ಬೆಂಗಳೂರು ಗ್ರಾಮಾಂತರ

ಅಧಿಕಾರಿಗಳೊಂದಿಗೆ ಶಾಸಕ ಡಿಕೆಶಿ ಸಭೆ

Published On :

ಕನಕಪುರ: ಕನಕಪುರದ ಪೈಪ್ಲೈನ್ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಉದ್ಯಾನವನ ಕಾಮಗಾರಿಯು ಹಲವಾರು ವರ್ಷಗಳಿಂದ ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಶಾಸಕ ಡಿ.ಕೆ.ಶಿವಕುಮಾರ್ ಪಾದಯಾತ್ರೆ ಮೂಲಕ ಸ್ಥಳಪರಿಶೀಲನೆ ನಡೆಸಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿಪ ಮಾಜಿ ಸದಸ್ಯ ಎಸ್.ರವಿ, ತಹಸೀಲ್ದಾರ್, ಡಾ. ದಾಕ್ಷಾಯಣಿ, ಪುರಸಭಾಧ್ಯಕ್ಷ ಮಾಜಿ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಮುಖ್ಯಾಧಿಕಾರಿ ಮಾಯಣ್ಣಗೌಡ, ಕಾಂಗ್ರೆಸ್ ಮುಖಂಡರಾದ ವಿಜಯದೇವ್,ದಿಲೀಪ್, ಕೆ.ಎಂ.ಮಲ್ಲೇಶ್, ತೇಜಸ್ವಿನಿ ಕಾಂತರಾಜು, ಹೇಮಾರಾಜು, ಅಮ್ಜದ್, ಅಮೀರ್, ಮರಸಪ್ಪರವಿ ಪಾಲ್ಗೊಂಡಿದ್ದರು.
ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವ ಸುರೇಶ್ಕುಮಾರ್ ಅವರು ಕನಕ-ಕಾವೇರಿ ಉದ್ಯಾನವನ ನಿರ್ಮಾಣಕ್ಕೆ 2 ಕೋಟಿ ಮಂಜೂರಾತಿ ನೀಡಿ ಪಟ್ಟಣದ ನಡುವೆ ಹಾದುಹೊಗಿರುವ ಸುಮಾರು 2 ಕಿಮೀ ಉದ್ದದ ಪೈಪ್ಲೈನ್ಎರಡೂ ಬದಿ ಉದ್ಯಾನವನ ನಿರ್ಮಿಸಲು ಆದೇಶಿಸಿದ್ದರು.
ಶಾಸಕ ಡಿ.ಕೆ.ಶಿವಕುಮಾರ್ ಈ ಉದ್ಯಾನದಲ್ಲಿ ಸುಂದರವಾಗಿ ನಿರ್ಮಿಸಲು ಅನುವಾಗುವಂತೆ ನೀಲನಕ್ಷೆ ರೂಪಿಸಿ ಕಾರ್ಯಗತಗೊಳಿಸಲು ಸಹಕರಿಸಿದ್ದರು. ಸುಸಜ್ಜಿತ ಪಾರ್ಕ್ನಲ್ಲಿ ಮಕ್ಕಳ ಆಟದ ಮೈದಾನ, ವಾಲಿಬಾಲ್, ಬ್ಯಾಸ್ಕೆಟ್ಬಾಲ್ ಕ್ರೀಡಾಂಗಣ,ಬಯಲು ರಂಗಮಂದಿರ, ವಾಕಿಂಗ್ಪಾತ್ ಹಾಗೂ ಸುತ್ತಲೂ ಗಿಡಮರಗಳನ್ನು ನೆಟ್ಟು ಲ್ಯಾಂಡ್ಸ್ಕೇಪ್ ಸೃಷ್ಟಿಸಿ ಅಂದಗಾಣುವಂತೆ ಯೋಜನೆ ರೂಪಿಸಿದ್ದರು. ಟೆಂಡರ್ ಪ್ರಕ್ರಿಯೆಗಳು ಪೂರ್ಣಗೊಡು ಪೈಪ್ಲೈನ್ ಎರಡೂಬದಿ ಕಾಂಪೌಂಡ್ ನಿರ್ಮಾಣ ಕಾಮಗಾರಿಯೂ ಆರಂಭಗೊಂಡು ಯೋಜನೆಗೆ ಚಾಲನೆ ದೊರೆಯಿತು. ಆದರೆ ಇದ್ದಕ್ಕಿದ್ದಂತೆ ಹಲವಾರು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿರುವುದು ಶಾಸಕರನ್ನು ಕೆರಳಿಸಿತ್ತು.
ಸಭೆಯಲ್ಲಿ ಪಾಲ್ಗೊಂಡ ಶಾಸಕ ಡಿ.ಕೆ.ಶಿವಕುಮಾರ್ ಕನಕ-ಕಾವೇರಿ ಉದ್ಯಾನ ಸ್ಥಗಿತಗೊಂಡ ಕಾಮಗಾರಿಯನ್ನು ತಕ್ಷಣವೇ ಪುನರ್ ಪ್ರಾರಂಭಿಸಲು ಅಧಿಕಾರಿಗಳಿಗೆ ಆದೇಶಿಸಿ ಯಾವುದೇ ಅಡೆತಡೆಗಳು ಎದುರಾದರೂ ಪರಿಹರಿಸುವ ಭರವಸೆ ನೀಡಿದರು.



