ಬೆಂಗಳೂರು ಗ್ರಾಮಾಂತರ

ಡಾ.ಜಿ.ಎಸ್.ಶಿವರುದ್ರಪ್ಪಗೆ ನುಡಿನಮನ

Published On :

ದೊಡ್ಡಬಳ್ಳಾಪುರ: ಸಹಕಾರಿಗಳ ಕಲಾಕೂಟ ಹಾಗೂ ನಿಸರ್ಗ ಸಾಂಸ್ಕೃತಿಕ ವೇದಿಕೆ ಕನಕಪುರ ವತಿಯಿಂದ ಅಗಲಿದ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ನುಡಿನಮನ ಕಾರ್ಯಕ್ರಮ ಇಲ್ಲಿನ ನಾಡೋಜ ಡಾ.ರಾಜ್ ಬಯಲು ರಂಗಮಂದಿರದಲ್ಲಿ ನಡೆಯಿತು. ವೈದ್ಯ ಡಾ.ಟಿ.ಎನ್.ವಿಜಯಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಗಾಯಕರಾದ ಹೊಳಸಾಲಯ್ಯ, ಚಂದ್ರಾಜ ಹಾಗೂ ಶ್ರೀದೇವಿ ತಂಡದವರು ಗಾಯನದ ಮೂಲಕ ಭಾವನಮನ ಸಲ್ಲಿಸಿದರು. ವಚನ ಸಾಹಿತ್ಯ ಅಕಾಡೆಮಿ ರಾಜ್ಯಾಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಜಾನಪದ ಗಾಯಕ ಚಿಕ್ಕಮರಿಗೌಡ ಅಗಲಿದ ಕವಿಗೆ ನುಡಿನಮನ ಸಲ್ಲಿಸಿದರು.  ಪತ್ರಕರ್ತ ಸತೀಶ್ ಮಾತನಾಡಿ ಕನ್ನಡ ಸಾಹಿತ್ಯದ ಸಾಂಸ್ಕೃತಿಕ ನಾಯಕ, ಕನ್ನಡದ ಕಟ್ಟಾಳು,  ಕವಿ, ವಿಮರ್ಶಕ ಡಾ.ಜಿಎಸ್ಎಸ್ ಸಾಮಾಜಿಕ ಜೀವನದಲ್ಲಿ ಪ್ರೀತಿ ಸೌಹಾರ್ದತೆಗಳನ್ನು ಪ್ರತಿಪಾದಿಸಿದವರಾರಿದ್ದರು. ನವ್ಯ ನವೋದಯಗಳ ನಡುವೆ, ಗದ್ಯಪದ್ಯಗಳ ಜೊತೆಗೆ ಸಮನ್ವಯ ಸಾಧಿಸಿದ ಕವಿಯಾಗಿದ್ದರು. ಸಾಮಾಜಿಕ ಸಾಂಸ್ಕೃತಿಕ ಚಲನಶೀಲತೆಯನ್ನು ಮೈಗೂಡಿಸಿಕೊಂಡ ವೈಚಾರಿಕ ವೈಜ್ಞಾನಿಕ ಪ್ರಜ್ಞೆಯ ಕವಿಗಳಾಗಿ ಭಾವಗೀತೆಗಳ ಮೂಲಕ ನಾಡಿನ ಜನಮಾನಸದಲ್ಲಿ ನೆಲೆನಿಂತವರಾಗಿದ್ದರು. ಅವರ ಮನಸು, ಕನಸುಗಳು ಇಂದಿಗೂ ಕಾವ್ಯದ ಮೂಲಕ ನೆಲೆನಿಂತಿವೆ ಎಂದು ಹೇಳಿದರು.  ಸಂಚಾಲಕ ಜಗದೀಶ್ವರಾಚಾರ್ಯ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಿ.ರವೀಂದ್ರ ನಿರೂಪಿಸಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.