ಚುನಾವಣಾ ಪ್ರಕ್ರಿಯೆ ಚುರುಕು, ಅಧಿಕಾರಿಗಳ ನೇಮಕ
Published On :
ರಾಮನಗರ: ಜಿಲ್ಲೆಯ ತಲಾ ಎರಡು ಪುರಸಭೆ ಮತ್ತು ನಗರಸಭೆಗಳ 112 ವಾರ್ಡ್ಗಳ ಚುನಾವಣೆಗೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಶನಿವಾರ ಅಧಿಸೂಚನೆ ಹೊರಡಿಸಿದ್ದು, ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸುವುದಾಗಿ ಘೋಷಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಈಗಾಗಲೇ ಜಾರಿಗೊಳಿಸಿದ್ದು, ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಲಾಗಿದೆ. 189 ಮತಗಟ್ಟೆಗಳನ್ನು ಸ್ಥಾಪಿಸಿದ್ದು, 800 ಮಂದಿ ಚುನಾವಣಾ ಸಿಬ್ಬಂದಿ ನಿಯೋಜನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ಪತ್ರಿಕಾಗೋಷ್ಟಿಯಲ್ಲಿ ವಿವರಿಸಿದರು.
ಪಟ್ಟಣ ಮತ್ತು ನಗರ ಪ್ರದೇಶಗಳಿಗೆ ಮಾತ್ರವೇ ಚುನಾವಣಾ ನೀತಿ ಸಂಹಿತೆ ಅನ್ವಯಿಸಿದ್ದು, ಈ ವ್ಯಾಪ್ತಿಯಲ್ಲಿ ಪ್ರಚಾರ ಸಾಮಗ್ರಿಗಳನ್ನು ತೆರವುಗೊಳಿಸಲಾಗಿದೆ. ಯಾವುದೇ ಸಭೆ, ಸಮಾರಂಭ ನಡೆಸುವುದಕ್ಕೆ ಅನುಮತಿಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಅವರು ಹೇಳಿದರು.
ಚುನಾವಣಾಧಿಕಾರಿ ನೇಮಕ: ಪ್ರತಿ 8 ವಾರ್ಡ್ಗಳಿಗೆ ಒಬ್ಬರಂತೆ ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಯನ್ನು ನೇಮಿಸಲಾಗಿದೆ. ಮಾಗಡಿ ಮತ್ತು ಕನಕಪುರ ಪುರಸಭೆಗಳ ಎಲ್ಲ ವಾರ್ಡ್ಗಳ ಉಮೇದುವಾರಿಕೆಯನ್ನು ಆಯಾ ಪುರಸಭೆಗಳಲ್ಲೇ ಸ್ವೀಕರಿಸಲಾಗುವುದು ಎಂದರು.
ಚನ್ನಪಟ್ಟಣ ಮತ್ತು ರಾಮನಗರ ನಗರಸಭೆಗಳ 1 ರಿಂದ 16ನೇ ವಾರ್ಡ್ವರೆಗಿನ ನಾಮಪತ್ರಗಳ ಸಲ್ಲಿಕೆಗೆ ಆಯಾ ತಾಲೂಕು ಕಚೇರಿ, 17 ರಿಂದ 31ನೇ ವಾರ್ಡ್ವರೆಗಿನ ನಾಮಪತ್ರಗಳ ಸಲ್ಲಿಕೆಗೆ ಆಯಾ ನಗರಸಭೆ ಕಚೇರಿಗಳಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.
ವೀಕ್ಷಕರ ನೇಮಕ: ರಾಜ್ಯ ಚುನಾವಣಾ ಆಯೋಗದಿಂದ ಕನಕಪುರ ಪುರಸಭೆ ಮತ್ತು ಚನ್ನಪಟ್ಟಣ ನಗರಸಭೆಗೆ ಕೃಷಿ ಇಲಾಖೆ ಅಪರ ನಿರ್ದೇಶಕ ಶಿವಕುಮಾರ್, ರಾಮನಗರ ನಗರಸಭೆ ಮತ್ತು ಮಾಗಡಿ ಪುರಸಭೆಗೆ ಖಜಾನೆ ಇಲಾಖೆ ನಿರ್ದೇಶಕಿ ಎನ್.ಟಿ. ಅಬ್ರು ನೇಮಕಗೊಂಡಿದ್ದಾರೆ ಎಂದರು.
ಪ್ರತಿ 8 ವಾರ್ಡ್ಗೆ ಒಬ್ಬರಂತೆ ಜಿಲ್ಲಾಡಳಿತದಿಂದ ನೋಡೆಲ್ ಅಧಿಕಾರಿಯನ್ನು ನಿಯೋಜಿಸಲಾಗುವುದು. ಚುನಾವಣಾ ಅಕ್ರಮ, ಆಮಿಷ ಒಡ್ಡುವಿಕೆ, ನೀತಿ ಸಂಹಿತೆ ಉಲ್ಲಂಘನೆ ಕುರಿತು ನೋಡೆಲ್ ಅಧಿಕಾರಿಗಳು ಪ್ರಕರಣ ದಾಖಲಿಸುವರು ಎಂದರು.
