ಚಿಣ್ಣರಿಗಾಗಿ ವೇಷಭೂಷಣ ಸ್ಪರ್ಧೆ
ಕನಕಪುರ: ಲಯನ್ಸ್ ಮತ್ತು ಲಿಯೋ ಕ್ಲಬ್ ಕನಕಪುರ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ಚಿಣ್ಣರಿಗಾಗಿ ವೇಷಭೂಷಣ ಸ್ಪರ್ಧೆ ಕಾರ್ಯಕ್ರಮ ಇಲ್ಲಿನ ಲಯನ್ಸ್ ಶಾಲಾ ಸಭಾಂಗಣದಲ್ಲಿ ನಡೆಯಿತು.
ಸಮಾರಂಭದ ಉದ್ಘಾಟನೆಯನ್ನು ಲಯನ್ಸ್ಅಧ್ಯಕ್ಷ ಕೆ.ಜಿ. ಸತೀಶ್ನೆರವೇರಿಸಿದರು. ಲಿಯೋ ಅಧ್ಯಕ್ಷ ವಿಶ್ವಕಾಂತ್ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ವೇಷಭೂಷಣ ಸ್ಪರ್ಧೆಗಳ ನಾಲ್ಕು ವಿಭಾಗಗಳಲ್ಲಿ 60 ಕ್ಕೂ ಹೆಚ್ಚು ಚಿಣ್ಣರು ಉತ್ಸಾಹದಿಂದ ಪಾಲ್ಗೊಂಡಿ ವಿವಿಧ ರೀತಿಯ ವೇಷಭೂಷಣಗಳನ್ನು ಪ್ರದರ್ಶಿಸಿ ರಂಜಿಸಿದರು. ಸ್ಪರ್ಧೆಯ ತೀರ್ಪುಗಾರರಾಗಿ ಪತ್ರಕರ್ತ ಜಿ.ಎನ್. ಸತೀಶ್, ಶಿಕ್ಷಕ ರಾಜಶೇಕರ ಪಾಟೀಲ್, ಶ್ಯಾಮಲಾ ಅನಂತಸ್ವಾಮಿ ಕಾರ್ಯನಿರ್ವಹಿಸಿದರು. ಸಮಾರಂಭದಲ್ಲಿ ಸ್ಥಳದಲ್ಲಿಯೇ ಚಿತ್ರಬರೆಯುವ ಸ್ಪರ್ಧೆಯಲ್ಲಿ ವಿಜೇತರಾದ ಮಾಧ್ಯಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಗೋಪಾಲರಾಜು, ಮರಸಪ್ಪರವಿ, ಬಿಳಿಗಿರಿ ರಂಗಸ್ವಾಮಿ ಬಹುಮಾನಗಳನ್ನು ವಿತರಿಸಿದರು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಕಿರುತೆರೆ ಬಾಲನಟಿ ಬೇಬಿ ಪ್ರಷ್ಮಾ (ಚುಕ್ಕಿ-ಧಾರಾವಹಿ ಖ್ಯಾತಿ),ಸುಹಾನಿಯಾಖಾನ್, ಮಾಜಿ ಲಯನ್ಸ್ ಅಧ್ಯಕ್ಷ ಚಂದ್ರಶೇಖರ್, ಪರಮೇಶ್, ಬಾಬು ಪಾಲ್ಗೊಂಡಿದ್ದರು. ಕಾರ್ಯದರ್ಶಿ ಯೋಗೀಶ್ಬಾಬು ಸ್ವಾಗತಿಸಿದರು. ಎಂ.ಆರ್. ಪ್ರಶಾಂತ್ ನಿರೂಪಿಸಿದರು. ಯಶವಂತಕುಮಾರ್ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