ಕಾಲೇಜಿನಲ್ಲಿ ಪವಾಡ ರಹಸ್ಯ ಬಯಲು ಕಾರ್ಯಕ್ರಮ
ಸೂಲಿಬೆಲೆ: ಇಲ್ಲಿನ ಸರ್ಕಾರಿ ಸ್ವತಂತ್ರ ಪದವಿ ಪೂರ್ವ ಕಾಲೇಜು ಆವಣದಲ್ಲಿ ಪವಾಡ ಬಯಲು ರಹಸ್ಯ ಕಾರ್ಯಕ್ರಮವನ್ನು ಗ್ರಾಮಾಂತರ ಜಿಲ್ಲಾ ಕಸಾಪ ಅಧ್ಯಕ್ಷ ಹುಲಿಕಲ್ ನಟರಾಜ್ ನೇತೃತ್ವದಲ್ಲಿ ನಡೆಯಿತು.
ಎಸ್ಎಫ್ಐ ಹಾಗೂ ಡಿವೈಎಫ್ಐ ಸಂಘಟನೆಗಳ ಸಹಕಾರದೊಂದಿಗೆ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಪವಾಡಗಳಿಗೆ ಮರಳಾಗಿ ಜನ ಮೋಸ ಹೋಗುವುದನ್ನು ನಾನಾ ಘಟನೆಗಳ ಮೂಲಕ ತೋರಿಸಿಕೊಟ್ಟು ಮಾತನಾಡಿದ ಹುಲಿಕಲ್ ನಟರಾಜ್, ಗ್ರಾಮೀಣ ಭಾಗದಲ್ಲಿರುವ ಜನರು ಮೂಢ ನಂಬಿಕೆಗಳ ಬಗ್ಗೆ ಸದಾ ಎಚ್ಚರಿಕೆಯಿಂದ ಇರಬೇಕು. ಮೌಢ್ಯಕ್ಕಿಂತ ವಿಜ್ಞಾನವನ್ನು ಪ್ರತಿಯೊಬ್ಬರು ನಂಬಬೇಕು. ಎಲ್ಲಿಯವರೆಗೆ  ಜನ ಮೋಸ ಹೋಗುತ್ತಾರೋ, ಅಲ್ಲಿಯವರೆಗೂ ಮೋಸ ಮಾಡುವವರು ಈ ಸಮಾಜದಲ್ಲಿ ಇದ್ದೇ ಇರುತ್ತಾರೆ. ಸರ್ಕಾರ ಮೌಢ್ಯ ವಿರೋಧಿ ವಿಧೇಯಕವನ್ನು ಜಾರಿ ಮಾಡಿದರೇ ಮಾಟ, ಮಂತ್ರಗಳ ಮೂಲಕ ಜನರನ್ನು ಮೋಸ ಮಾಡುವವರನ್ನು ಜೈಲಿಗಟ್ಟಲು ಸಹಾಯಕಾರಿ ಆಗುತ್ತದೆ ಎಂದರು. ಪ್ರಾಂಶುಪಾಲ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿದ್ದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಪ್ರ.ಕಾರ್ಯದರ್ಶಿ ಚಂದ್ರತೇಜಸ್ವಿ ಮಾತನಾಡಿದರು. ನರಸಿಂಹಮೂರ್ತಿ, ಅನಿಲ್, ಮುನೇಂದ್ರ, ನಾರಾಯಣಸ್ವಾಮಿ, ಮೋಹನ್ ಬಾಬು, ಮಂಜುನಾಥ್, ಗಜೇಂದ್ರ, ಮೊದಲಾದವರು ಉಪಸ್ಥಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.