ಬೆಂಗಳೂರು ಗ್ರಾಮಾಂತರ

ಕೊಲೆ ಆರೋಪಿಗೆ 2 ವರ್ಷ ಕಠಿಣ ಶಿಕ್ಷೆ

Published On :

ಹೊಸಕೋಟೆ: ತಾಲೂಕಿನ ಕಟ್ಟಿಗೇನಹಳ್ಳಿ ಬಳಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಿದ್ದ ಆರೋಪಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಜಾನ್ ಮೈಕಲ್ ಖುನ್ವಿ  ಶಿಕ್ಷೆವಿಧಿಸಿ ತೀರ್ಪು ನೀಡಿದ್ದಾರೆ. ಎರಡು ವರ್ಷ ಕಠಿಣ ಸಜೆ, 50 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಮತ್ತೆ ಆರು ತಿಂಗಳ ಕಠಿಣ ಸಜೆ ನೀಡಲಾಗಿದೆ.
 ಗಾರೆ ಕೆಲಸ ಮಾಡುತ್ತಿದ್ದ ತಗ್ಗಲಿ ಹೊಸಹಳ್ಳಿ  ನಂಜಪ್ಪ (38) ಶಿಕ್ಷೆಗೊಳಗಾದ ಆರೋಪಿ.  ಆರೋಪಿಯು ಸೆ.21 ರಂದು ಗಾರೆ ಮೇಸ್ತ್ರಿಯಾಗಿದ್ದ  ಅದೇ ಗ್ರಾಮದ ಲೋಕೇಶ್ (32) ಎಂಬುವನೊಂದಿಗೆ ಕಟ್ಟಿಗೇನಹಳ್ಳಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಸುತ್ತಿಗೆ ವಿಷಯಕ್ಕಾಗಿ ಜಗಳ ನಡೆದಿದ್ದು ಕುಪಿತಗೊಂಡ ಲೋಕೇಶನ ತಲೆಗೆ ಸುತ್ತಿಯಿಂದ ಹೊಡೆದು ಪರಾರಿಯಾಗಿದ್ದನು.  ತಲೆಗೆ ತೀವ್ರ ಗಾಯವಾಗಿದ್ದ ಲೋಕೇಶನನ್ನು ಬೆಂಗಳೂರಿನ ನಿಮ್ಯಾನ್ಸ್  ಆಸ್ಪತ್ರೆಗೆ  ದಾಖಲಿಸಲಾಗಿತ್ತು.  ಚಿಕಿತ್ಸೆ ಫಲಕಾರಿಯಾಗದೆ ಸೆ.23ರಂದು ಮೃತ ಪಟ್ಟಿದ್ದನು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.