ಬೆಂಗಳೂರು ಗ್ರಾಮಾಂತರ

ಕುರುಬ ಸಮುದಾಯ ಭವನ ನಿರ್ಮಿಸಿ

Published On :

ಕ.ಪ್ರ. ವಾರ್ತೆ ಸೂಲಿಬೆಲೆ ಜು.5
ಹೊಸಕೋಟೆ ತಾಲೂಕಿನಲ್ಲಿ ಕುರುಬ ಸಮುದಾಯದ ಶೈಕ್ಷಣಿಕ ಹಾಗೂ ಸಾಮಾಜಿಕ ಅಭಿವೃದ್ಧಿಗಾಗಿ ಸಮುದಾಯ ಭವನ ಹಾಗೂ ಹಾಲು ಮತಸ್ಥಶಾಲೆಗಳನ್ನು ತೆರೆಯುವಂತೆ ಕಾಗಿನೆಲೆ ಮಠದ ಸ್ವಾಮೀಜಿ ಶಾಸಕ ಎನ್.ನಾಗರಾಜ್ ಅವರನ್ನು ಒತ್ತಾಯಿಸಿದ್ದಾರೆ.
ಸೂಲಿಬೆಲೆ ಹೋಬಳಿ ಗುಳ್ಳಹಳ್ಳಿಯಲ್ಲಿ ಶುಕ್ರವಾರ ನಡೆದ ಗ್ರಾಮದ ಭತ್ತೇಶ್ವರಸ್ವಾಮಿ ದೇವತಾ ಜಾತ್ರೆ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಕಾಗಿನೆಲೆ ಮಠದ ಈಶ್ವರನಂದಪುರಿ ಸ್ವಾಮೀಜಿ, ಕುರುಬ ಸಮುದಾಯ ಶೈಕ್ಷಣಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಲು ಅನುಕೂಲವಾಗುವಂತೆ ಹೊಸಕೋಟೆ ತಾಲೂಕಿನಲ್ಲಿ ಶಾಲೆ ಹಾಗೂ ಸಮುದಾಯಭವನ ನಿರ್ಮಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು ಮುಂದಾಗಬೇಕು. ಸಿದ್ದರಾಮಯ್ಯಉತ್ತಮ ಆಡಳಿತ ನೀಡುವ ನಾಯಕರಾಗಿದ್ದು, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ಸಮುದಾಯ ಪ್ರಗತಿ ಸಾಧಿಸುವಂತ ಕಾರ್ಯಗಳಿಗೆ ಹೆಚ್ಚು ಕೈಜೋಡಿಸಬೇಕು ಎಂದು ಹೇಳಿದರು.
ಕಾಗಿನೆಲೆ ಮಠದ ನಿರಂಜಾನಂದಪುರಿ ಸ್ವಾಮೀಜಿ ಮಾತನಾಡಿ, ಸಮಾಜದ ಸಂಸ್ಕೃತಿ ಮತ್ತು ಸಂಪ್ರಾದಾಯ ಉಳಿಸಿ ಬೆಳೆಸುವಲ್ಲಿ ಜಾತ್ರೆ ಮಹೋತ್ಸವಗಳಲ್ಲಿ ಯುವ ಪೀಳಿಗೆಗೆ ಹೆಚ್ಚಾಗಿ ಭಾಗವಹಿಸಬೇಕು. ಹಾಲು ಮತಸ್ಥ ಸಮುದಾಯದವರು ಧಾರ್ಮಿಕವಾಗಿ ಎಲ್ಲೆಡೆ ಶೈಕ್ಷಣಿಕವಾಗಿ ಅಭಿವೃದ್ಧಿ ಕಾಣಬೇಕು.
ಇದರಿಂದ ಸಮಾಜದಲ್ಲಿ ಬದಲಾವಣೆ  ಸಾಧ್ಯವಾಗಲಿದೆ ಎಂದರು.
ಶಾಸಕ ಎನ್.ನಾಗರಾಜ್ ಮಾತನಾಡಿ, ದೈವಿಕ ನೆಲೆಯಿಂದ ಮಾತ್ರ ಮನುಷ್ಯ ಮಾನಸಿಕವಾಗಿ ನೆಮ್ಮದಿ ಕಾಣಲು ಸಾಧ್ಯ. ಅಧಿಕಾರ ಸಿಕ್ಕಾಗ ಸಮಾಜ ಸೇವೆ ಮಾಡಬೇಕು ಎಂದರು.
ಇದಕ್ಕೂ ಮುನ್ನ ಗ್ರಾಮದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ಕಾರ್ಯ ನಡೆಯಿತು.
ಬಾರದ ಸಿಎಂ: ಗುಳ್ಳಹಳ್ಳಿ ಭತ್ತೇಶ್ವರಸ್ವಾಮಿ ಜಾತ್ರಾ ಮಹೋತ್ಸವಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗಮಿಸಲಿದ್ದಾರೆ ಎಂಬ ಹಿನ್ನೆಲೆಯಲ್ಲಿ ನಡೆದಿದ್ದ ಸಿದ್ಧತೆ ಮಧ್ಯಾಹ್ನದ ವೇಳೆ ಕಳೆಗುಂದಿತ್ತು.
ಮಧ್ಯಾಹ್ನ ಸಿಎಂ ಬರುತ್ತಿದ್ದಾರೆ ಎಂಬ ಸುದ್ದಿ ಕೇಳಿ ಪೊಲೀಸರು ಕಾರ್ಯಕರ್ತರು ಅರ್ಲಟ್ ಆದ ಕೆಲವೇ ಕ್ಷಣಗಳಲ್ಲಿ ಸಿಎಂ ಬರುವುದಿಲ್ಲ ಎಂಬ ಸುದ್ದಿ ಭಕ್ತರಿಗೆ ನಿರಾಸೆಯನ್ನುಂಟು ಮಾಡಿದರೇ,ಪೊಲೀಸರು ನಿಟ್ಟುಸಿರು ಬಿಟ್ಟರು.
ಕೆ.ಆರ್.ಪುರಂ ಶಾಸಕ ಭೈರತಿ ಬಸವರಾಜ್, ವಿಧಾನಪರಿಷತ್ ಸದಸ್ಯ ಸುರೇಶ್, ಭತ್ತೇಶ್ವರ ದೇಗುಲ ಸಮಿತಿ ಅಧ್ಯಕ್ಷ ಕೆಂಪಣ್ಣ, ರಾಮಾಂಜಿನಪ್ಪ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.