ನಾಡು-ನುಡಿ ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖ
ನೆಲಮಂಗಲ: ಕನ್ನಡ ನಾಡು-ನುಡಿ ರಕ್ಷಣೆಯಲ್ಲಿ ಯುವಕರ ಪಾತ್ರ ಪ್ರಮುಖವಾಗಿದ್ದು ಯಾವುದೇ ಪ್ರತಿಫಲಾಪೇಕ್ಷೆ ಬಯಸದೇ ಕನ್ನಡ ತಾಯಿಯ ಸೇವೆ ಮಾಡಬೇಕು ಎಂದು ಶಿವಗಂಗೆಯ ಮೇಲಣಗವಿ ಮಠಾಧೀಶ ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.
ಅವರು ತಾಲೂಕಿನ ಶಾಂತಿನಗರದಲ್ಲಿ ಹೊಯ್ಸಳ ಸೇನೆ 3ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಾ ರಾಜ್ಯೋತ್ಸವ ಕೇವಲ ನವೆಂಬರ್ಗೆ ಮೀಸಲಲ್ಲ. ಕನ್ನಡಪರ ಸಂಘಟನೆಗಳು ಹಮ್ಮಿಕೊಳ್ಳುವ ಸಾಹಿತ್ಯಾತ್ಮಕ ಕಾರ್ಯಕ್ರಮಗಳಿಗೆ ತಮ್ಮ ಸಹಕಾರವಿದೆ. ಸಾವಿರಾರು ವರ್ಷಗಳ ಇತಿಹಾಸವುಳ್ಳ ಕನ್ನಡ ಭಾಷೆಗೆ ತನ್ನದೇ ಆದ ಸ್ಥಾನಮಾನಗಳಿದ್ದು ಶಾಸ್ತ್ರೀಯ ಸ್ಥಾನಮಾನ ಲಭಿಸಿದ್ದರೂ ಸರ್ಕಾರ ಸವಲತ್ತುಗಳನ್ನು ವಿಸ್ತರಿಸಲು ಮೀನಾಮೇಷ ಎಣಿಸುತ್ತಿರುವುದು ವಿಷಾದಕರ ಸಂಗತಿ ಎಂದರು.
ಹೋಯ್ಸಳ ಸೇನೆ ರಾಜ್ಯಾಧ್ಯಕ್ಷ ಬಿ.ಎಸ್. ಕೃಷ್ಣಮೂರ್ತಿ ಅವರು ಸಾಹಿತಿ ಬಿದಲೂರು ಸೋಮಣ್ಣ ಮತ್ತು ಭಟ್ಟರಹಳ್ಳಿಯ ಖ್ಯಾತ ನಾಟಿ ವೈದ್ಯ ಗಂಗಣ್ಣ ಅವರನ್ನು ಸನ್ಮಾನಿಸಿ ಮಾತನಾಡುತ್ತಾ ಕನ್ನಡ ನಾಡು ನುಡಿಗೆ ಶ್ರಮಿಸಿದ ಸಾಹಿತಿಗಳ ಸೇವೆ ಸ್ಮರಣೀಯವಾಗಿದ್ದು ಇಂತಹ ಕಾರ್ಯಕ್ರಮಗಳ ಮೂಲಕ ಅವರ ಶ್ರಮಕ್ಕೆ ಗೌರವ ನೀಡುವುದು ಸಂಘಟನೆಗಳ ಆದ್ಯ ಕರ್ತವ್ಯ ಎಂದರು.
ಜಿಲ್ಲಾಧ್ಯಕ್ಷ ರಂಗಸ್ವಾಮಿ ಕನ್ನಡ ಧ್ವಜಾರೋಹಣ ನೆರವೇಸಿ ಮಾತನಾಡುತ್ತಾ ಸ್ಥಳೀಯ ಕಾರ್ಖಾನೆಗಳಲ್ಲಿ ಕನ್ನಡಿಗರನ್ನು ಕಡೆಗಣಿಸದೇ ಮೊದಲ ಆಧ್ಯತೆ ನೀಡಿ ಉದ್ಯೋಗ ಕಲ್ಪಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ತಾಲ್ಲೂಕು ಘಟಕದ ಅಧ್ಯಕ್ಷ ಹನುಮಂತರಾಜು ಮಾತನಾಡುತ್ತಾ ವಿದ್ಯಾವಂತ ಯುವಕರು ಸಂಘಟನೆಗಳನ್ನು ಕಟ್ಟಿಕೊಂಡು ಸಾಮಾಜಿಕ ಶೈಕ್ಷಣಿಕ ಸೇವೆಗೆ ಮುಂದಾಗಿರುವುದು ಸಂತಸದ ವಿಚಾರವಾಗಿದ್ದು ಸೇನೆಯ ಯುವಕರ ನಿಸ್ವಾರ್ಥ ಸೇವೆ ಉತ್ತಮವಾಗಿದೆ. ನಿಜವಾದ ನಿಷ್ಕಲ್ಮಶ ಕನ್ನಡದ ಕಟ್ಟಾಳುಗಳು ನಾಡಿಗೆ ಅವಶ್ಯಕವಾಗಿದೆ ಎಂದರು. ಸಂದರ್ಭದಲ್ಲಿ ಶಾಂತಿನಗರ ಘಟಕದ ಅಧ್ಯಕ್ಷ ತುಳಸಿರಾಮಯ್ಯ, ಗೌರವಾಧ್ಯಕ್ಷ ಎಂ.ಎ.ರಂಗಸ್ವಾಮಿ, ವಿದ್ಯಾರ್ಥಿ ಘಟಕದ ರಾಜ್ಯಾಧ್ಯಕ್ಷ ವಿ.ಗೋವರ್ಧನ್, ಎಂ.ಅಂಜನಮೂರ್ತಿ, ಟಿ.ಪಿ.ಲೋಕೇಶ್, ಕುಮಾರ್, ದೇವರಾಜು, ಗ್ರಾ.ಪಂ.ಸದಸ್ಯ ಜಯರಾಮಯ್ಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

