ಬೆಂಗಳೂರು ಗ್ರಾಮಾಂತರ

ರಂಜಿತಾ ಈಗ ನಿತ್ಯಾನಂದನ ಅಧಿಕೃತ ಶಿಷ್ಯೆ!

Published On :

ರಾಮನಗರ: ಸ್ವಘೋಷಿತ ದೇವಮಾನವ ಹಾಗೂ ವಿವಾದಿತ ನಿತ್ಯಾನಂದ ಸ್ವಾಮಿ ನಟಿ ರಂಜಿತಾ ಅವರಿಗೆ ಸನ್ಯಾಸ ದೀಕ್ಷೆ ನೀಡಿದ್ದಾರೆ. ಬಿಡದಿಯ ಧ್ಯಾನಪೀಠದಲ್ಲಿ ಶುಕ್ರವಾರ ನಡೆದ ನಿತ್ಯಾನಂದರ 37ನೇ ಅವತಾರೋತ್ಸವ  ಅರ್ಥಾತ್ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಈ ದೀಕ್ಷೆ ನೀಡಲಾಗಿದೆ. ಸ್ವತಃ ನಿತ್ಯಾನಂದ ಅವರೇ ರಂಜಿತಾರಿಗೆ ದೀಕ್ಷೆ ಬೋಧಿಸಿದ್ದಾರೆ. ಏತನ್ಮಧ್ಯೆ, ಮಾಧ್ಯಮ ಪ್ರತಿನಿಧಿಗಳಿಗೆ ಆಹ್ವಾನ ನೀಡಿ, ಅವರನ್ನು ಧ್ಯಾನಪೀಠದೊಳಗೆ ಸೇರಿಸಿಕೊಳ್ಳದೇ ಅವಮಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅವರ ಮೇಲೆ ಹಲ್ಲೆಗೂ ನಿತ್ಯಾನಂದನ ಶಿಷ್ಯರು ಮುಂದಾದರು. ಈ ವಿಷಯ ಮಾಧ್ಯಮಗಳಲ್ಲಿ ಪ್ರಸಾರವಾಗತ್ತಿದ್ದಂತೆ ಕಸ್ತೂರಿ ಕರ್ನಾಟಕ ವೇದಿಕೆ ಮತ್ತು ಕರ್ನಾಟಕ ನವ ನಿರ್ಮಾಣ ವೇದಿಕೆ ಕಾರ್ಯಕರ್ತರ ಧ್ಯಾನಪೀಠದ ಬಳಿ ಪ್ರತಿಭಟನೆ ನಡೆಸಿದರು.
ರಂಜಿತಾ ಇನ್ನು ಮಾ ಆನಂದಮಯಿ: ತನ್ನ ಮೈಮಾಟ ಮತ್ತು ನಟನೆಯಿಂದ ಅಸಂಖ್ಯಾತ ಪ್ರೇಕ್ಷಕರ ಮನ ಗೆದ್ದಿದ್ದ ಬಹುಭಾಷಾ ಮೋಹಕ ನಟಿ ರಂಜಿತಾ ಅವರ ವರ್ಣರಂಜಿತ ಬದುಕು ಸನ್ಯಾಸ ದೀಕ್ಷೆ ಸ್ವೀಕಾರದೊಂದಿಗೆ ಮತ್ತೊಂದು ಮಡಲು ತಲುಪಿದೆ. ಅವರೀಗ ಖಾವಿ ಧರಿಸಿದ್ದು, ಸನ್ಯಾಶ್ರಾಮವನ್ನು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ, ರಂಜಿತಾ ಹೆಸರನ್ನು ನಿತ್ಯಾನಂದ ಸ್ವಾಮಿ ಅವರು 'ಮಾ ಆನಂದಮಯಿ' ಎಂದು ಬದಲಾಯಿಸಿದ್ದಾರೆ. ರಂಜಿತಾ ಜತೆಗಿನ ನಿತ್ಯಾನಂದ ರಾಸಲೀಲೆ ಸಿಡಿ 3 ವರ್ಷದ ಹಿಂದೆ ಬಿಡುಗಡೆಗೊಂಡಿತ್ತು. ಅದರಿಂದ ನಿತ್ಯಾನಂದ ಜೈಲು ಸೇರಬೇಕಾಯಿತು. ಆ ನಂತರವೂ ಧ್ಯಾನಪೀಠದ ಜತೆಗಿನ ರಂಜಿತಾ ಸಂಬಂಧ ಮುಂದುವರೆದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.