ಬೆಂಗಳೂರು ಗ್ರಾಮಾಂತರ

ಪಡಿತರ ಚೀಟಿ ಪಡೆಯಲು ನೂಕುನುಗ್ಗಲು

Published On :

ಕ.ಪ್ರ. ವಾರ್ತೆ, ಆನೇಕಲ್ಲು, ಜು.11-
ಕೆಜಿಗೆ  ರೂ. 1 ರಂತೆ ಅಕ್ಕಿ ಪಡೆಯಲು ಬೇಕಾದ ದಾಖಲೆ ಹಾಗೂ ಹೆಬ್ಬೆಟ್ಟು ನೀಡಿ ಪಡಿತರ ಚೀಟಿ ಪಡೆಯಲು ಸಾರ್ವಜನಿಕರು  ತಾಲೂಕು ಕಚೇರಿಗೆ ಸಹಸ್ರ ಸಂಖ್ಯೆಯಲ್ಲಿ ಬಂದಾಗ ಇದ್ದ ಕೆಲವೇ ಸಿಬ್ಬಂದಿಗೆ ನಿಯಂತ್ರಿಸಲಾಗಲಿಲ್ಲ. ಜನರ ನಿಯಂತ್ರಣಕ್ಕಾಗಿ ಪೊಲೀಸರ ಮೊರೆ ಹೊಕ್ಕಾಗಿ ಸ್ಥಳಕ್ಕೆ ಬಂದ ಪೊಲೀಸರು ಜನರಿಗೆ ಸರದಿ ಸಾಲಿನಲ್ಲಿ ಬರುವಂತೆ ಮನವಿ ಮಾಡಿದರು. ಮತ್ತು ಕ್ಯೂನಲ್ಲಿ ನಿಲ್ಲಿಸುವ ಪ್ರಯತ್ನ ಸಹ ಮಾಡಿದರು. ಮಹಿಳೆಯರಿಗೆ ಪ್ರತ್ಯೇಕ ಸಾಲು ಮಾಡಿ ಕೆಲಸ ಬೇಗ ಆಗಲು ಅನುವು ಮಾಡಿದರು. ಆದರೂ ನೂಕು ನುಗ್ಗಲು ತಳ್ಳಾಟ ಪ್ರಾರಂಭವಾದಾಗ ಸಿಬ್ಬಂದಿ ಮತ್ತು ಜನರ ನಡುವೆ ವಾಗ್ವಾದ ನಡೆಯಿತು. ಜನರ ನಿಯಂತ್ರಣ ಹಾಗೂ ಪಡಿತರ ಚೀಟಿ ಕಾರ್ಯ ನಡೆಸಲು ತೊಂದರೆ ಉಂಟಾದಾಗ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಕೆಲ ಕಾಲ ತಾಲೂಕು ಕಚೇರಿ ಆವರಣದಲ್ಲಿ ಗೊಂದಲ ವಾತಾವರಣ ಉಂಟಾಗಿತ್ತು. ಜನರು ಕಾಲಿಗೆ ಬುದ್ಧಿ ಹೇಳಿ ದಿಕ್ಕಾ ಪಾಲಾಗಿ ಓಡಲಾರಂಭಿಸಿದರು.
ನಂತರ ತಹಸೀಲ್ದಾರ್ ಶಿವೇಗೌಡ ಸ್ಥಳಕ್ಕೆ ಆಗಮಿಸಿ ಜನರ ಮನಮೊಲಿಸಿ ಪಡಿತರ ಚೀಟಿ ಎಲ್ಲರಿಗೂ ಸಿಗಲು ಬೇಕಾದ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಕಂಪ್ಯೂಟರ್‌ಗಳು ಹಾಗೂ ಸಿಬ್ಬಂದಿ ನೇಮಕಕ್ಕೆ ಜಿಲ್ಲಾಧಿಕಾರಿ ಗಳನ್ನು ಸಂಪರ್ಕಿಸಲಾಗುವುದು. ಜನತೆ ತಾಳ್ಮೆಯಿಂದ ಸಹಕಾರ ನೀಡಬೇಕೆಂದು ಕೋರಿದರು. ನಂತರ ಸರದಿ ಸಾಲಿನಲ್ಲಿ ನಿಂತಿದ್ದ ಜನರಿಗೆ ಕಾರ್ಡ್ ಪೂರೈಕೆ ಸುಗಮವಾಗಿ ನೆರವೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.