ಬೆಂಗಳೂರು ಗ್ರಾಮಾಂತರ

ಟೆಕ್ಕಿಗಳಿಂದ ಕಾಲ್ನಡಿಗೆ ಜಾಥಾ ಮೂಲಕ ಜನ ಜಾಗೃತಿ

Published On :


ಆನೇಕಲ್: ಓಕ್ಫಾಂ ಇಂಡಿಯಾ ಸಂಸ್ಥೆ  2ನೆ ವಾರ್ಷಿಕೋತ್ಸವ ಪ್ರಯುಕ್ತ  ಸಹಿ ಸಂಗ್ರಹಣಾ ಹಾಗೂ ಕಾಲ್ನಡಿಗೆ ಜಾಥಾ ಏರ್ಪಡಿಸಿತ್ತು. ಆನೇಕಲ್ಲಿನ ಪ್ರೇಕ್ಷಣೀಯ ಸ್ಥಳ ಮುತ್ಯಾಲಮಡುವಿನಿಂದ ಪ್ರಾರಂಭಗೊಂಡು ಗುಮ್ಮಳಾಪುರ ಕಾಡು ಮೂಲಕ ಬಿಡದಿಯ ಈಗಲ್ಟನ್ ಸ್ಥಳಕ್ಕೆ ಸುಮಾರು 30 ಕಿ.ಮೀ ಕಾಲ್ನಡಿಗೆ ಜಾಥಾದಲ್ಲಿ 123 ತಂಡಗಳ 300ಕ್ಕೂ ಹೆಚ್ಚು ಟೆಕ್ಕಿಗಳು ಪಾಲ್ಗೊಂಡಿದ್ದರು.
ಸಮಾಜದಲ್ಲಿನ ಕಡು ಬಡವರ ಹಾಗೂ ಮಹಿಳೆಯರ ಅನಿವಾರ್ಯ ಅವಶ್ಯಕತೆಗಳನ್ನು ಪೂರೈಸುವುದು ಹಾಗೂ ಸಮಾಜದ ಮುಖ್ಯ ವಾಹಿನಿಗೆ ತರಲು ಬೇಕಾದ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸುವುದು ಸಂಘದ ಉದ್ದೇಶ ಎಂದು ಆಯೋಜಕ  ಕಿರಣ್ ಕಾರ್ತೀಕ ತಿಳಿಸಿದರು. ಭಾರತದಲ್ಲಿ ನೆಲೆಸಿರುವ ದೇಶ ವಿದೇಶಗಳ ಅತಿಥಿಗಳು, ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಮಾಡುವ ಟೆಕ್ಕಿಗಳು ಹೈದ್ರಾಬಾದ್, ಚೆನ್ನೈ ಮುಂಬೈಗಳಿಂದ ಬಂದಿದ್ದ ಕಂಪನಿಗಳ ಮುಖ್ಯಸ್ಥರು, ವೈದ್ಯರು, ಎಂಜಿನಿಯರ್‌ಗಳು ಜಾಥದಲ್ಲಿ ಭಾಗವಹಿಸಿದ್ದರು. ಮಹಿಳೆಯರೂ  ಜಾಥಾದಲ್ಲಿ ಉತ್ಸಾಹದಿಂದ ಭಾಗವಹಿಸಿ, ಗಮನ ಸೆಳೆದರು.
ಆನೇಕಲ್ ಮತ್ಯಾಲಮಡು ಕಾಡಿನೊಳಗೆ ಇಳಿದು ತಮಿಳುನಾಡಿನ ಗುಮ್ಮಳಾಪುರ ಕಾಡಂಚಿನಲ್ಲಿ ಪ್ರಯಾಣ ಮಾಡಿ ಬೆಂಗಳೂರು ಬಿಡದಿಯ ಈಗಲ್ಟನ್ ಬಳಿ ಪಥ ಸಂಚಲನ ಮುಕ್ತಾಯ ಗೊಳಿಸುವ ಸಂಕಲ್ಪದೊಂದಿಗೆ ಬಂದವರನ್ನು ಸ್ಥಳೀಯ ಗ್ರಾಮಸ್ಥರು ಬರಮಾಡಿಕೊಂಡರು. ತಂಡದಲ್ಲಿ ಅತ್ಯಂತ ಹಿರಿಯರಾದ  ತ್ಯಾಗರಾಜನ್ (65) ಟೀಂ  ಮುನ್ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.