ಬೆಂಗಳೂರು ಗ್ರಾಮಾಂತರ

ವಿಭಿನ್ನ ವಾಸ್ತುಶೈಲಿ ವಿಜಯನಗರ ವಿಶೇಷತೆ

Published On :

ಕನಕಪುರ: ಭಾರತೀಯ ಶಿಲ್ಪಕಲೆಯ ಮೇರು ರಚನೆಗಳನ್ನು ವಿಜಯನಗರ ಕಾಲದ ಶಿಲ್ಪಕಲೆಗಳಲ್ಲಿ ಗುರುತಿಸಬಹುದು.ಪುರಂದರ ಮಂಟಪದ ಸಂಗೀತದ ಕಂಬಗಳು, ಶಿಲಾಸೇತುವೆಗಳು, ನೀರಾವರಿ ಸರಬರಾಜು ಜಾಲ ವಿಭಿನ್ನ ವಾಸ್ತುಶೈಲಿಯ ಗುಡಿಗೋಪುರಗಳು ವಿಜಯನಗರದ ವಾಸ್ತುಶಿಲ್ಪದ ವಿಶೇಷತೆಗಳಾಗಿವೆ ಎಂದು ಬೆಂಗಳೂರಿನ ಮಹಾರಾಣಿ ಮಹಿಳಾ ಕಾಲೇಜಿನ ಪ್ರಾಧ್ಯಾಪಕಿ ಡಾ.ಅನುರಾಧ ಹೇಳಿದ್ದಾರೆ. ಅವರು ಕನಕಪುರದ ರೂರಲ್ ಕಾಲೇಜಿನ ಎಸ್.ಕರಿಯಪ್ಪ ಸ್ನಾತಕೋತ್ತರ ಕೇಂದ್ರದಲ್ಲಿ ಶ್ರೀಮತಿ ಭದ್ರಕಾಳಮ್ಮ ಶ್ರೀರಂಗಯ್ಯ ದತ್ತಿಉಪನ್ಯಾಸವನ್ನು ದೃಶ್ಯ ಶ್ರವಣ ಮಾಧ್ಯಮದ ಮೂಲಕ ನೀಡುತ್ತಾ ಹೇಳಿದರು.
ಗ್ರಾಮವಿದ್ಯಾಪ್ರಚಾರಕ ಸಂಘದ ಅಧ್ಯಕ್ಷ ಕೆ.ಜಿ.ತಿಮ್ಮಪ್ಪ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿಗಳಾದ ನಿವೃತ್ತ ಆಕಾಶವಾಣಿ ನಿರ್ದೇಶಕ ಎಂ.ಆರ್.ಗವಿರಾಯಪ್ಪ, ಎಂ.ಆರ್.ಸೀನಪ್ಪ, ಪ್ರಾಂಶುಪಾಲ ಎಸ್.ಎಲ್.ವಿ.ನಾಯಕ್, ಆರ್‌ಇಎಸ್ ಕಾರ್ಯದರ್ಶಿ ಸಿ.ರಮೇಶ್, ಇತಿಹಾಸ ವಿಭಾಗದ ಮುಖ್ಯಸ್ಥ ಮೇಜರ್ ಡಾ.ಮುನಿ ರಾಜಪ್ಪ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಡಾ.ಎಸ್.ಎಚ್. ಭುವನೇಶ್ವರ ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.