ಆನೇಕಲ್ಲಿಗೆ ಶಿಂಷಾ ನದಿ ನೀರು ಖಚಿತ: ಶಿವಣ್ಣ
ಕ.ಪ್ರ. ವಾರ್ತೆ ಆನೇಕಲ್ಲು ಜು,13
ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಆನೇಕಲ್ ತಾಲೂಕಿಗೆ ರೂ. 450 ಕೋಟಿ ವೆಚ್ಚದ ಶಿಂಷಾ ನದಿ ನೀರು ಮಂಜೂರು ಮಾಡುವ ಮೂಲಕ ಕುಡಿವ ನೀರು ಸಮಸ್ಯೆಗೆ ಶಾಶ್ವತ ಪರಿಹಾರ ಸೂಚಿಸಿದ್ದಾರೆ. ತಾಲೂಕಿನ ಜನತೆ ಪರವಾಗಿ ಮುಖ್ಯ ಮಂತ್ರಿಯವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಬಿ. ಶಿವಣ್ಣ ನುಡಿದರು.
ಅವರು ಆನೇಕಲ್ ವಾರ್ಡ್ ಸಂಚಾರದಲ್ಲಿ ಜನ ಸಾಮಾನ್ಯರನ್ನು ಭೇಟಿ ಮಾಡಿ ಪ್ರತಿ ವಾರ್ಡ್ನಲ್ಲಿನ ಸಮಸ್ಯೆಗಳನ್ನು ಆಲಿಸಿದರು. ನಂತರ ಮಾತನಾಡಿ ಶಿಂಷಾ ನದಿ ನೀರನ್ನು ಆನೇಕಲ್ ಪಟ್ಟಣಕ್ಕೆ ಪಡೆಯುವ ಬಗ್ಗೆ ಮುಖ್ಯ ಮಂತ್ರಿಗಳು ಹಾಗೂ ಸಣ್ಣ ನೀರಾವರಿ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೆ. 5 ಕೈಗಾರಿಕಾ ನಗರಗಳನ್ನು ಹೊಂದಿಕೊಂಡಿರುವ ಆನೇಕಲ್ ತಾಲೂಕು ಕುಡಿಯುವ ನೀರಿನ ಬರ ಅನುಭವಿಸುತ್ತಿದ್ದು ನೂರಾರು ವಸತಿ ಯೋಜನೆಗಳಿಂದ ಲಕ್ಷಾಂತರ ಜನರು ವಾಸವಿದ್ದಾರೆ ಎಂಬುದನ್ನು ಮನನ ಮಾಡಿಸಿದ್ದೆ ಎಂದು ಹೇಳಿದರು.
ಪಟ್ಟಣಕ್ಕೆ ಒಳ ಚರಂಡಿ ವ್ವವಸ್ಥೆ: ಆನೇಕಲ್ ಪಟ್ಟಣದಲ್ಲಿ 1 ಲಕ್ಷಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದು ಹೊಸ ಬಡಾವಣೆಗಳು ಪುರಸಭಾ ವ್ಯಾಪ್ತಿಯಲ್ಲಿದೆ. ಎಲ್ಲ ಕಡೆ ರಸ್ತೆ, ಚರಂಡಿ, ಬೀದಿ ದೀಪ ಹಾಗೂ ನೀರಿನ ಪೈಪ್ ಅಳವಡಿಸಲು ಪುರಸಭಾ ಮುಖ್ಯಾಧಿಕಾರಿಗೆ ಸೂಚಿಸಿದ್ದು ಒಳ ಚರಂಡಿ ವ್ಯವಸ್ಥೆಗೆ ನೀಲಿ ನಕ್ಷೆ ಹಾಗೂ ಅಂದಾಜು ಪಟ್ಟಿ ತಯಾರಿಸಲು ಸೂಚಿಸಿದೆ ಎಂದರು.
ಪುರಸಭಾ ಸದಸ್ಯರಾದ ಪಿ.ಶಂಕರ್ಕುಮಾರ್, ಅರ್ಜುನ್, ಮುಖಂಡರಾದ ಸೋಮಶೇಖರರೆಡ್ಡಿ, ಜಿಗಣಿ ಕೃಷ್ಣಪ್ಪ, ಸೇವಾದಳ ಕೃಷ್ಣಮೂರ್ತಿ, ರಾಜಣ್ಣ, ಜಂಪಾಲಿ, ಮೂರ್ತಿಕುಮಾರ್, ಆರ್. ವೆಂಕಟೇಶರೆಡ್ಡಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

