ನಾಳೆ ತಾನಂಕು ವಿರಚಿತ ಕೃತಿಗಳ ಲೋಕಾರ್ಪಣೆ
ಕ.ಪ್ರ. ವಾರ್ತೆ, ಆನೇಕಲ್, ಜು.2
ನಾಡಿನ ಖ್ಯಾತ ಕವಿ ಹಾಗೂ ಬರಹಗಾರ ತಾ.ನಂ. ಕುಮಾರ ಸ್ವಾಮಿ ವಿರಚಿತ ತಿಮ್ಮರಾಯ ವಚನಗಳು ಹಾಗೂ ಮರಳುಗಾಡಿನಲ್ಲಿ ಒಂಟಿ ಸಲಗ ಎಂಬ ಕೃತಿಗಳನ್ನು ಗುರುವಾರ ವಿಧಾತ ವಿದ್ಯಾ ಟ್ರಸ್ಟ್ ಆವರಣದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಿಮ್ಮರಾಯ ವಚನಗಳು ಎಲ್ಲ ಜನರ ದಿನ ನಿತ್ಯದ ಸಂಕಷ್ಟಗಳ ಸಂಗತಿಯಾಗಿದೆ. ಈ ಅನುಭವಾಮೃತವನ್ನು ಶಿಲಾ ಶಾಸನಗಳಲ್ಲಿ ಕೆತ್ತಲಾಗಿದ್ದು ವಿದ್ಯಾ ಸಂಸ್ಥೆಯ ಆವರಣದಲ್ಲಿ ಪ್ರತಿಷ್ಠಾಪಿಸಿಲಾಗುವುದು. ಮರಳುಗಾಡಿನಲ್ಲಿ ಒಂಟಿ ಸಲಗ ವಿಶಿಷ್ಟ ಕೃತಿಯಾಗಿದ್ದು ಅಧ್ಯಯನ ಶೀಲ ಗ್ರಂಥವಾಗಿದೆ. ಈ ಎರಡು ಉಪಯುಕ್ತ ಕೃತಿಗಳ ಲೋಕಾರ್ಪಣೆಯನ್ನು ಪ್ರೊ. ಹಂಪನಾ ಮತ್ತು ಕಮಲ ಹಂಪನಾ ನಡೆಸಲಿದ್ದಾರೆ. ಖ್ಯಾತ ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಸಾನಿಧ್ಯ ಆದಿ ಚುಂಚನಗಿರಿ ಪೀಠದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ವಹಿಸಲಿದ್ದಾರೆ.
ಇದೇ ವೇದಿಕೆಯಲ್ಲಿ ಅನಿವಾಸಿ ಭಾರತೀಯ ಹಾಗೂ ಆನೇಕಲ್ಲಿನ ಮೂಲ ಪುರುಷ ಡಾ. ಎಸ್. ಗೋಪಾಲರಾಜು ವಿರಚಿತ ನನ್ನ ಬದುಕು ಕೃತಿಯನ್ನು ಪತ್ರಕರ್ತ ಲಕ್ಷ್ಮಣ ಕೊಡಸೆ ಬಿಡುಗಡೆ ಮಾಡಲಿದ್ದಾರೆ. ರಾಷ್ಟ್ರ ಕವಿ ಕುವೆಂಪು ಅವರ ಪುತ್ಥಳಿಯನ್ನು ಶಾಲಾ ಆವರಣದಲ್ಲಿ ಪ್ರತಿಷ್ಠಾಪನೆಯಾಗಲಿದೆ. ವಿಧಾತ ಕನ್ನಡ ಕಲಾ ಸಂಘದವರು ಕುವೆಂಪು ವಿರಚಿತ ಬೊಮ್ಮನಹಳ್ಳಿಯ ಕಿಂದರಿಜೋಗಿ ನಾಟಕವನ್ನು ಪ್ರದರ್ಶಿಸಲಿದ್ದಾರೆ ಎಂದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಕೆ. ವಿಧಾತ್, ಟಿ. ಕೆ. ವಿಗ್ನಾನ್, ಸಿ.ವಿ. ವೆಂಕಟೇಶರೆಡ್ಡಿ, ನಾಗರಾಜು, ಅರಳೆಪ್ಪನವರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

