ವಾಹನ ಡಿಕ್ಕಿ: ವ್ಯಕ್ತಿ ಸ್ಥಳದಲ್ಲೇ ಸಾವು
ರಾಮನಗರ: ಚಲಿಸುತ್ತಿದ್ದ ಬೈಕ್ಗೆ ಟಾಟಾ ಏಸ್ ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕಿನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಕೋಡಿಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಕನಕಪುರ ತಾಲೂಕಿನ ಅರಳಿಮರದದೊಡ್ಡಿ ಗ್ರಾಮದ ವಾಸಿ ಆರ್.ರಮೇಶ ಮೃತ ವ್ಯಕ್ತಿ. ರಮೇಶ ತನ್ನ ಚಿಕ್ಕಪ್ಪ ಗೋವಿಂದಯ್ಯ ಜತೆ ಕೋಡಿಹಳ್ಳಿಯಿಂದ ಮಾತ್ರೆಗಳನ್ನು ಖರೀದಿಸಿ ಹುಣಸನಹಳ್ಳಿ-ಕೋಡಿಹಳ್ಳಿ ರಸ್ತೆಯ ಕೆಇಬಿ ಕಚೇರಿ ಬಳಿ ವಾಪಸಾಗುತ್ತಿದ್ದಾಗ ಅರಳಿಮರದದೊಡ್ಡಿ ಎದುರು ಬಂದ ಟಾಟಾ ಏಸ್ ಗುಡ್ಸ್ ವಾಹನ ಡಿಕ್ಕಿಯಾಗಿದೆ.
ಡಿಕ್ಕಿಯ ರಭಸಕ್ಕೆ ರಮೇಶ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಗೆ ಗೂಡ್ಸ್ ವಾಹನ ಚಾಲಕನ ನಿರ್ಲಕ್ಷ್ಯವೇ ಕಾರಣ ಎಂದು ಗೋವಿಂದಯ್ಯ ಅವರು ಕೋಡಿಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
19ಕ್ಕೆ ದೇವನಹಳ್ಳಿಯಲ್ಲಿ ಮುಖ್ಯ ಶಿಕ್ಷಕರ ಸಭೆ
ಸೂಲಿಬೆಲೆ: 2013 ಸಾಲಿನಲ್ಲಿ ಎಸ್ ಎಸ್ಎಲ್ಸಿ ಪರೀಕ್ಷೆಯ ಶೇ.100 ರಷ್ಟು ಫಲಿತಾಂಶವನ್ನು ಪಡೆದು ಸರ್ಕಾರಿ ಹಾಗೂ ಅನುದಾನಿತ ಪ್ರೌಢಶಾಲೆಗಳ ಮುಖ್ಯ ಶಿಕ್ಷಕರು ಸಭೆಯನ್ನು ಡಿ.19ರಂದು ದೇವನಹಳ್ಳಿ ಗುರುಭವನದಲ್ಲಿ ಕರೆಯಲಾಗಿದೆ ಎಂದು ಗ್ರಾಮಾಂತರ ಜಿಲ್ಲಾ ಉಪನಿರ್ದೇಶಕ (ಆಡಳಿತ) ಕೆ.ಎಂ. ಗುರುರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ
ಸೂಲಿಬೆಲೆ: ಪಟ್ಟಣದ ಗ್ರಾಪಂ ಆವರಣದಲ್ಲಿ ಸೋಮವಾರ ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಗೆ ಸಂಬಂಧಪಟ್ಟಂತೆ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆಯನ್ನು ಹಮ್ಮಿಕೊಳ್ಳಲಾಗಿತ್ತು.
ಪಟ್ಟಣ ಮಹಾತ್ಮಗಾಂಧಿ ಖಾತರಿ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪಟ್ಟಿ, ಅಂದಾಜು ವೆಚ್ಚ,ಬಿಡುಗಡೆಯಾದ ಹಣ ಮತ್ತಿತ್ತರು ವಿವರಗಳನ್ನು ಗ್ರಾಮಸಭೆಯಲ್ಲಿ ಚರ್ಚಿಸಿ ಸದಸ್ಯರು ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ, ಪಿಡಿಒ ಸುಂದರ್, ಕಾರ್ಯದರ್ಶಿ ಮುನಿರಾಜ್ ಗ್ರಾಪಂ ಮಾಜಿ ಅಧ್ಯಕ್ಷ ಜನಾರ್ದನ್ ರೆಡ್ಡಿ, ಮುನಿರಾಜ್, ವೆಂಕಟೇಗೌಡ ಹಾಗೂ ಗ್ರಾಪಂ ಸದಸ್ಯರು,ಸಿಬ್ಬಂದಿ ಹಾಜರಿದ್ದರು.
ಕೆ.ಆರ್.ಅಶ್ವತ್ಥಕುಮಾರ್ ಅಧಿಕಾರ ಸ್ವೀಕಾರ
ನೆಲಮಂಗಲ: ತಾಲೂಕಿನ ಕಂದಾಯ ಇಲಾಖೆಯ ಕಸಬಾ ಹೋಬಳಿ 2ರ ರಾಜಸ್ವ ನಿರೀಕ್ಷಕರಾಗಿ ಕೆ.ಆರ್.ಅಶ್ವತ್ಥಕುಮಾರ್ ಸೋಮವಾರ ತಾಲೂಕು ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.
