ಬೆಂಗಳೂರು ಗ್ರಾಮಾಂತರ

ದೃಢೀಕರಣ ಪತ್ರ ತಂದು ಸಸಿ ಪಡೆಯಲು ಸಲಹೆ

Published On :

ರಾಮನಗರ: ಜಿಲ್ಲಾ ಜಲಾನಯನ ಅಭಿವೃದ್ಧಿ ಇಲಾಖೆಯು ನರೇಗಾ ಯೋಜನೆಯಡಿ ಮಾಗಡಿ ಹಾಗೂ ಕನಕಪುರ ತಾಲೂಕಿನ ರೈತರಿಗೆ 2013ರ ಮಳೆಗಾಲದಲ್ಲಿ ನೆಡಲು ಅನುಕೂಲವಾಗುವಂತೆ ಉತ್ತಮವಾದ ಸಾಗುವಾನಿ, ಸಿಲ್ವರ್ ಓಕ್, ಹೆಬ್ಬೇವು, ನೆಲ್ಲಿ, ಹೊಂಗೆ, ಜಂಬು ನೇರಳೆ, ಬಿದಿರು, ಉಲಚಿ, ಇತರೆ ಜಾತಿಯ ಸಸಿಗಳನ್ನು ಕನಕಪುರ ತಾಲೂಕಿನ ಮರಳವಾಡಿ, ಮಲ್ಲಾಪುರ, ಹೊನ್ನಿಗಾನಹಳ್ಳಿ ಹಾಗೂ ಮಾಗಡಿ ತಾಲೂಕಿನ ಮಾಗಡಿ ಮತ್ತು ಕಣ್ವ ಡ್ಯಾಮ್ ನರ್ಸರಿಗಳಲ್ಲಿ ಬೆಳಸಲಾಗಿದೆ.  ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ರೈತ ಬಾಂದವರು ಸಂಬಂಧಪಟ್ಟ ಪಿಡಿಒಗಳಿಂದ ಸಸಿಗಳನ್ನು ಪಡೆಯವ ಬಗ್ಗೆ ದೃಢೀಕರಣ ಪತ್ರ ತಂದು ಪರಿಸರ ಸಂರಕ್ಷಣೆ, ಅರಣ್ಯ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಗಳಾಗಬೇಕೆಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಕೋರಿದ್ದಾರೆ. ಮಾಹಿತಿಗೆ ಮೊ. 7760997331, 7760997333 ಸಂಪರ್ಕಿಸಿ.
ಸಕಾಲ ಸಹಾಯವಾಣಿ ತೆರೆಯಲು ಅರ್ಜಿ
ರಾಮನಗರ: ಕರ್ನಾಟಕ ನಾಗರೀಕ ಸೇವೆಗಳ ಖಾತರಿ ಅಧಿನಿಯಮ 2011ನ್ನು ಅನುಷ್ಠಾನಗೊಳಿಸುವ ಸಂಬಂಧ ಜಿಲ್ಲಾಧಿಕಾರಿ ಮತ್ತು ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯವಾಣಿ ತೆರೆಯಲು ಹಾಗೂ ಸಹಾಯವಾಣಿಯಲ್ಲಿ ಕೆಲಸ ನಿರ್ವಹಿಸಲು ಗಣಕಯಂತ್ರದ ಬಗ್ಗೆ ಜ್ಞಾನವುಳ್ಳ ಆಸಕ್ತ ಸರ್ಕಾರೇತರ ಸಂಸ್ಥೆ, ನಿವೃತ್ತ ಅಧಿಕಾರಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.  ಮಾಸಿಕ ರು. 5 ಸಾವಿರ ವೇತನ ನೀಡಲಾಗುವುದು. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ದಾಖಲಾತಿಗಳೊಂದಿಗೆ ಜು.15ರೊಳಗೆ ಜಿಲ್ಲಾಧಿಕಾರಿಗಳು, ರಾಮನಗರ ಜಿಲ್ಲೆ, ರಾಮನಗರ ಇವರಿಗೆ ಅರ್ಜಿ ಸಲ್ಲಿಸುವಂತೆ ಡಿಸಿ ವಿ.ಶ್ರೀರಾಮರೆಡ್ಡಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.