ಬೆಂಗಳೂರು ಗ್ರಾಮಾಂತರ

ಏಡ್ಸ್ ರೋಗದ ನಿಯಂತ್ರಣ ಮುಂಜಾಗೃತೆಯಿಂದ ಸಾಧ್ಯ

Published On :

ಕನಕಪುರ: ಮಾನವಕುಲವನ್ನು ಕಾಡುತ್ತಿರುವ ಮಹಾಮಾರಿ ಏಡ್ಸ್ ರೋಗದ ನಿಯಂತ್ರಣ ಕೇವಲ ಮುಂಜಾಗೃತೆ,ತಿಳುವಳಿಕೆ ಹಾಗೂ ಪ್ರಚಾರಗಳಿಂದ ಮಾತ್ರ ಸಾಧ್ಯ ಎಂದು ಲಯನ್ಸ್ ಅಧ್ಯಕ್ಷ ಕೆ.ಜಿ. ಸತೀಶ್ ಹೇಳಿದ್ದಾರೆ. ಅವರು ಕನಕಪುರದ ರೂರಲ್ ಕಾಲೇಜು ಆವರಣದಲ್ಲಿ ಏಡ್ಸ್ ಜಾಗೃತಿ ಅಭಿಯಾನದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಆರ್ಇಎಸ್ ಮಾಜಿ ಕಾರ್ಯದರ್ಶಿ ಎಂ.ಎಲ್.ಶಿವಕುಮಾರ್ ಜಾಗೃತಿ ಜಾಥಾಕ್ಕೆ  ಬಾವುಟ ಬೀಸಿ ಚಾಲನೆ ನೀಡಿದರು. ಏಡ್ಸ್ ಜಾಗೃತಿ ಅಭಿಯಾನದ ಅಂಗವಾಗಿ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ನಡೆದರು. ಏಡ್ಸ್ ಜಾಗೃತಿ ಅಂಗವಾಗಿ ಸಾರ್ವಜನಿಕರಿಗೆ ಕರಪತ್ರಗಳ ವಿತರಣೆ ನಡೆಯಿತು. ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳು ಸ್ವಚ್ಛಂದ ಜೀವನ ನಡೆಸದೆ ಸರಳ, ಸಜ್ಜನರಾಗಿ ಬಾಳುವುದಾಗಿ ಪ್ರಮಾಣ ಸ್ವೀಕರಿಸಿದರು. ಆರೋಗ್ಯ ವೈದ್ಯಾಧಿಕಾರಿಗಳಾದ ಮರಿಯಪ್ಪ ಹಾಗೂ ಪಂಚಲಿಂಗೇಗೌಡ ಏಡ್ಸ್ರೋಗದ ಬಗ್ಗೆ ಉಪನ್ಯಾಸ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಮುಖ್ಯಅತಿಥಿಗಳಾಗಿ ಗ್ರಾಮವಿದ್ಯಾ ಪ್ರಚಾರಕ ಸಂಘದ ಕಾರ್ಯದರ್ಶಿ ಸಿ.ರಮೇಶ್, ಲಯನ್ಸ್ ಪದಾಧಿಕಾರಿಗಳಾದ ಎಂ.ಎನ್. ಚಂದ್ರಶೇಖರ್, ಮರಸಪ್ಪರವಿ, ಪ್ರಶಾಂತ್, ಶಿವಕುಮಾರ್, ಬಾಲರಾಜು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.