ಘಾಟಿ ಸುಬ್ರಹ್ಮಣ್ಯಕ್ಕೆ ನಾಗದಳ ಪಾದಯಾತ್ರೆ
ದೊಡ್ಡಬಳ್ಳಾಪುರ: ತಾಲೂಕಿನ ಸುಪ್ರಸಿದ್ಧ ಯಾತ್ರಾ ಸ್ಥಳವಾಗಿರುವ ಘಾಟಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಪ್ರತಿವರ್ಷದಂತೆ ಇಲ್ಲಿನ ನಾಗದಳ ನೇತೃತ್ವದಲ್ಲಿ ಪಾದಯಾತ್ರೆ ಕಾರ್ಯಕ್ರಮ ಭಾನುವಾರ ನಡೆಯಿತು.
ಘಾಟಿ ಜಾತ್ರೆಗೆ ಮುನ್ನ ಪಟ್ಟಣದಿಂದ ಕಳೆದ ಕೆಲ ವರ್ಷಗಳಿಂದ ಒಂದು ದಿನದ ಪಾದಯಾತ್ರೆ ಕಾರ್ಯಕ್ರಮ ನಡೆದುಕೊಂಡು ಬರುತ್ತಿದೆ. ಮಕ್ಕಳು, ಮಹಿಳೆಯರನ್ನೂ ಒಳಗೊಂಡಂತೆ ಹತ್ತಾರು ಜನ ಪಾದಯಾತ್ರಿಗಳು ಈ ಬಾರಿ ಭಾಗವಹಿಸಿದ್ದರು. ದಾರಿಯಲ್ಲಿ ಭಕ್ತಿಗೀತೆಗಳು ಮತ್ತು ಪರಿಸರಗೀತೆಗಳನ್ನು ಹಾಡುತ್ತಾ ಮುನ್ನಡೆದ ಯಾತ್ರಿಕರಿಗೆ ಕ್ಷೇತ್ರದಲ್ಲಿ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು.
ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ನಾಗದಳ ಸಂಚಾಲಕ ಸಿ.ನಟರಾಜ್, ಇದು ಧಾರ್ಮಿಕ ಮತ್ತು ಆರೋಗ್ಯದ ಹಿತಾಸಕ್ತಿಯಲ್ಲಿ ನಡೆಯುವ ಯಾತ್ರೆ. ಶ್ರೀಕ್ಷೇತ್ರಕ್ಕೆ ಪಾದಯಾತ್ರೆ ಮಾಡಿದರೆ ಪುಣ್ಯ ಬರುತ್ತದೆ ಎಂಬುದು ಆಸ್ತಿಕರ ನಂಬಿಕೆಯಾದರೆ, ಪಾದಯಾತ್ರೆ ಅನೇಕ ಶಾರೀರಿಕ ಮತ್ತು ಮಾನಸಿಕ ರೋಗಗಳ ತಡೆಗೆ ಕಾರಣವಾಗುತ್ತದೆ ಎಂಬುದು ವೈಜ್ಞಾನಿಕ ನಂಬಿಕೆ. ಈ ಹಿನ್ನಲೆಯಲ್ಲಿ ಈ ಕಾರ್ಯಕ್ರಮ ಕಳೆದ ಕೆಲ ವರ್ಷಗಳಿಂದ ನಡೆಯುತ್ತಿದೆ. ಘಾಟಿ ಜಾತ್ರೆ ಸಮೀಪಿಸುವ ಸಂದರ್ಭದಲ್ಲಿ ಭಾನುವಾರದಂದು ಈ ಯಾತ್ರೆ ಆಯೋಜಿಸಲಾಗುತ್ತದೆ. ಸುಮಾರು 15 ಕಿ.ಮೀ ದೂರವನ್ನು ಜನ ನಡೆದು ಕ್ರಮಿಸಿ ದೇವರ ದರ್ಶನ ಪಡೆಯುತ್ತಾರೆ. ದಿನೇ ದಿನೇ ಭಕ್ತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ನಡೆಯುವುದನ್ನು ಮರೆತೇ ಹೋಗಿರುವ ಇಂದಿನ ಜನ ಈ ನೆಪದಲ್ಲಾದರೂ ಒಂದಿಷ್ಟು ದೂರ ನಡೆಯುವ ಸಾಹಸಕ್ಕೆ ಬರಲಿ ಎಂಬುದು ನಮ್ಮ ಉದ್ದೇಶ ಎಂದರು. ನಾಗದಳದ ಪದಾಧಿಕಾರಿಗಳು, ವಿವಿಧ ಸಂಘಟನಗಳ ಕಾರ್ಯಕರ್ತರು ಸೇರಿದಂತೆ ಹತ್ತಾರು ಮಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

