ಬೆಂಗಳೂರು ಗ್ರಾಮಾಂತರ

ಕಳಪೆ ಕಾಮಗಾರಿ ಒಳಚರಂಡಿ: ಶಾಸಕರಿಗೆ ದೂರು

Published On :

ಮಾಗಡಿ: ಕುದೂರಿನ ಎರಡನೇ ಬ್ಲಾಕ್ ಲಕ್ಷ್ಮೀದೇವಿ ನಗರದಲ್ಲಿ  ಒಳಚರಂಡಿ ಸಂಪರ್ಕ ಕಳಪೆ ಕಾಮಗಾರಿಯಿಂದಾಗಿ ಶೌಚಾಲಯದ ನೀರು ಸಮರ್ಪಕವಾಗಿ ಹರಿಯದೆ ವಾಪಸು ಮನೆಗಳಿಗೆ ಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿ ಶಾಸಕ ಎಚ್.ಸಿ. ಬಾಲಕೃಷ್ಣ ಅವರನ್ನು ಸುತ್ತುವರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು. ಜನಸ್ಪಂದನ ಕಾರ್ಯಕ್ರಮಕ್ಕೆ  ಕುದೂರು ಗ್ರಾಮ ಪಂಚಾ ಈಗಾಗಲೇ ಬೇಸಿಗೆ ಕಾಲ ಸಮೀಸುತ್ತಿದೆ. ಕುಡಿಯುವ ನೀರಿಗೂ ತತ್ವಾರ ಉಂಟಾಗಿದ್ದು, ಕಾಲರ ಹರಡುವ ಭೀತಿಯಿಂದ ನಾಗರಿಕರು ತತ್ತರಿಸಿಹೋಗಿದ್ದಾರೆ.  ಇಲ್ಲಿ ವಾಸ ಮಾಡುವುದೇ ಕಷ್ಟವಾಗಿದೆ. ಈ ಸಂಬಂಧ ಹಲವಾರು ಬಾರಿ ಪಂಚಾಯ್ತಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.  ಒಂದು ತಿಂಗಳ ಹಿಂದೆ ಚರಂಡಿ ಚೇಂಬರ್ ದುರಸ್ಥಿಪಡಿಸುವ ಭರವಸೆಯನ್ನು ಗ್ರಾಮ ಪಂಚಾಯ್ತಿ ಹಿಂದಿನ ಅಧ್ಯಕ್ಷ ಕೆ.ಬಿ. ಬಾಲರಾಜು ನೀಡಿದ್ದರು.  ದುರಸ್ಥಿ ಪಡಿಸದಿದ್ದರೆ  ಸದಸ್ಯತ್ವಕ್ಕೆ ರಾಜೀನಾಮೆ ನೀಡುವುದಾಗಿಯೂ  ಹೇಳಿದ್ದರು. ಕೊಟ್ಟಮಾತು ಉಳಿಸಿಕೊಳ್ಳಲಿಲ್ಲ, ರಾಜೀನಾಮೆಯನ್ನೂ ನೀಡಲಿಲ್ಲ ಎಂದು ಆರೋಪಿಸಿದ ನಾಗರಿಕರು ಕೂಡಲೆ ಒಳಚರಂಡಿ ದುರಸ್ಥಿಪಡಿಸಿ ಸರಿಪಡಿಸದಿದ್ದರೆ ಗ್ರಾಪಂ್ತ ಮುಂದೆ ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು. ಮಾಹಿತಿ ಪಡೆದ ಬಾಲಕೃಷ್ಣ, ವಾರದೊಳಗೆ ಒಳಚರಂಡಿ ದುರಸ್ಥಿಪಡಿಸುವಂತೆ  ಪಂಚಾಯ್ತಿ ಪಿಡಿಓ ಸೈಯದ್ ಶಮೀರ್  ಅವರಿಗೆ  ತಾಕೀತು ಮಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.