ಬೆಂಗಳೂರು ಗ್ರಾಮಾಂತರ

ಟೋಲ್ ಪ್ರಾರಂಭ; ವಾಹನ ಚಾಲಕರಿಗೆ ದಿಢೀರ್ ಶಾಕ್

Published On :

ಹೊಸಕೋಟೆ: ಪಟ್ಟಣದ ಬಳಿ ಲ್ಯಾನ್ಕೊ ಸಂಸ್ಥೆ ಟೋಲ್ ಸಂಗ್ರಹಣೆಯನ್ನು ಡಿ.20ರ ರಾತ್ರಿಯಿಂದಲೇ ಪ್ರಾರಂಭಿಸಿದೆ.
ಡಿ.4 ರಂದೇ ಟೋಲ್ ಸಂಗ್ರಹಣೆಯನ್ನು ಶೀಘ್ರದಲ್ಲೆ ಪ್ರಾರಂಭಿಸಲಾಗುವುದು ಎಂದು ಸಂಸ್ಥೆ ಪ್ರಕಟಣೆ ಹೊರಡಿಸಿತ್ತು. ಆದರೆ ಡಿ.20ರಿಂದಲೇ ಆರಂಭಿಸಿ ವಾಹನ ಚಾಲಕರಿಗೆ ದಿಢೀರ್ ಶಾಕ್ ನೀಡಿದೆ.
ಪ್ರಕಟಣೆಯಲ್ಲಿ ತಿಳಿಸಿರುವಂತೆ ಕಾರು, ಜೀಪ್, ವ್ಯಾನ್‌ಗಳ ಏಕಮುಖ ಸಂಚಾರಕ್ಕೆ ರು.15, ಹಲವು ಪ್ರಯಾಣಗಳಿಗೆ ರು.23  ಎಲ್‌ಸಿವಿ, ಮಿನಿಬಸ್‌ಗಳಿಗೆ ರು.27, ರು. 40, ಟ್ರಕ್, ಬಸ್‌ಗಳಿಗೆ ರು.54, ರು.81, ಹೆಚ್ಚು ಸಾಮರ್ಥ್ಯದ ವಾಹನಗಳಿಗೆ ರು.87, ರು.130 ನಿಗದಿ ಪಡಿಸಲಾಗಿದೆ. ಟೋಲ್ ಸಂಗ್ರಹಣಾ ಘಟಕದಿಂದ 10-20ಕಿ.ಮಿ.ವ್ಯಾಪ್ತಿಯೊಳಗೆ ವಾಸಿಸುತ್ತಿರುಮ ವ್ಯಕ್ತಿಗಳ ಕಾರು, ಜೀಪ್, ವ್ಯಾನ್ ಬಳಕೆದಾರಿಗೆ ತಿಂಗಳ ಪಾಸಿನ ಶುಲ್ಕವಾಗಿ ರು.150,  ರು.300, ಎಲ್‌ಸಿವಿ ಟ್ರಕ್‌ಗಳ ರಿಯಾಯಿತಿ ಶುಲ್ಕವನ್ನು ಪ್ರತಿ ಪ್ರಯಾಣಕ್ಕೆ ರು.15ರು, ರು.25. ಶಾಲಾ ಬಸ್‌ನ ತಿಂಗಳ ಪಾಸ್ ದರವಾಗಿ ರು.1000 ನಿಗದಿಪಡಿಸಲಾಗಿದೆ. ಟೋಲ್ ಸಂಗ್ರಹಗೊಂಡ ಕಾರಣ ಶುಕ್ರವಾರ ಬೆಳಗ್ಗೆ ಕಾರ್ಖಾನೆಗಳಿಗೆ, ಶಾಲಾ ಕಾಲೇಜುಗಳಿಗೆ ತೆರಳುವ ಕಾರ್ಮಿಕರ,
ವಿದ್ಯಾರ್ಥಿಗಳ ಬಸ್‌ಗಳು ಸರದಿಯಲ್ಲಿ ಬಹಳಷ್ಟು ಸಮಯ ಕಾಯಬೇಕಾಗಿದ್ದುದು ಸಾಮಾನ್ಯ
ದೃಶ್ಯವಾಗಿತ್ತು. ಸಮೀಪದ ಎಂವಿಜೆ ಆಸ್ಪತ್ರೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಪರೀಕ್ಷೆ ಪ್ರಾರಂಭಿಸಬೇಕಾಗಿದ್ದುದು ಬಸ್‌ಗಳು ತಡವಾಗಿ ಆಗಮಿಸಿದ ಕಾರಣ 15 ನಿಮಿಷಗಳಷ್ಟು ವಿಳಂಬಗೊಂಡಿತು. ಟೋಲ್ ಸಂಗ್ರಹಣೆ ಬಗ್ಗೆ ನಿರ್ದಿಷ್ಟ ದಿನಾಂಕವನ್ನು ಮೊದಲೇ ಪ್ರಕಟಿಸಿದ್ದಲ್ಲಿ ಸಾರ್ವಜನಿಕರಿಗೆ ಉಂಟಾದ ತೊಂದರೆಯನ್ನು ನಿವಾರಿಸಬಹುದಾಗಿತ್ತು ಎಂಬುದು ಬಹುತೇಕ ಪ್ರಯಾಣೆಕರ ಅಭಿಪ್ರಾಯವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.