ತಾಲ್ಲೂಕಿನ 3 ಹೋಬಳಿಗಳಲ್ಲಿ 3 ಜನ ರಾಜಸ್ವ ನಿರೀಕ್ಷಕರು ಈವರೆಗೂ ಕಾರ್ಯನಿರ್ವಹಿಸುತ್ತಿದ್ದರು. ಕಂದಾಯ ಇಲಾಖೆಯಲ್ಲಿನ ಕಡತಗಳ ವಿಲೇವಾರಿ ಹೆಚ್ಚಾಗುತ್ತಿದ್ದರಿಂದ ವಿಳಂಬ ರೀತಿಯಲ್ಲಿ ಕೆಲಸಗಳು ಸಾಗುತ್ತಿರುವುದರಿಂದ ತಾಲೂಕಿನ 3 ಹೋಬಳಿಗಳನ್ನು ವಿಂಗಡಿಸಿ ಹೋಬಳಿ 1 ಮತ್ತು 2 ಎಂದು ವಿಭಾಗಗೊಳಿಸಿ 6 ಜನ ರಾಜಸ್ವ ನಿರೀಕ್ಷಕರು ಕಾರ್ಯ ನಿರ್ವಹಿಸಲು ಸರ್ಕಾರ ಆದೇಶ ನೀಡಿದೆ. ಅದರಂತೆ ತಾಲೂಕಿನ ಸೋಂಪುರ 2 ರ ರಾಜಸ್ವ ನಿರೀಕ್ಷಕ ಹಾಗೂ ತ್ಯಾಮಗೊಂಡ್ಲು 2ರ ರಾಜಸ್ವ ನಿರೀಕ್ಷಕ ಹುದ್ದೆಗಳನ್ನು ಕಾರ್ಯನಿರ್ವಹಿಸುತ್ತಿವೆ.
ಗ್ರಾಮಲೆಕ್ಕಾಧಿಕಾರಿಗಳಾದ ಸುದೀಪ್, ಲೋಕೇಶ್, ಅಮಾನುಲ್ಲಾ, ಕುಮಾರಸ್ವಾಮಿ, ಕಮಲೇಶ್, ಜಯಕುಮಾರ್, ಮುನಿರಂಗಪ್ಪ ಇದ್ದರು.
ಸರ್ಕಾರಿ ಸೌಲಭ್ಯ ಬಳಸಿ ಶೈಕ್ಷಣಿಕ ಪ್ರಗತಿ ಸಾಧಿಸಿ
ಸೂಲಿಬೆಲೆ: ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಪ್ರಗತಿಗಾಗಿ ಹತ್ತಾರು ಸೌಲಭ್ಯಗಳನ್ನು ನೀಡುತ್ತಿದ್ದು, ಇದನ್ನು ಸದ್ಬಳಿಸಿಕೊಂಡು ಪ್ರಗತಿ ಕಾಣಬೇಕು ಎಂದು ಗ್ರಾಪಂ ಅಧ್ಯಕ್ಷ ಕೆ.ನಾರಾಯಣಪ್ಪ ಸಲಹೆ ನೀಡಿದ್ದಾರೆ.
ಸೂಲಿಬೆಲೆ ಜನತಾ ಕಾಲೋನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಸೋಮವಾರ ನಡೆದ 8 ನೇ ತರಗತಿ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಣಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ವೇದಿಕೆ ಕಾರ್ಯದರ್ಶಿ ಪ್ರಶಾಂತ್ ಮಾತನಾಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮೌಲ ಅಧ್ಯಕ್ಷತೆ ವಹಿಸಿದರು.
ಎಸ್ಡಿಎಂಸಿ ಮಾಜಿ ಅಧ್ಯಕ್ಷ ಬಾಬಾಜಾನ್, ಉಪಾಧ್ಯಕ್ಷೆ ದೀಪಾ, ಮುಖ್ಯ ಶಿಕ್ಷಕ ರಾಮನಗೌಡ ಸೇರಿದಂತೆ ಶಾಲಾಭಿವೃದ್ಧಿ ಸಮಿತಿ ಸದಸ್ಯರು, ಪೋಷಕರು ಭಾಗವಹಿಸಿದ್ದರು.
ವಿನಾಯಕ ಸ್ವಾಮಿ ಬ್ರಹ್ಮರಥೋತ್ಸವ
ನೆಲಮಂಗಲ: ಪಟ್ಟಣದ ಸೊಂಡೆಕೊಪ್ಪ ರಸ್ತೆಯ ಶ್ರೀ ವಿನಾಯಕ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಡಿ. 17ರ ಮಂಗಳವಾರ ಮಧ್ಯಾಹ್ನ 12-30 ರಿಂದ 1-30 ಗಂಟೆಗೆ ಬಯಲು ಉದ್ಭವ ಶ್ರೀ ವಿನಾಯಕ ಸ್ವಾಮಿಯ ಬ್ರಹ್ಮ ರಥೋತ್ಸವ (ಕಡಲೆಕಾಯಿ ಪರಿಷೆ)ಯನ್ನು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

