ಬೆಂಗಳೂರು ಗ್ರಾಮಾಂತರ

ವಯೋವೃದ್ಧರಿಗೆ ತಕ್ಷಣ ಮಾಸಾಶನ ಮಂಜೂರು ಮಾಡಿ...

Published On :

ಮಾಗಡಿ: ರೀ..ಸ್ವಾಮಿ ತಹಸೀಲ್ದಾರ್ ಸಾಹೇಬರೇ.. ಈ ಅಜ್ಜಿಗೆ ಎಷ್ಟು ವಯಸ್ಸು ಎಂದು ಸಂಸದ ಸುರೇಶ್  ಕೇಳಿದಾಗ 70 ಎಂದು ತಹಶೀಲ್ದಾರ್  ಉತ್ತರಿಸಿದರು. ಏಕೆ ಇನ್ನೂ ಈ ಅಜ್ಜಿಗೆ ವಯೋವೃದ್ಧ ಮಾಸಾಶನ ನೀಡಿಲ್ಲ, ಈಕೆ ಗಂಡನಿಗೆ 80 ವರ್ಷ, ಈತನಿಗೂ ಮಾಸಾಶನ ನೀಡಿಲ್ಲ. ಕೂಡಲೆ ತಾಲೂಕಿನಾದ್ಯಂತ ಓಎಪಿ ಆಂದೋಲನೆ ಆಯೋಜಿಸಿ ವಯೋವೃದ್ಧರಿಗೂ ಮಾಸಾಶನ ಮಂಜೂರು ಮಾಡುವಂತೆ ಸಂಸದ ಸುರೇಶ್ ಅವರು ತಹಸೀಲ್ದಾರ್ ಶಿವಕುಮಾರ್ ಅವರಿಗೆ ತಾಕೀತು ಮಾಡಿದರು.
ಅವರು ಮಾದಿಗೊಂಡನಹಳ್ಳಿ ಮತ್ತು ನಾರಸಂದ್ರ ಗ್ರಾ.ಪಂ. ಪಂಚಾಯ್ತಿ ವ್ಯಾಪ್ತಿಯಲ್ಲಿ ಗ್ರಾಮ ಸಂಚಾರ ನಡೆಸಿ ನೂರಾರು ಜನರ ಸಮಸ್ಯೆಗಳನ್ನು ಆಲಿಸಿದರು. ಈಗ ಮಾಸಾಶನ 500ಕ್ಕೆ ಹೆಚ್ಚಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಮನೆ, ಕುಡಿಯುವ ನೀರು, ಅಂಗವಿಕಲರ ವೇತನ, ಅಂಗನವಾಡಿ, ಆರೋಗ್ಯ ಕೇಂದ್ರ, ಶಾಲೆ, ಪಡಿತರ ಚೀಟಿ, ವಿದ್ಯುತ್ ಸಮಸ್ಯೆ, ರಸ್ತೆ, ಚರಂಡಿ ದುರಸ್ಥಿಪಡಿಸಿಕೊಡುವಂತೆ ಸಂಸದರನ್ನು ಒತ್ತಾಯಿಸಿದರು. ಕೂಡಲೆ ಸ್ಥಳದಲ್ಲೇ ಹಾಜರಿದ್ದ ಅಧಿಕಾರಿಗಳನ್ನು ಕರೆದು ಗ್ರಾಮೀಣ ಜನರ ಸಮಸ್ಯೆಗಳನ್ನು ನೀವು  ಆಲಿಸಿದ್ದೀರಿ, ಕೂಡಲೆ ಸ್ಪಂದಿಸಬೇಕು, ಇಲ್ಲದಿದ್ದರೆ ನಿಮ್ಮನ್ನೇ ಹೊಣೆಗಾರರನ್ನಾಗಿಸುತ್ತೇನೆ ಎಂದರಲ್ಲದೆ ನರೇಗ ಯೋಜನೆ ಅನುಷ್ಠಾನಗೊಳಿಸಬೇಕು. ಪ್ರತಿ ಪಂಚಾಯ್ತಿಗಳು ಕನಿಷ್ಠ 1.50 ಕೋಟಿ ಕಾಮಗಾರಿಗಳ  ಖರ್ಚು ಕೇಳುತ್ತೇನೆ. ರಿಪೋರ್ಟ್ ನನಗೆ ಬೇಕಿಲ್ಲ, ಜ.15 ರೊಳಗೆ  ಪ್ರಗತಿ ತೋರಿಸಬೇಕು ಎಂದು ತಾಲೂಕು ಮಟ್ಟದ ಅಧಿಕಾರಿಗಳಿಗೆ ಸೂಚಿಸಿದರು.
ಕೆಪಿಸಿಸಿ ಸದಸ್ಯ ಎ.ಮಂಜು, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ. ಕೃಷ್ಣಮೂರ್ತಿ, ಮಾದಿಗೊಂಡನಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ನರಸಿಂಹಮೂರ್ತಿ, ಚಿಗಳೂರು ಗಂಗಾಧರ್, ಕಲ್ಪನಾ ಶಿವಣ್ಣ, ಸದಸ್ಯರಾದ ಹನುಮೇಗೌಡ, ಕೆಂಚೇಗೌಡ, ಎಂ.ಸಿ. ವೆಂಕಟೇಶ್, ಪುರಸಭಾ ಸದಸ್ಯರಾದ ಎಂ.ಎನ್.ಮಂಜು, ಕೆ.ವಿ.ಬಾಲು, ರಾಜಣ್ಣ,ಪುರುಷೋತ್ತಮ್, ನಾಗರಾಜು, ಬಿಸ್ಕೂರು ಗ್ರಾ.ಪಂ. ಮಾಜಿ ಅಧ್ಯಕ್ಷ ಬಿ.ಎಸ್.ಸುಹೇಲ್,  ಮಮುಸ್ ಬುಡಾನ್, ಸೈಪ್ ಉಲ್ಲಾ  ಖಾನ್, ಅಹಮದ್ ಷರೀಫ್, ಬರಕತ್  ಉಲ್ಲಾಖಾನ್ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.