ಬೆಂಗಳೂರು ಗ್ರಾಮಾಂತರ

ದೇವನಹಳ್ಳಿಯಲ್ಲಿ ಮರಳು ಲಾರಿ ಮಾಲೀಕರ, ಚಾಲಕರ ಪ್ರತಿಭಟನೆ

Published On :

ದೇವನಹಳ್ಳಿ: ದೇವನಹಳ್ಳಿ ತಾಲೂಕು ಮರಳು ಲಾರಿ ಮಾಲೀಕರ ಮತ್ತು ಚಾಲಕರ ಅನಿರ್ದಿಷ್ಟಕಾಲದವರೆಗೆ ಮಂಗಳವಾರದಿಂದ ಇಲ್ಲಿನ ದೊಡ್ಡಬಳ್ಳಾಪುರ ಬೈಪಾಸ್ ಸರ್ಕಲ್ ಬಳಿ ಮರಳು ಲಾರಿಗಳನ್ನು ನಿಲ್ಲಿಸಿ ರಾಜ್ಯ ಸರ್ಕಾರದ ಮರಳು ನೀತಿಯನ್ನು ವಿರೋಧಿಸಿ ಮುಷ್ಕರ ಆರಂಭಿಸಿದ್ದಾರೆ.
ಮರಳು ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ ಮುನಾವರ್ ಮಾತನಾಡಿ ರಾಜ್ಯ ಮರಳು ಲಾರಿ ಮಾಲೀಕರ ಸಂಘದ ಆದೇಶದ ಮೇರೆಗೆ ಮುಷ್ಕರ ಆರಂಭಿಸಿದ್ದು ಸರ್ಕಾರದ ಧೋರಣೆಯಿಂದಾಗಿ ಮರಳು ಸಾಗಿಸುವ ವೃತ್ತಿಯನ್ನೇ ನಂಬಿಕೊಂಡಿರುವ ಸಾವಿರಾರು ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಲಾರಿ ಮಾಲೀಕರು  ಬ್ಯಾಂಕ್‌ಗಳಿಗೆ ಸಾಲ ಮರುಪಾವತಿ ಮಾಡಲು ಸಾಧ್ಯವಾಗುತ್ತಿಲ್ಲ. ಮುಖ್ಯವಾಗಿ ಮರಳು ಲಭ್ಯವಾಗದೇ ಹೋದಲ್ಲಿ ಎಲ್ಲ ಸರ್ಕಾರಿ ಮತ್ತು ಖಾಸಗಿ ಕಾಮಗಾರಿಗಳು ನಿಂತುಹೋಗಿ ಲಕ್ಷಾಂತರ ಮಂದಿ ಕೂಲಿ ಕಾಮಿಕರಿಗೆ ಕೆಲಸವಿಲ್ಲದಂತಾಗಿ ಅವರ ಜೀವನಕ್ಕೆ ಕಲ್ಲು ಬೀಳುವಂತಾಗಿದೆ ಎಂದು ತಿಳಿಸಿದರು.
ಇದೇ ಸಂಧರ್ಭದಲ್ಲಿ ಸಂಘದ ಮುಖಂಡ ಚಂದ್ರಶೇಖರ್ ದೇವನಹಳ್ಳಿ ತಾಲೂಕಿನಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚು ಮರಳು ಸಾಗಣೆ ಲಾರಿಗಳಿದ್ದು  ಮರಳನ್ನು ಸಾಗಿಸಲು ಎಲ್ಲಿಂದಲಾದರೂ ಸರಿ ನಮಗೆ ಪರ್ಮಿಟ್ ಕೊಡಲಿ, ಮರಳು ಸಾಗಿಸಲು ನಾವು ರೆಡಿಯಾಗಿದ್ದೇವೆ. ಆದರೆ ಸರ್ಕಾರ ಪರ್ಮಿಟ್ ಕೊಡುವುದನ್ನೇ ನಿಲ್ಲಿಸಿರುವಾಗ ಮರಳು ಸಾಗಣೆಯಾಗದೆ ಕೂಲಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಆದ್ದರಿಂದ ಸರ್ಕಾರ ರಾಜ್ಯ ಲಾರಿ ಮಾಲೀಕರ ಸಂಘದ ಮುಖಂಡರೊಂದಿಗೆ ಚರ್ಚಿಸಿ ಸುಲಭವಾಗಿ ಪರ್ಮಿಟ್ ನೀಡುವಂತಾಗಲಿ ಅಲ್ಲದೆ ಸರ್ಕಾರಿ ಅಧಿಕಾರಿಗಳ ಮತ್ತು ಪೊಲೀಸರ ಕಿರುಕುಳ ನಿಲ್ಲುವಂತಾಗಬೇಕು ಎಂದರು. ಪ್ರತಿಭಟನೆಯಲ್ಲಿ ಲಾರಿ ಮಾಲೀಕರ ಸಂಘದ ಮುಖಂಡರಾದ ಚಂದ್ರಶೇಖರ್, ಎಸ್.ನಾಗೇಶ್, ಲಾರಿ ಚಾಲಕರು, ಕೂಲಿ ಕಾರ್ಮಿಕರು ಮುಷ್ಕರದಲ್ಲಿ ಭಾಗವಹಿಸಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.