ಬೆಂಗಳೂರು ಗ್ರಾಮಾಂತರ

ನೆರೆಹೊರೆಯವರ ಸಮಸ್ಯೆಗಳಿಗೆ ಸ್ಪಂದಿಸಿ

Published On :

ನೆಲಮಂಗಲ: ಸಮಾಜದಲ್ಲಿ ಸದಾ ಶಾಂತಿ ನೆಲೆಸಬೇಕಾದರೆ ಪ್ರತಿಯೊಬ್ಬರೂ ಆರೋಗ್ಯವನ್ನು ಕಾಪಾಡಿಕೊಂಡು ನೆರೆಹೊರೆಯವರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು   ಬೆಂಗಳೂರು ಗ್ರಾಮಾಂತರ  ಬಿಜೆಪಿ ಜಿಲ್ಲಾ  ಖಜಾಂಚಿ ರಾಮಕೃಷ್ಣ ತಿಳಿಸಿದರು.
ಅವರು ಬುಧವಾರ ತಾಲ್ಲೂಕಿನ ತ್ಯಾಮಗೊಂಡ್ಲುವಿನ ವೀಣಾ ಮಕ್ಕಳ ಮಂದಿರದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮ ದಿನಾಚರಣೆಯ  ಅಂಗವಾಗಿ  ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ಹಿರಿಯರು ಪೌಷ್ಟಿಕಾಂಶದ ಆಹಾರಗಳನ್ನು ಸೇವಿಸುತ್ತಿದ್ದರಿಂದ ಬಲಾಢ್ಯರಾಗಿಯೂ ಆರೋಗ್ಯವಾಗಿಯೂ ಇರುತ್ತಿದ್ದರು. ಆದರೆ ಇಂದಿನ ಆಹಾರ ಮೊದಲಿನಂತಿಲ್ಲ ಎಂದು ವಿಷಾದಿಸಿದರು.
ಸಪ್ತಗಿರಿ ಆಸ್ಪತ್ರೆಯ ಆಡಳಿತಾಧಿಕಾರಿ ಶಿವರಾಮ್ ಮಾತನಾಡಿ, ಆರೋಗ್ಯ ತಪಾಸಣಾ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತಾಗಬೇಕು. ಇದರಿಂದಾಗಿ ಸಮಾಜದಲ್ಲಿನ ಬಡ ಜನತೆಗೆ ತುಂಬಾ ಉಪಯುಕ್ತವಾಗುವುದಲ್ಲದೆ ಸಂಘಸಂಸ್ಥೆಗಳಿಂದ ಸಹಾಯ ಪಡೆಯಲು ಅನುಕೂಲವಾಗುತ್ತದೆ. ನಮ್ಮ ನೆರೆಹೊರೆಯವರು ಆರೋಗ್ಯದ ಸಮಸ್ಯೆಯನ್ನು ಎದುರಿಸುತ್ತಿದ್ದರೆ  ತಮಗೆ ತಿಳಿದಂತಹ ಸಲಹೆ ಸಹಕಾರ ನೀಡುವ ಮೂಲಕ ಮಾನವೀಯತೆಯನ್ನು ಮರೆಯಬೇಕು ಎಂದು ಹೇಳಿದರು.
 ತಾಲೂಕಿನ  ಪ್ರಗತಿಪರ ರೈತರಾದ ಬಳ್ಳಗೆರೆ ಸಿದ್ದಗಂಗಪ್ಪ, ಹಸಿರುವಳ್ಳಿ ಚಿಕ್ಕಪುಟ್ಟಯ್ಯ, ಸುಬ್ರಹ್ಮಣ್ಯ ನಗರದ ನಾರಾಯಣಪ್ಪ, ಮಣ್ಣೆ ಕೃಷ್ಣಮೂರ್ತಿ, ದೊಡ್ಡಬೆಲೆ ಲೋಕೇಶ್ ಹಾಗೂ ನಿವೃತ್ತ ಶಿಕ್ಷಕರಾದ ತ್ಯಾಮಗೊಂಡ್ಲು ನಂದಕುಮಾರ್, ದೊಡ್ಡಬೆಲೆ ಅಪ್ಪೇಗೌಡ, ಸೋಮಸಾಗ ಜಿ.ತಿಮ್ಮಯ್ಯ, ರಾಂಪುರ ಕೆ.ರಾಮಯ್ಯ ಮತ್ತು  ಅತಿ ಹೆಚ್ಚು ಹಾಲು  ಉತ್ಪಾದಕರಾದ ಬಳ್ಳಗೆರೆ ಚೆನ್ನಪ್ಪ, ದೊಡ್ಡಚೆನ್ನೋಹಳ್ಳಿ ಭಾಮರಾಜು, ಓಬಳಾಪುರ ಜಿ.ರಾಮಣ್ಣ, ಬಸಪ್ಪನಪಾಳ್ಯ ಶಿವಣ್ಣ, ಮಣ್ಣೆ ಶಿವಣ್ಣ, ಗೋರಘಟ್ಟ ಹನುಮಂತರಾಯಪ್ಪ ಅವರನ್ನು   ಬಿಜೆಪಿ ರಾಜ್ಯ ಖಜಾಂಚಿ ಎಚ್.ಎಸ್.ಗೋಪಿನಾಥ್ ಅವರು ಸನ್ಮಾನಿಸಿ ಗೌರವಿಸಿದರು.  
ಸುಮಾರು 500ಕ್ಕೂ ಹೆಚ್ಚು  ಜನರಿಗೆ  ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು ಎಂದು ಬಿಜೆಪಿ ತಾಲೂಕು  ಅಧ್ಯಕ್ಷ ಸಿ.ಎಲ್. ಜಗದೀಶ್‌ಪ್ರಸಾದ್  ಹೇಳಿದರು.
ಮಾಜಿ ಶಾಸಕ ಎಂ.ವಿ.ನಾಗರಾಜು, ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕಾಂತರಾಜು,  ಎಂ.ಎಸ್.ರಾಮಯ್ಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡಾ.ಎಚ್.ಕೆ.ನಾಗರಾಜು, ಡಾ.ಎಚ್.ಜೆ.ಜಯಕೃಷ್ಣ , ಹೋಬಳಿ ಅಧ್ಯಕ್ಷ ಎಸ್.ರುದ್ರೇಶ್, ಕಾರ್ಯದರ್ಶಿ ಕೆ.ಪಿ.ನಾರಾಯಣಸ್ವಾಮಿ, ಜಿಲ್ಲಾ ಕಾರ್ಯದರ್ಶಿ ಸೌಮ್ಯ, ಸೂರ್ಯನಾರಾಯಣಸ್ವಾಮಿ ಸೇರಿದಂತೆ ನೂರಾರು ಜನ  ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.