ವಿವೇಕವಾಣಿ ಸಾರ್ವಕಾಲಿಕ ಸತ್ಯ: ಎ. ನಾರಾಯಣಸ್ವಾಮಿ
ಆನೇಕಲ್ಲು: ಸ್ವಾಮಿ ವಿವೇಕಾನಂದರು ತಮ್ಮ ಗುರಿ ಸಾಧನೆ, ಶೌರ್ಯ ಹಾಗೂ ಸಮಯೋಚಿತ ನಿರ್ಧಾರಕ್ಕಾಗಿ ಲೋಕ ವಿಖ್ಯಾತರಾಗಿದ್ದಾರೆ ಎಂದು ಮಾಜಿ ಸಚಿವ ಎ. ನಾರಾಯಣಸ್ವಾಮಿ ತಿಳಿಸಿದರು. ಸ್ವಾಮಿ ವಿವೇಕಾನಂದರ 150ನೇ ಜಯಂತಿ ಅಂಗವಾಗಿ ರಾಜ್ಯಾದ್ಯಂತ ಸಂಚರಿಸುತ್ತಿರುವ ಶೌರ್ಯ ಸಂದೇಶ ರಥ ಯಾತ್ರೆಯನ್ನು ಆನೇಕಲ್ಲು ಪಟ್ಟಣಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಚಿಕಾಗೋ ವಿಶ್ವ ಧರ್ಮ ಸಮ್ಮೇಳನದಲ್ಲಿ ಸನಾತನ ಧರ್ಮದ ಸಂಸ್ಕೃತಿ, ಸಂಪ್ರದಾಯದ ಪರಿಚಾಯ ಮಾಡುವ ಮೂಲಕ ವಿಶ್ವಕ್ಕೆ ಭಾರತ ದೇಶದ ಮೌಲ್ಯವನ್ನು ಸಾರಿ ತಿಳಿಸಿದರು. ಅವರ ಎದೆ ಗುಂದದ ಶೌರ್ಯ, ಮುನ್ನುಗ್ಗುವ :ವಲ ವಾಕ್ಚಾತುರ್ಯವನ್ನು ಯುವ ಜನತೆ ಕರಗತ ಮಾಡಿಕೊಂಡು ಬಲಿಷ್ಠ ದೇಶ ನಿರ್ಮಾಣ ಮಾಡಬೇಕೆಂದರು. ವಿಶ್ವದ ಎದುರು ಇಂದಿನ ಭಾರತದ ಪ್ರತಿಷ್ಠಿತ ವ್ಯಕ್ತಿಗಳು ದೌರ್ಬಲ್ಯ ವ್ಯಕ್ತಪಡಿಸುತ್ತಿದ್ದು ಬದಲಾವಣೆಯ ಅವಶ್ಯಕತೆ ಇದೆ. ಯುವ ಜನತೆ ವಿವೇಕಾನಂದರ ಆತ್ಮ ಚರಿತ್ರೆ ಅರಿತು ಅದರಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು. ಬೆಂಗಳೂರು ರಾಮಕೃಷ್ಣ ಮಠದ ಸ್ವಾಮಿ ತ್ಯಾಗೀಶ್ವರಾನಂದ ಸ್ವಾಮೀಜಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ವಿವೇಕಾನಂದರ ಆತ್ಮ ಚರಿತ್ರೆಯ ಪರಿಚಯ ಹಾಗೂ ದೇಶ ವಿದೇಶಗಳ ಸಂಚಾರದಲ್ಲಿ ವಿವೇಕಾನಂದರು ಎದುರಿಸಿದ ಘಟನಾವಳಿ ವಿವರಿಸಿ ವಿದ್ಯಾರ್ಥಿಗಳಲ್ಲಿ ದೇಶ ಪ್ರೇಮ,ಧರ್ಮ ಪ್ರೇಮ, ತಾಯಿ ತಂದೆಯರು ಹಾಗೂ ಗುರು ಹಿರಿಯರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

