ಭರವಸೆಯ ನಿರೀಕ್ಷೆ ಈ ವರ್ಷವಾದರೂ ಫಲಿಸೀತೇ...
ದೊಡ್ಡಬಳ್ಳಾಪುರ: 2013ಕ್ಕೆ ಭಾವಪೂರ್ಣ ವಿದಾಯ ಹೇಳಿ, ನಿರೀಕ್ಷೆಗಳ ಭರದಲ್ಲಿ 2014ನ್ನು ಸ್ವಾಗತಿಸುವ ಸಮಯ. ದೊಡ್ಡಬಳ್ಳಾಪುರದ ಜನರ ಮಹತ್ವದ ನಿರೀಕ್ಷೆಗಳು ಈ ವರ್ಷದಲ್ಲಿ ಕೈಗೂಡಲಿ ಎಂಬ ಆಶಯದಲ್ಲಿ ಹೊಸವರ್ಷಕ್ಕೆ ಸಂಭ್ರಮದ ಸ್ವಾಗತ ನೀಡುತ್ತಿದ್ದಾರೆ. ವರ್ಷಗಳು ಉರುಳುತ್ತಿವೆ, ಆದರೆ ಅಭಿವೃದ್ಧಿ ಮಾತ್ರ ಕುಂಠಿತವಾಗುತ್ತಿದೆ ಎಂಬ ಕೊರಗು ಜನರನ್ನು ಕಾಡುತ್ತಿದೆ. ಈ ವರ್ಷ ಹಾಗಾಗದಿರಲಿ.
ನಿರೀಕ್ಷೆಗಳು ನೂರು: ಗ್ರಾಮಾಂತರ ಜಿಲ್ಲೆಯ ದೊಡ್ಡ ಪಟ್ಟಣವಾಗಿರುವ ಈ ಊರು ಜಿಲ್ಲಾ ಕೇಂದ್ರವಾಗಬೇಕು ಎಂಬ ಬೇಡಿಕೆಗೆ ಈ ವರ್ಷವಾದರೂ ಮನ್ನಣೆ ಸಿಗಬೇಕಿದೆ. ದಶಕಗಳಿಂದ ಬೆಂಗಳೂರಿನಲ್ಲೇ ಕಾರ್ಯನಿರ್ವಹಿಸುತ್ತಿರುವ ದೊಡ್ಡಬಳ್ಳಾಪುರ ಉಪವಿಭಾಗ ಕೇಂದ್ರ ಇಲ್ಲಿಗೆ ವರ್ಗಾವಣೆಯಾಗಬೇಕಿದೆ. ಇಲ್ಲಿನ ಜನರಿಗೆ ನರಕ ಸದೃಶ ಎನಿಸಿರುವ ಒಳಚರಂಡಿ ಯೋಜನೆಗೆ ಮುಕ್ತಿ ಕಾಣಿಸಬೇಕಿದೆ. ಕಿಷ್ಕಿಂದೆಯಾಗಿರುವ ರಸ್ತೆಗಳು ವಿಶಾಲಗೊಳ್ಳಬೇಕಿದೆ. ಪದೇ ಪದೇ ಪ್ರಸ್ತಾಪವಾಗುತ್ತಲೇ ಇರುವ ಹೈಟೆಕ್ ಆಸ್ಪತ್ರೆ, ಹೈಟೆಕ್ ಬಸ್ ನಿಲ್ದಾಣಗಳು ನಿರ್ಮಾಣವಾಗಬೇಕಿದೆ. ಆಡಳಿತ ಸುಧಾರಣೆಯಲ್ಲಿ ಮಹತ್ವದ ಬದಲಾವಣೆಗಳು ಬೇಕೇ ಬೇಕು. ಹೋರಾಟಗಳು ನೆಲೆಕಳೆದುಕೊಳ್ಳಬಾರದು. ದ್ವಂದ್ವ ಕಳೆಯಬೇಕು. ಸಾಂಸ್ಕೃತಿಕ ಗಟ್ಟಿತನ ಬೇಕು. ಕುಡಿಯುವ ನೀರು ಸ್ಥಳೀಯ ಸಂಸ್ಥೆಯೇ ಪೂರೈಕೆ ಮಾಡುವಂತಾಗಬೇಕು. ನೀರಿನ ವ್ಯಾಪಾರ ಹೊರೆಯಾಗಬಾರದು. ನಗರದಲ್ಲಿ ಹದಗೆಟ್ಟ ರಸ್ತೆಗಳು ಸರಿಹೋಗಬೇಕು. ಸುಸಜ್ಜಿತ ಮಾರುಕಟ್ಟೆ ಕಟ್ಟಡ ನಿರ್ಮಾಣವಾಗಬೇಕು. ಹೊಸದಾಗಿ ಕಾರ್ಯಾರಂಭ ಮಾಡಲಿರುವ ಮಹಿಳಾ ಪದವಿ ಕಾಲೇಜಿಗೆ ಸ್ವಂತ ಕಟ್ಟಡ ಆದಷ್ಟೂ ಬೇಗ ನಿರ್ಮಾಣವಾಗಬೇಕು. ಶಾಶ್ವತ ನೀರಾವರಿ ಯೋಜನೆ ಜಾರಿಗೆ ಬರಬೇಕು. ಕೊಳಗೇರಿ ವಾಸಿಗಳ ಬವಣೆ ಸುಧಾರಿಸಬೇಕು. ಜನಪ್ರತಿನಿಧಿಗಳು ಸಾರ್ವಜನಿಕ ಹಿತಚಿಂತಕರಾಗಬೇಕು. ಸಾಂಸ್ಕೃತಿಕ ಭವನ, ಬಯಲು ರಂಗ ಮಂದಿರ ನಿರ್ಮಾಣವಾಗಬೇಕು.ಹದಗೆಟ್ಟಿರುವ ನೇಕಾರರ ಸ್ಥಿತಿ ಸುಧಾರಿಸಬೇಕು. ಟೆಕ್ಸ್ಟೈಲ್ ಪಾರ್ಕ್ ಅಸ್ತಿತ್ವ ಉಳಿಯಬೇಕು. ಒತ್ತುವರಿಯಾಗಿರುವ ನೂರಾರು ಎಕರೆ ಸರ್ಕಾರಿ ಜಮೀನು ಸಾರ್ವಜನಿಕ ಕಲ್ಯಾಣಕ್ಕೆ ಬಳಕೆಯಾಗಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

