ಗಿಡನೆಡುವ, ಸಸಿಗಳ ವಿತರಣಾ ಕಾರ್ಯಕ್ರಮ
ಕ.ಪ್ರ. ವಾರ್ತೆ ಟಿ ಕನಕಪುರ ಟಿ ಜು.17
ಲಯನ್ಸ್ ಮತ್ತು ಲಿಯೋ ಕ್ಲಬ್ ಕನಕಪುರ ವತಿಯಿಂದ ಕನಕಪುರದ ಗ್ರಾಮದೇವತೆ ಶ್ರೀ ಬಾಣಂತಮಾರಮ್ಮ ದೇವಾಲಯದ ಆವರಣದಲ್ಲಿ ಗಿಡನೆಡುವ ಹಾಗೂ ಸಸಿಗಳ ವಿತರಣಾ ಕಾರ್ಯಕ್ರಮ ನಡೆಯಿತು.
ಲಯನ್ಸ್ ಅಧ್ಯಕ್ಷ ಕೆ.ಜಿ. ಸತೀಶ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿಧಾನಪರಿಷತ್ ಮಾಜಿ ಸದಸ್ಯ ಎಸ್.ರವಿ ಸಾರ್ವಜನಿಕರಿಗೆ ಹಾಗೂ ಶಾಲಾ ಮಕ್ಕಳಿಗೆ ಸಸಿಗಳನ್ನು ವಿತರಿಸಿ ಮಾತನಾಡುತ್ತಾ, ಪ್ರಕೃತಿ ಪರಿಸರಗಳ ಸಂರಕ್ಷಣೆ ಪ್ರತಿಯೊಬ್ಬ ನಾಗರಿಕನ ಆದ್ಯಕರ್ತವ್ಯವಾಗಿದ್ದು, ಸುಂದರ ಸ್ವಚ್ಛ ಪರಿಸರವನ್ನು ನಮ್ಮ ಮುಂದಿನ ಪೀಳಿಗೆಗೂ ಉಳಿಸುವ ಕಾಪಾಡುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದು ಹೇಳಿದರು.
ಲಯನ್ಸ್ ಪರಿಸರ ಸಮಿತಿ ಅಧ್ಯಕ್ಷ ಮರಸಪ್ಪ ರವಿ ಮಾತನಾಡುತ್ತಾ, ಸಂಸ್ಥೆ ವತಿಯಿಂದ ಪ್ರತೀವರ್ಷ ಹತ್ತಾರು ಶಾಲೆಗಳಿಗೆ ಸಾವಿರಾರು ಸಸಿಗಳನ್ನು ನಿರಂತರವಾಗಿ ವಿತರಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿಯೂ ಪರಿಸರ ಜಾಗೃತಿ ಮೂಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ವಲಯಾಧ್ಯಕ್ಷ ಟಿ.ಬಿಳಿಗಿರಿ ರಂಗಸ್ವಾಮಿ, ಕೆ.ಎನ್.ದಿಲೀಪ್, ನ್ಯಾಯವಾದಿ ರಾಮಚಂದ್ರ, ಕೆ.ಎಂ. ಮಲ್ಲೇಶ್, ಚನ್ನಮಲ್ಲಶೆಟ್ಟಿ, ಪುರಸಭಾಸದಸ್ಯೆ ಗೌರಮ್ಮ, ರತ್ನ ವೆಂಕಟೇಶ್, ಮುನಿಲಕ್ಷ್ಮಮ್ಮ, ವಿಷ್ಣುಕಾಂತ ಆಗಮಿಸಿದ್ದರು. ಮರಸಪ್ಪ ರವಿ ಸ್ವಾಗತಿಸಿದರು, ಪ್ರಶಾಂತ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

