ಬೆಂಗಳೂರು ಗ್ರಾಮಾಂತರ

ವಸತಿ ಯೋಜನೆಗೆ ಡಿಕೆಶಿ ಒಂದು ಎಕರೆ ಭೂಮಿ ದಾನ

Published On :

ಕ.ಪ್ರ. ವಾರ್ತೆ , ಕನಕಪುರ , ಜು.23
ಪಟ್ಟಣದ ಹೊರವಲಯದ ತೊರೆಬೇಕುಪ್ಪೆ ಗ್ರಾಮದ ಸಮೀಪ ಬಡಜನರಿಗೆ ಆಶ್ರಯ ವಸತಿ ಯೋಜನೆಯಲ್ಲಿ ಮನೆ ನಿರ್ಮಿಸಿಕೊಡುವ ಸಲುವಾಗಿ ಶಾಸಕ ಡಿ.ಕೆ. ಶಿವಕುಮಾರ್ ಅವರು ಹತ್ತಾರು ಲಕ್ಷ ಬೆಲೆ ಬಾಳುವ ಒಂದು ಎಕರೆ ಭೂಮಿಯನ್ನು ದಾನವಾಗಿ ನೀಡಿದರು.
ಚೌಕಸಂದ್ರ ಗ್ರಾಪಂ ವ್ಯಾಪ್ತಿಗೆ ಸೇರುವ ಸರ್ವೆ ನಂ. 28,1ರಲ್ಲಿ ಒಂದು ಎಕರೆ ಭೂಮಿಯನ್ನು ಕರ್ನಾಟಕ ಸರ್ಕಾರದ ವಸತಿ ಇಲಾಖೆ ವಸತಿಹೀನರಿಗೆ ಉಚಿತವಾಗಿ ನೀಡಲು, ಮನೆಗಳನ್ನು ಕಟ್ಟಲು ತಮ್ಮ ಸ್ವಯಾರ್ಜಿತ ಒಂದು ಎಕರೆ ಭೂಮಿಯನ್ನು ದಾನಪತ್ರದ ಮೂಲಕ ನೀಡಿದ್ದಾರೆ. ಇದೇ ರೀತಿ ಏಳಗಳ್ಳಿ ಗ್ರಾಮದಲ್ಲಿ ಗುತ್ತಿಗೆದಾರ ದೊಡ್ಡಣ್ಣ ರವಿ ಹಾಗೂ ಸಾತನೂರಿನಲ್ಲಿಯೂ ದಾನಿಗಳನ್ನು ಉತ್ತೇಜಿಸಿ ಸರ್ಕಾರಕ್ಕೆ ಉಚಿತವಾಗಿ ಭೂಮಿಯನ್ನು ದಾನವಾಗಿ ನೀಡಲು ಪ್ರೇರೇಪಿಸಿದ್ದಾರೆ. ಶಾಸಕರ ಈ ಜನಪರ ಕಾರ್ಯಕ್ರಮ ಸಾರ್ವಜನಿಕರಲ್ಲಿ ವ್ಯಾಪಕ ಮೆಚ್ಚುಗೆ ಮೂಡಿಸಿದೆ.
ಈ ಸಂದರ್ಭದಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ಜಿ.ಜೆ. ನಾಯಕ್ ಅವರಿಗೆ ನೀಡಿದರು. ತಹಸೀಲ್ದಾರ್ ಡಾ. ದಾಕ್ಷಾಯಣಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.