ಇಂದು ಬೊಂಬೆನಗರಿಯಲ್ಲಿ ಕರವೇ ಬೊಂಬೆನಾಡು ಉತ್ಸವ
ಚನ್ನಪಟ್ಟಣ: ಕರ್ನಾಟಕ ರಕ್ಷಣಾ ವೇದಿಕೆಯ ಕರ್ಮಭೂಮಿ ಎನಿಸಿರುವ ಈ ತಾಲೂಕಿನ ಕನ್ನಡ ಸೇನಾನಿಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದ ಕರವೇ ಡಿ.21ರಂದು ಬೊಂಬೆನಾಡು ಉತ್ಸವವನ್ನು ಹಮ್ಮಿ ಕೊಂಡಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಎನ್.ಸತ್ಯನಾರಾಯಣ ತಿಳಿಸಿದರು. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಚನಾಡಿದ ಅವರು, ಕರವೇ 13 ವರ್ಷಗಳ ಹೋರಾಟದ ಹಾದಿಯಲ್ಲಿ ಚನ್ನಪಟ್ಟಣ ತಾಲೂಕು ರಕ್ಷಣಾ ವೇದಿಕೆ ಇರಿಸಿದ ಹೆಜ್ಜೆ ಮಹತ್ತರ ವಾದುದು ಎಂದರು. ರಕ್ಷಣಾ ವೇದಿಕೆ ರಾಜಧಾನಿಯಲ್ಲಿ ಕನ್ನಡದ ಪತಾಕೆ ಹಾರಿಸಲು ನಡೆಸಿದ ದಿಟ್ಟ ಹೋರಾಟದಲ್ಲಿ ಈ ತಾಲೂಕಿನ ಕಾರ್ಯಕರ್ತರು ಪ್ರಮುಖ ಪಾತ್ರ ವಹಿಸಿದ್ದಾರೆ. ಡಿ.21 ರಂದು ಜಾನಪದ ಕಲಾ ಮೇಳದೊಂದಿಗೆ ಕೆಎಸ್ಐಸಿ ಮಿಲ್ನಿಂದ ಕೊಲ್ಲಾಪುರದಮ್ಮನ ದೇವಾಲಯ ವರೆಗೆ ಮೆರವಣಿಗೆ ಹಮ್ಮಿಕೊಂಡಿದ್ದು, ಮೆರವಣಿಗೆಗೆ ಶಾಸಕ ಸಿ.ಪಿ.ಯೋಗೇಶ್ವರ್ ಚಾಲನೆ ನೀಡಲಿದ್ದಾರೆ. ಬಳಿಕ ಕೊಲ್ಲಾಪುರದಮ್ಮನ ದೇವಾಲಯದ ಆವರಣದಲ್ಲಿ ನಗೆಹಬ್ಬ ಹಾಗೂ ಬೊಂಬೆನಾಡು ಉತ್ಸವದ ಕಾರ್ಯಕ್ರಮ ನಡೆಯಲಿದೆ ಎಂದರು. ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅಧ್ಯಕ್ಷತೆ ವಹಿಸಲಿದ್ದು, ಸಂಸದ ಡಿ.ಕೆ.ಸುರೇಶ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ, ಜಿ.ಪಂ ಅಧ್ಯಕ್ಷ ರಾಜಣ್ಣ, ಮಾಜಿ ಶಾಸಕ ಎಂ.ಸಿ.ಅಶ್ವತ್ಥ್, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರವಿಕುಮಾರ್ಗೌಡ, ಬಮೂಲ್ ಅಧ್ಯಕ್ಷ ಮಂಜುನಾಥ್, ಬಮೂಲ್ ನಿರ್ದೇಶಕ ಹನುಮಂತೇಗೌಡ, ದಿಬ್ಬೂರು ಜಯಣ್ಣ, ಒಕ್ಕಲಿಗರ ಸಂಘದ ನಿರ್ದೇಶಕ ಮಲ್ಲಿಕಾರ್ಜುನಗೌಡ, ಜಯಮುತ್ತು, ಮರಿದೇವರು, ನಿವೃತ್ತ ವಾಯುಸೇನಾಧಿಕಾರಿ ನಾಗೇಶ್, ಯೋಗಾ ರಮೇಶ್ , ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ಕುಮಾರ್ ಉಪಸ್ಥಿತರಿರುತ್ತಾರೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

