ಬೆಂಗಳೂರು ಗ್ರಾಮಾಂತರ

ಕ್ಷುಲ್ಲಕ ಕಾರಣಕ್ಕಾಗಿ ಹೆಂಡತಿಯ ಕೊಲೆ

Published On :

ಆನೇಕಲ್: ಒಡವೆಗಳನ್ನು ಒತ್ತೆ ಇಡುವ ವಿಚಾರಕ್ಕೆ ಜಗಳ ನಡೆದು ಗಂಡ ಹೆಂಡತಿಯನ್ನು ಸುತ್ತಿಗೆಯಿಂದ ತಲೆಗೆ ಬಡಿದು ಕೊಂದ ಘಟನೆ ಅತ್ತಿಬೆಲೆ ಠಾಣಾ ವ್ಯಾಪ್ತಿಯ ಬಳಗಾರನಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಕೊಲೆ ಮಾಡಿದ ಪಾತಕಿ ಆಂಧ್ರ ಮೂಲದ ವೀರೇಂದ್ರ ಭಾಸ್ಕರ ಶೆಟ್ಟಿ. ಮಂಜುಳ(32) ಕೊಲೆಯಾದ ನತದೃಷ್ಟೆ.  ಇತ್ತೀಚೆಗೆ ಹೆಂಡತಿಯೊಂದಿಗೆ ಆಗಾಗ ಜಗಳ ತೆಗೆಯುತ್ತಿದ್ದು ಇಂದೂ ಸಹ ಕಲಹ ವಿಕೋಪಕ್ಕೆ ತೆರಳಿ ಮನೆಯಲ್ಲಿದ್ದ ಸುತ್ತಿಗೆಯಿಂದ ಬಡಿದಿದ್ದಾನೆ. ಕೊಲೆಯಾದ ನಂತರ ಮನೆ ಹೊರಗೆ ಬರಲು ಹೆದರಿದ ಆತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನೆರೆ ಹೊರೆಯವರಿಗೆ ಕೂಗಿ ಹೇಳಿದ. ಹಾಗೂ ಮನೆ ಬಾಗಿಲನ್ನು  ಒಳಗಿನಿಂದ ಭದ್ರ ಪಡಿಸಿಕೊಂಡಿದ್ದ. ವಿಷಯ ತಿಳಿದ ಅತ್ತಿಬೆಲೆ ಪೊಲೀಲರು ಮನೆ ಬಳಿ ಬಂದು ಶೆಟ್ಟಿಯ ಮನವೊಲಿಸಿ ಬಾಗಿಲನ್ನು ತೆಗೆಸಿ ಶವವನ್ನು ಆಸ್ಪತ್ರೆಗೆ ಸಾಗಿಸಿದರು ಹಾಗೂ ಭಾಸ್ಕರ ಶೆಟ್ಟಿಯನ್ನು ವಶಕ್ಕೆ ಪಡೆದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.