ಬೆಂಗಳೂರು ಗ್ರಾಮಾಂತರ

27ರಿಂದ ಶಾಂತಲಾ ಅಂತಾರಾಜ್ಯ ಸಾಂಸ್ಕೃತಿಕ ಉತ್ಸವ-2013

Published On :

ರಾಮನಗರ: ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಾಂತಲಾ ಅಂತಾರಾಜ್ಯ ಸಾಂಸ್ಕೃತಿಕ ಉತ್ಸವ-2013 ನಗರದಲ್ಲಿ ಫೆ.27 ಮತ್ತು 28ರಂದು ನಡೆಯಲಿದೆ ಎಂದು ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಕವಿತಾ ರಾವ್ ಹೇಳಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಆಯೋಜಿಸಿರುವ ಎರಡು ದಿನದ ಉತ್ಸವವು ನಗರದ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ ನಡೆಯಲಿದೆ. ವಿವಿಧ ರಾಜ್ಯಗಳ ಕಲಾ ತಂಡಗಳು ಉತ್ಸವದಲ್ಲಿ ಪ್ರದರ್ಶನ ನೀಡಲಿವೆ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ರಂಗಕರ್ಮಿ ಬನ್ನಿಕುಪ್ಪೆ ವಿ.ಗುರುಮೂರ್ತಪ್ಪ ವೇದಿಕೆಯಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಾಧ್ಯಕ್ಷರನ್ನಾಗಿ ಸಾಹಿತಿ ಎಂ.ಟಿ. ನಾಗರಾಜು ಅವರನ್ನು ಆರಿಸಲಾಗಿದೆ. ಫೆ.27ರ ಬೆಳಗ್ಗೆ 11ಕ್ಕೆ ಉತ್ಸವವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನ ಕಾರ್ಯದರ್ಶಿ ಬಸವರಾಜು ಉದ್ಘಾಟಿಸುವರು ಎಂದರು.
ಚಿಂತಕ ಎಲ್.ನರಸಿಂಹಯ್ಯ ಅಧ್ಯಕ್ಷತೆ ವಹಿಸಲಿದ್ದು, ಸ್ಮರಣ ಸಂಚಿಕೆಯನ್ನು ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ಬಿಡುಗಡೆ ಮಾಡುವರು. ಡಾ.ಎಸ್.ಎಲ್.ತಿಮ್ಮಯ್ಯ, ಮಾಲತಿ ಸುಧೀರ್, ಯಶವಂತ್, ಕಾಲಭೈರವ ಗಂಗಾಧರ್ ಭಾಗವಹಿಸುವರು ಎಂದು ಅವರು ತಿಳಿಸಿದರು.
ಕಲಾವಿದರಾದ ಬೆಂಗಳೂರಿನ ಉಷಾ ದಾತಾರ್, ನಾಗಮಣಿ ಶ್ರೀನಾಥ್, ಮಣಿಪುರದ ನಂದಜಿತ್ ಸಿಂಗ್, ನಾಗಾಲ್ಯಾಂಡ್ನ ಜೀಹಿತೋ ಚಿಫಿ, ಅಸ್ಸಾಂನ ಮಹಾನಂದ ಗೋಗಿ ಅವರಿಗೆ ಶಾಂತಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳೀದರು.
