ಬೆಂಗಳೂರು ಗ್ರಾಮಾಂತರ

31ರಂದು ಪಾರ್ಕ್ ವೀಕ್ಷಣೆಗೆ ಮುಕ್ತ

Published On :

ಆನೇಕಲ್ಲು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಡಿ.31 ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನ ಪ್ರವಾಸಿಗರಿಗಾಗಿ ತೆರೆದಿರುತ್ತದೆ ಎಂದು ಸಿಸಿಎಫ್ ರಂಗಸ್ವಾಮಿ ತಿಳಿಸಿದ್ದಾರೆ.
ಸಾಧಾರಣ ಮಂಗಳವಾರದಂದು ಉದ್ಯಾನವನದ ಸಿಬ್ಬಂದಿಗೆ ರಜೆ ಕಾರಣ ಕೆಲಸ ನಿರ್ವಹಿಸುವುದಿಲ್ಲ. ಹೊಸ ವರ್ಷ 2014ನ್ನು ಸ್ವಾಗತಿಸಲು ಪ್ರಕೃತಿ ಪ್ರಿಯರು, ಪ್ರವಾಸಿಗರು ಹೆಚ್ಚಾಗಿ ಬರುವ ಸಂಭವ ಇರುವುದರಿಂದ ಪಾರ್ಕ್ ಪ್ರವೇಶ, ಝೂ ಆವರಣ, ಸಸ್ಯಾಹಾರಿ ಸಫಾರಿ, ಚಿಟ್ಟೆ ಉದ್ಯಾನವನ, ಹುಲಿ, ಸಿಂಹ, ಕರಡಿ ಸಫಾರಿ ನೋಡಲು ಜನತೆಗೆ ಅವಕಾಶವಿದೆ ಎಂದಿದ್ದಾರೆ.
ಆನೆಕಲ್ನಲ್ಲಿ ಕ್ರಿಸ್ಮಸ್ ಆಚರಣೆ
ಆನೇಕಲು: ಆನೇಕಲ್ ತಾಲೂಕಿನಾದ್ಯಂತ ಕ್ರಿಸ್ಮಸ್ ಆಚರಣೆಯನ್ನು ಸಮಾಜ ಬಂಧುಗಳು ಸಂಭ್ರಮ ಸಡಗರಗಳಿಂದ ಆಚರಿಸಿದರು. ಪಟ್ಟಣದ ಸಂತ ಜೋಸೇಫ್ ಚರ್ಚ್ನಲ್ಲಿ ಏಸೂ ಕ್ರಿಸ್ತನ ಬಾಲ್ಯವನ್ನು ನೆನಪಿಗೆ ತರುವಂತಹ ಚಿತ್ರಣವನ್ನು ಗೊಂಬೆಗಳ ರೂಪದಲ್ಲಿ ಇಟ್ಟಿದ್ದರು. ಗೋದಲಿಯಲ್ಲಿನ ಜೋಡಣೆ ಭಕ್ತಾದಿಗಳಿಗೆ ಭಕ್ತಿ ಭಾವ  ತುಂಬುತ್ತಿತ್ತು. ಕ್ರಿಶ್ಚಿಯನ್ ಬಂಧುಗಳು ಅಪಾರ ಸಂಖ್ಯೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಮೇಣದ ಬತ್ತಿ ಹಚ್ಚುವ ಮೂಲಕ ಭಕ್ತಿ ಸಮರ್ಪಿಸಿದರು. ಫಾದರ್ ಫ್ರಾನ್ಸಿಸ್, ಸಿಪ್ರಿಯನ್, ಬಾಲರಾಜ್, ಸಂತೋಷ್ ಆಂಟನಿ ಜನರಿಗೆ ಹಬ್ಬದ ವಿಶೇಷತೆಯನ್ನು ತಿಳಿಸಿದರು. ತಾಲೂಕಿನ ಯಡವನಹಳ್ಳಿ, ಹೆಬ್ಬಗೋಡಿಯಲ್ಲೂ ವಿಶೇಷವಾಗಿ ಹಬ್ಬವನ್ನು ಆಚರಿಸಲಾಯಿತು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟ
ಕನಕಪುರ: ಕನಕಪುರ ತಾಲೂಕು ರೈತಸಂಘದ ಕಚೇರಿಯಲ್ಲಿ ರಾಷ್ಟ್ರಕವಿ ಡಾ.ಜಿ.ಎಸ್.ಶಿವರುದ್ರಪ್ಪನವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು.  ಜಯಕರ್ನಾಟಕ ಸಂಘಟನೆ ಮಾಜಿ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ, ಸರಳ ಸಜ್ಜನಿಕೆಗೆ ಹೆಸರಾಗಿದ್ದ ರಾಜ್ಯಾದ್ಯಂತ ಲಕ್ಷಾಂತರ ಶಿಷ್ಯರನ್ನು ಹೊಂದಿದ್ದ ಸಾಹಿತಿ ಜಿಎಸ್ಎಸ್ ನಿಧನ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ ಎಂದರು.  ರೈತ ಮುಖಂಡರಾದ ಬೂದಿಗುಪ್ಪೆ ಸಂಪತ್, ಗಜೇಂದ್ರಸಿಂಗ್, ಸುರೇಶ್,ದುಂಡಯ್ಯ, ವಿಷಕಂಠಯ್ಯ, ರಾಜಣ್ಣ, ಶಿವು, ಪ್ರಕಾಶ್, ವೆಂಕಟೇಶ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.