ಕುಂಬಾರ ಸಮುದಾಯ ಕೀಳರಿಮೆ ಬಿಡಲಿ
ಕನಕಪುರ: ಕರ್ನಾಟಕ ರಾಜ್ಯ ಕುಂಬಾರರ ಮಹಾಸಂಘ, ರಾಮನಗರ ಜಿಲ್ಲಾಘಟಕಗಳ ಸಂಯುಕ್ತ ಆಶ್ರಯದಲ್ಲಿ ಕುಂಬಾರ ಸಮುದಾಯದ ಜಾಗೃತಿಸಮಾವೇಶ ಕನಕಪುರದ ಡಾ. ರಾಜ್ಬಯಲು ರಂಗಮಂದಿರದಲ್ಲಿ ನಡೆಯಿತು.
ಸಮಾರಂಭದ ದಿವ್ಯಸಾನ್ನಿಧ್ಯವನ್ನು ದೇಗುಲಮಠದ ಶ್ರೀ ಮುಮ್ಮಡಿ ನಿರ್ವಾಣಸ್ವಾಮೀಜಿ, ಚಿತ್ರದುರ್ಗದ ಚನ್ನಬಸವ ಗುಂಡಯ್ಯ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು. ಕಾರ್ಯಕ್ರಮದ ಅಂಗವಾಗಿ ಇಲ್ಲಿನ ಅಯ್ಯಪ್ಪಸ್ವಾಮಿ ದೇವಾಲಯದಿಂದ ನೂರಾರು ಮಂದಿ ಮಹಿಳೆಯರು ಪೂರ್ಣಕುಂಭ ಸ್ವಾಗತದೊಂದಿಗೆ, ಜಾನಪದ ಕಲಾಮೇಳಗಳ ಮೆರವಣಿಗೆಯಲ್ಲಿ ವೇದಿಕೆಗೆ ಅತಿಥಿಗಳನ್ನು ಕರೆತಂದರು. ಉದ್ಘಾಟನೆಯನ್ನು ನೆರವೇರಿಸಿದ ಶಾಸಕ ಡಿ.ಕೆ. ಶಿವಕುಮಾರ್ ಮಾತನಾಡಿ, ಕುಂಬಾರ ಸಮುದಾಯ ಕೀಳರಿಮೆ ಬಿಡಬೇಕು. ಸಂಘಟನೆಯೇ ಶಕ್ತಿಯೆಂಬ ಮಂತ್ರವನ್ನು ಅರಿತುಕೊಳ್ಳಬೇಕು, ಐದಾರುಸಾವಿರ ವರ್ಷಗಳ ಇತಿಹಾಸವಿರುವ ಸಮುದಾಯದ ಕುಂಭಕಲೆಗೆ ಜನರು ಸಂಘಟನೆಗಳು ಉತ್ತೇಜನ, ಪುರಸ್ಕಾರ ನೀಡಬೇಕು, ಸಮುದಾಯದ ಮಕ್ಕಳು ವಿದ್ಯಾವಂತರಾಗಿ ಉತ್ತಮ ಸ್ಥಾನಮಾನಗಳನ್ನು ಗಳಿಸಬೇಕು, ರಾಜಕೀಯವಾಗಿಯೂ ಪ್ರಾತಿನಿಧ್ಯ ಹೊಂದಲು ಸಂಘಟಿತರಾಗಿ ಯತ್ನಿಸಬೇಕು ಎಂದು ಕರೆ ನೀಡಿದರು.
ಭವನ ನಿರ್ಮಾಣ: ರಾಜ್ಯಾಧ್ಯಕ್ಷ ಶಿವಕುಮಾರಚೌಡಶೆಟ್ಟಿ ಮಾತನಾಡಿ, ಸಂಘದ ವತಿಯಿಂದ ಸರ್ಕಾರ ನೀಡಿರುವ ಸುಸಜ್ಜಿತ ನಿವೇಶನದಲ್ಲಿ ಭವನವನ್ನು ನಿರ್ಮಿಸಲಾಗುತ್ತಿದೆ. ಕನಕಪುರ ಪಟ್ಟಣದಲ್ಲಿಯೂ ನಿವೇಶನ ನೀಡುವ ಭರವಸೆಯನ್ನು ಶಾಸಕ ಡಿ.ಕೆ.ಶಿವಕುಮಾರ್ ನೀಡಿದ್ದು, ಸಮುದಾಯದ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಲು ಶಾಲೆಗಳು, ವಸತಿನಿಲಯಗಳನ್ನು ಸ್ಥಾಪಿಸುವ ಸಮುದಾಯವನ್ನು ಸಂಘಟಿಸಿ ಉತ್ತಮ ಶಕ್ತಿಯನ್ನಾಗಿ ರೂಪಿಸುವ ಮಹದಾಸೆಯನ್ನು ಸಂಘವು ಹೊಂದಿದೆ ಎಂದು ಹೇಳಿದರು. ಕುಂಬಾರಸಂಘದ ರಾಜ್ಯ ಗೌರವಾಧ್ಯಕ್ಷನಾಗರಾಜ್, ಡಾ.ಅಣ್ಣಯ್ಯಕುಲಾಲ, ಮಹಿಳಾಘಟಕದ ರಾಜ್ಯಾಧ್ಯಕ್ಷೆ ಶಶಿಕಲಾ ಶಿವಕುಮಾರ್, ಹುಚ್ಚೇಶ್ ಕುಂಬಾರ, ಸಿಐ ಧನಂಜಯ, ಕೃಷ್ಣಪ್ಪ, ಸುರೇಶ, ಸಿದ್ದಪ್ಪ, ಗುಂಡಣ್ಣ, ಕೋಡಿಹಳ್ಳಿ ರಮೇಶ್, ಪಾಲಹಳ್ಳಿರಾಜು, ಬಸವರಾಜು, ವೆಂಕಟೇಶ್, ನಾಗರಾಜು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

