ಬೆಂಗಳೂರು ಗ್ರಾಮಾಂತರ

ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡಿ

Published On :

ವಿಜಯಪುರ: ವ್ಯಾಪಾರದಲ್ಲಿ ಲಾಭದೊಂದಿಗೆ ಗ್ರಾಹಕರಿಗೆ ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವುದು ಮುಖ್ಯ ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾರ್ಯಲಯದ ಜಿಲ್ಲಾ ಅಂಕಿತಾಧಿಕಾರಿ ಡಾ.ಖಲೀದ್ ಅಹಮದ್ ತಿಳಿಸಿದರು.
ಅವರು ಇಲ್ಲಿನ ನಗರೇಶ್ವರ ಸ್ವಾಮಿ ಪ್ರಾರ್ಥನ ಮಂದಿರದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಇಲಾಖೆ ಹಾಗೂ ದೇವನಹಳ್ಳಿ ಮತ್ತು ವಿಜಯಪುರ ವ್ಯಾಪಾರ ಸಂಘಗಳ ಸಂಯುಕ್ತಾಶ್ರಯದಲ್ಲಿ  ವ್ಯಾಪಾರಿಗಳಿಗೆ ಏರ್ಪಡಿಸಿದ್ದ ಅರಿವು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಉತ್ತಮ ಗುಣಮಟ್ಟದ ವಸ್ತುಗಳನ್ನು ನೀಡುವುದರಿಂದ ಗ್ರಾಹಕರ ಸುರಕ್ಷತೆ ಕಾಪಾಡಬಹುದು ಎಂದರು.
ಇಲಾಖೆಯ ಸಾರ್ವಜನಿಕ ಸಂಪರ್ಕಾಧಿಕಾರಿ  ರಾಮಮೂರ್ತಿ ಮಾತನಾಡಿ ಗ್ರಾಹಕರು ಯಾವುದೇ ವಸ್ತಗಳನ್ನು ಪರೀಕ್ಷೆ ಮಾಡುವ ಹಕ್ಕನ್ನು ಹೊಂದಿದ್ದು, ನಿಗದಿತ ಪ್ರಯೋಗಾಲಯಗಳಿಗೆ ನಮೂನೆ ಕಳುಹಿಸಿಕೊಡುವ ಬಗ್ಗೆ ಅರಿವನ್ನು ಹೊಂದಬೇಕಾಗಿದೆ ಎಂದರು.
ಆಹಾರ ಸುರಕ್ಷತಾ ಇಲಾಖೆಯ ರವೀಂದ್ರಕಾಂತ್, ದೇವನಹಳ್ಳಿಯ ಇಲಾಖಾಧಿಕಾರಿ ನಾಗರಾಜ್, ವಿಜಯಪುರ ವ್ಯಾಪಾರಸ್ಥರ ಸಂಘದ ಗೌರವಾಧ್ಯಕ್ಷ ಪಿ.ಚಂದ್ರಪ್ಪ,ವಿತರಕರ ಸಂಘದ ಅಧ್ಯಕ್ಷ ಪ್ರಕಾಶ್,ದೇವನಹಳ್ಳಿ ಸಂಘದ ಅಧ್ಯಕ್ಷ ಬಿ.ವಿ.ನಾಗರಾಜ್, ವಿತರಕರ ಸಂಘ ಹಾಗೂ ದಿನಸಿ ವರ್ತಕರ ಸ್ನೇಹಕೂಟದ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.