ಸಾಂಸ್ಕೃತಿಕ ಕಾರ್ಯಕ್ರಮ: ಫೆ.27ರ ಮಧ್ಯಾಹ್ನ 2ಕ್ಕೆ ಬಿಜಾಪುರದ ನಾಯಕ್ ತಂಡದಿಂದ ಬಂಜಾರ ಜಾನಪದ ಗಾಯನ, ನಾಗಾಲ್ಯಾಂಡ್ ಕಲಾವಿದರಿಂದ ನಾಗಾ ನೃತ್ಯ, ಅಸ್ಸಾಂ ತಂಡದಿಂದ ಬಿಹು ನೃತ್ಯ, ಸೊಲ್ಲಾಪುರದ ಚಂದು ಜಾದವ್ ತಂಡದಿಂದ ಮಹಿಳೆಯರ ಲಂಬಾಣಿ ನೃತ್ಯ, ಮಣಿಪುರ ತಂಡದಿಂದ ಮಣಿಪುರಿ ನೃತ್ಯ ನಡೆಯಲಿದೆ ಎಂದು ಕವಿತಾ ರಾವ್ ತಿಳಿಸಿದರು.
ಸಮಾರಂಭದಲ್ಲಿ ಬಿ.ಕೆ. ಕೃಷ್ಣಮೂರ್ತಿ, ಮನಮೋಹನ್ ಪ್ರಸಾದ್, ಎಂ.ಸಿ.ರಂಗಸ್ವಾಮಿ, ಡಾ.ಕೆ.ಪಿ.ಹೆಗ್ಗಡೆ, ಶಿವಾಜಿರಾವ್, ಎಂ.ಎಚ್.ಪ್ರಕಾಶ್, ಶೇಷಾದ್ರಿ ಅಯ್ಯರ್, ಮರಳವಾಡಿ ಉಮಾಶಂಕರ್, ಭಾನುಪ್ರಕಾಶ್, ಅರುಣ ರವಿಕುಮಾರ್ ಚೌದರಿ, ನಾಗಮಣಿ, ಧರಣೇಶ್ ಕುಮಾರ್, ಲಕ್ಷ್ಮೀ ಕುಮಾರ್ ಇತರರು ಪಾಲ್ಗೊಳ್ಳುವರು ಎಂದರು.
ಗಾಯನ ಕಾರ್ಯಕ್ರಮ: ಫೆ.28ರ ಮಧ್ಯಾಹ್ನ 12ಕ್ಕೆ ವಿದ್ವಾನ್ ಶಿವಾಜಿರಾವ್ ತಂಡದಿಂದ ಶಾಸ್ತ್ರೀಯ ಸಂಗೀತ, ಸರ್ವೋತ್ತಮ್ ತಂಡದಿಂದ ಜಾನಪದ ಗೀತೆ, ಅಪ್ಪಗೆರೆ ಸತೀಶ್ ತಂಡದಿಂದ ಕ್ರಾಂತಿ ಗೀತೆ, ಬ್ಯಾಡರಹಳ್ಳಿ ಶಿವಕುಮಾರ್ ತಂಡದಿಂದ ಪರಿಸರ ಗೀತೆ, ಸಿ.ಎ.ಶಾಂತಕುಮಾರ್ ಅವರಿಂದ ಭಾವಗೀತೆ, ವಿನಯಕುಮಾರ್ ಅವರಿಂದ ಸುಗಮ ಸಂಗೀತ, ಶಿವಪ್ರಸಾದ್, ಜಿ.ವೆಂಕಟೇಶ್, ಗುರುಮಲ್ಲಯ್ಯ ಅವರಿಂದ ರಂಗಗೀತೆ ಗಾಯನ ನಡೆಯಲಿದೆ ಎಂದು ಅವರು ಹೇಳಿದರು.
ಮಧ್ಯಾಹ್ನ 3ಕ್ಕೆ ಪತ್ರಕರ್ತ ಸು.ತ.ರಾಮೇಗೌಡ ಅಧ್ಯಕ್ಷತೆಯಲ್ಲಿ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಕುರಿತ ವಿಚಾರಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಾಹಿತಿ ಸಿಸಿರಾ ಅಧ್ಯಕ್ಷತೆ ವಹಿಸುವರು. ಎಂ.ಬೈರೇಗೌಡ ಸಮಾರೋಪ ಭಾಷಣ ಮಾಡುವರು. ಗಂ. ದಯಾನಂದ, ಸುಮಂಗಲ ಸಿದ್ದರಾಜು, ಕುಮಾರ್, ಸಿದ್ದರಾಜಯ್ಯ, ರವಿಕುಮಾರ್, ಪುಟ್ಟಸ್ವಾಮೀಜಿ ಅವರಿಗೆ ಶಾಂತಲಾ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು. ಸಂಜೆ 5.30ಕ್ಕೆ ಶಾಂತಲಾ ಕಲಾ ಕೇಂದ್ರದ ಕಲಾವಿದರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ ಎಂದು ಕವಿತಾ ರಾವ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.