'ರಾಜಿನಾಮೆ ವದಂತಿ ಕುತಂತ್ರಿಗಳ ಹುನ್ನಾರ'
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಶಾಸಕ ಸ್ಥಾನಕ್ಕೆ ನನ್ನಿಂದ ರಾಜಿನಾಮೆ ಕೊಡಿಸಿ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರನ್ನು ಗೆಲ್ಲಿಸಿಕೊಳ್ಳುವ ಲೆಕ್ಕಾಚಾರ ಕಾಂಗ್ರೆಸ್ ವಲಯದಲ್ಲಿ ನಡೆಯುತ್ತಿದೆ ಎಂಬ ವದಂತಿ ಅಪ್ಪಟ ಸುಳ್ಳು. ಇದು ರಾಜಕೀಯ ಕುತಂತ್ರದಿಂದ ಕೆಲವರು ವೃಥಾ ಹಬ್ಬಿಸಿರುವ ಸುದ್ದಿ ಎಂದು ಶಾಸಕ ಟಿ.ವೆಂಕಟರಮಣಯ್ಯ ಸ್ಪಷ್ಟಪಡಿಸಿದ್ದಾರೆ.
ವದಂತಿ ಕುರಿತು ಕನ್ನಡಪ್ರಭದೊಂದಿಗೆ ಮಾತನಾಡಿದ ಅವರು, ಜನರ ಆಶೀರ್ವಾದ ಪಡೆದು ಮುಂದಿನ 5 ವರ್ಷಗಳಿಗೆ ನಾನು ಶಾಸಕನಾಗಿ ಆಯ್ಕೆಯಾಗಿದ್ದೇನೆ. ಜನರು ಇಟ್ಟ ಭರವಸೆ, ಕೊಟ್ಟ ಅಧಿಕಾರವನ್ನು ವ್ಯವಸ್ಥಿತವಾಗಿ ಬಳಸಿಕೊಂಡು ಕ್ಷೇತ್ರದ ಸರ್ವಾಂಗೀಣ ಪ್ರಗತಿಗೆ ಬೇಕಾದ ಯೋಜನೆಗಳನ್ನು ತರುವುದು ನನ್ನ ಉದ್ದೇಶ. ಈ ನಿಟ್ಟಿನಲ್ಲೇ ಕಾರ್ಯಪ್ರವೃತ್ತನಾಗಿದ್ದೇನೆ. ಕಾಂಗ್ರೆಸ್‌ನಲ್ಲಿ ಈ ಬಗೆಯ ಅಡ್ಡದಾರಿ ರಾಜಕಾರಣ ಎಂದೂ ನಡೆಯುವುದಿಲ್ಲ. ಪರಮೇಶ್ವರ್ ಅವರ ಮತ್ತು ನನ್ನ ಬಗ್ಗೆ ಸಲ್ಲದ ವದಂತಿ ಹಬ್ಬಿಸುವುದನ್ನು ಬಿಡಬೇಕು. ನಾನು ಯಾವ ಸಮನ್ವಯ ಸಮಿತಿಯ ಲೆಕ್ಕಾಚಾರದ ಹಿಂದೆಯೂ ಬಿದ್ದಿಲ್ಲ. 5 ವರ್ಷ ಶಾಸಕನಾಗಿಯೇ ಇರುತ್ತೇನೆ. ರಾಜಿನಾಮೆ ಅಥವಾ ಪರ್ಯಾಯದ ಪ್ರಶ್ನೆಯೇ ಇಲ್ಲ. ಈ ಬಗೆಯ ವೈಯಕ್ತಿಕ ರಾಜಕಾರಣ ಬಿಟ್ಟು ಕ್ಷೇತ್ರದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಬೇಕಿದೆ ಎಂದು ಅವರು ಹೇಳಿದರು.
ಹುರುಳಿಲ್ಲದ ಹೇಳಿಕೆ ಬೇಡ: ಕಳೆದ ಕೆಲ ದಿನಗಳ ಹಿಂದೆ ತಾಲೂಕು ಪಂಚಾಯಿತಿ ಅಧ್ಯಕ್ಷರು ಹುರುಳಿಲ್ಲದ ಆರೋಪ ಮಾಡಿದ್ದಾರೆ. ನಾನು ಯಾವ ಹಿಂದಿನ ಶಾಸಕರ ಕಾರ್ಯಕ್ರಮಗಳನ್ನೂ ಹೈಜಾಕ್ ಮಾಡುತ್ತಿಲ್ಲ ಅಥವಾ ಯಾರನ್ನೂ ಟೀಕಿಸುತ್ತಿಲ್ಲ. ಟೀಕೆಗಿಂತ ಕೆಲಸ ಮುಖ್ಯ. ಜೊತೆಗೆ ತಾಪಂ ಸಭಾಂಗಣದಲ್ಲಿ ಜನಪ್ರತಿನಿಧಿಯಲ್ಲದವರೂ ಸಭೆಯಲ್ಲಿ ಭಾಗವಹಿಸಿ ಪತ್ರಿಕಾ ಹೇಳಿಕೆ ನೀಡಿರುವುದು ಸರಿಯಲ್ಲ ಎಂದಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