ಖರ್ಚು, ವೆಚ್ಚ ಕಡ್ಡಾಯ: ಈ ಚುನಾವಣೆಯಲ್ಲೂ ಅಭ್ಯರ್ಥಿಗಳು ತಮ್ಮ ಚುನಾವಣಾ ಖರ್ಚು, ವೆಚ್ಚದ ವಿವರವನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಅಂತೆಯೇ ನಾಮಪತ್ರದ ಜತೆಗೆ ಆಸ್ತಿ, ಕ್ರಿಮಿನಲ್ ಮೊಕದ್ದಮೆಗಳ ವಿವರವನ್ನು ಸಲ್ಲಿಸಬೇಕಿದೆ. ವೈಯಕ್ತಿಕ ಟೀಕೆ, ಜಾತಿ, ಧರ್ಮದ ಹೆಸರಿನಲ್ಲಿ ಮತ ಯಾಚನೆಗೆ ನಿಷೇಧ ಹೇರಲಾಗಿದೆ ಎಂದರು. ಅಪರ ಡಿಸಿ ಎಂ.ಎಸ್.ಅರ್ಚನಾ, ಚುನಾವಣಾ ಶಾಖೆ ತಹಸೀಲ್ದಾರ್ ಹೊನ್ನಸ್ವಾಮೇಗೌಡ ಹಾಜರಿದ್ದರು.
1.69 ಲಕ್ಷ ಮತದಾರರು: ರಾಮನಗರ ಜಿಲ್ಲೆಯ 4 ಪೌರ ಸಂಸ್ಥೆಗಳಲ್ಲಿ 85362 ಪುರುಷರು ಮತ್ತು 84958 ಮಹಿಳೆಯರು ಸೇರಿದಂತೆ 169950 ಮತದಾರರಿದ್ದಾರೆ. 2001ರ ಜನಗಣತಿ ಆಧರಿಸಿ ಸಿದ್ಧಪಡಿಸಿದ ಮೀಸಲಾತಿಗೆ ಅನುಗುಣವಾಗಿ 2007ರ ಚುನಾವಣೆ ಮೀಸಲನ್ನೇ ಮುಂದುವರಿಸಲಾಗಿದೆ ಎಂದು ಡಿಸಿ ತಿಳಿಸಿದರು.
ರಾಮನಗರ ನಗರಸಭೆಯಲ್ಲಿ ಅತಿ ಹೆಚ್ಚು ಅಂದರೆ 59227 ಮತದಾರರಿದ್ದಾರೆ. ಚನ್ನಪಟ್ಟಣದಲ್ಲಿ 47733, ಮಾಗಡಿಯಲ್ಲಿ 24631 ಮತ್ತು ಕನಕಪುರದಲ್ಲಿ 38359 ಮತದಾರರಿದ್ದಾರೆ. ಉಮೇದುವಾರಿಕೆ ಸಲ್ಲಿಕೆಯ ಕಡೆಯ ದಿನಕ್ಕಿಂತ 7 ದಿನ ಮುಂಚಿನವರೆಗಷ್ಟೇ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ, ವರ್ಗಾವಣೆಗೆ ಅವಕಾಶ ಎಂದರು.
ನೀತಿ ಸಂಹಿತೆ ಮುಖ್ಯಾಂಶ: ಜಾರಿಯಲ್ಲಿರುವ ಕಾಮಗಾರಿಗಳ ಮುಂದುವರಿಕೆ ಮತ್ತು ಬಿಲ್ ಪಾವತಿಗೆ ಅಡ್ಡಿಯಿಲ್ಲ. ಜನಪ್ರತಿನಿಧಿಗಳು ಕೆಡಿಪಿ ಸಹಿತ ಅಧಿಕೃತ ಸಭೆಗಳನ್ನು ನಡೆಸುವಂತಿಲ್ಲ. ಬರ ಪರಿಹಾರ, ಕುಡಿಯುವ ನೀರಿನ ಯೋಜನೆಗಳಿಗೆ ನೀತಿ ಸಂಹಿತೆ ಅನ್ವಯವಾಗದು. ಹುದ್ದೆಗಳಿಗೆ ತಾತ್ಕಾಲಿಕ ನೇಮಕಾತಿಗೆ ಅವಕಾಶವಿಲ್ಲ. ಆದರೆ, ಪ್ರಕ್ರಿಯೆ ಮೊದಲೇ ಪ್ರಾರಂಭ ಆಗಿದ್ದರೆ ಅಡ್ಡಿ ಇಲ್ಲ.ಮತದಾರರ ಮೇಲೆ ಪ್ರಭಾವ ಬೀರುವಂತಹ ಸರ್ಕಾರಿ ಕಾರ್ಯಕ್ರಮ ನಡೆಸಕೂಡದು. ಪರವಾನಗಿ ಪಡೆಯದೆ ಜಾಹಿರಾತು ಫಲಕ ಅಳವಡಿಕೆ ಕಾನೂನು ಬಾಹಿರ. ಪೌರ ಸಂಸ್ಥೆಗಳ ವ್ಯಾಪ್ತಿಯ ನೌಕರರ ವರ್ಗಾವಣೆಯನ್ನು ಚುನಾವಣಾ ಆಯೋಗದ ಪೂರ್ವಾನುಮತಿ ಇಲ್ಲದೆ ನಡೆಸುವಂತಿಲ್ಲ.

Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.