿಹಿ ಹಂಚಿ ಮಾತನಾಡಿ ಬಿಜೆಪಿಯ ಉತ್ತಮ ಅಡಳಿತ ಫಲಿತಾಂಶ ರೂಪದಲ್ಲಿ ಪ್ರಕಟವಾಗಿದೆ. ಅಖಂಡ ಭಾರತ ದೇಶವನ್ನು ಒಗ್ಗೂಡಿಸುವ ಶಕ್ತಿ ಬಿಜೆಪಿ ಪಕ್ಷಕ್ಕೆ ಮಾತ್ರ ಇದೆ ಎಂದರು.
ಮೋದಿ ಅಲೆ: ಈ ಚುನಾವಣೆಯಲ್ಲಿ ಆಯಾ ರಾಜ್ಯಗಳ ಪಾತ್ರದ ಮಹತ್ವದ ಜೊತೆಗೆ ಭವಿಷ್ಯದ ಪ್ರಧಾನಿ ನರೇಂದ್ರ ಮೋದಿ ಅವರ ಅಲೆಯೂ ಇದೆ ಎಂದರು.  ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲಿ 5 ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ರಾಜ್ಯದಲ್ಲಿ ಕಾಂಗ್ರೆಸ್  ಆಡಳಿತ ಜನರಲ್ಲಿ ಬೇಸರ ತರಿಸಿದ್ದು ಸಂಸತ್ ಚುನಾವಣೆಯಲ್ಲಿ ಬಿಜೆಪಿ 18ಕ್ಕೂ ಹೆಚ್ಚಿನ ಸ್ಥಾನ ಗೆಲ್ಲಲಿದೆ. ದಕ್ಷಿಣ ಭಾರತದ ಬಹತೇಕ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಮೋದಿ ಅಲೆ ಪ್ರಬಲವಾಗಿದ್ದು ಮುಂದಿನ ದಿನದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ  ರಚನೆಯಾಗುವುದು ನಿಶ್ಚಿತ ಎಂದರು.
ಅರವಿಂದ ಕೇಜ್ರೀವಾಲ ಅವರ ಸಾಧನೆ ಶ್ಲಾಘನೀಯ ಎಂದ ಅವರು ಆಮ್ ಆದ್ಮಿ ಇಲ್ಲದಿದ್ದಲ್ಲಿ ದೆಹಲಿ ಗದ್ದುಗೆ ಬಿಜೆಪಿ ವಶವಾಗುತ್ತಿತ್ತು ಎಂದರು. ಪುರಸಭಾ ಸದಸ್ಯರಾದ ಕೆ. ನಾಗರಾಜು, ನರಸಿಂಹರೆಡ್ಡಿ, ಸವಿತಾ ಶ್ರೀನಿವಾಸ್, ಮುಖಂಡರಾದ ಓಂಕಾರ್, ದಿನ್ನೂರು ರಾಜು, ಜಿಪಂ ನಾರಾಯಣಪ್ಪ, ಬಿಜೆಪಿ ಅಧ್ಯಕ್ಷರಾದ ಅಂಜಿನಪ್ಪ, ಟೌನ್ ಶಿವರಾಂ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.