ನೌಕರರ ಸಂಘಕ್ಕೆ 31 ನಿರ್ದೇಶಕರು
ನೆಲಮಂಗಲ: ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ತಾಲೂಕಿನ 23 ಇಲಾಖೆಗಳಿಂದ ಒಟ್ಟು 31 ಅಭ್ಯರ್ಥಿಗಳು ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಸರ್ಕಾರಿ ನೌಕರರ ಸಂಘದ ನಿರ್ದೇಶಕರುಗಳಾದ ಪ್ರಾಥಮಿಕ ಶಿಕ್ಷಣ ಇಲಾಖೆ - ಟಿ.ವಾಸುದೇವಮೂರ್ತಿ, ಎನ್.ಗಿರೀಶ್, ಎಂ.ಪುಟ್ಟರುದ್ರಾರಾಧ್ಯ, ಕೆ.ಎನ್.ನಾಗೇಶ್, ಬಿ.ಶಿವಕುಮಾರ್, ಆರೋಗ್ಯ ಇಲಾಖೆ- ಎಚ್.ಹನುಮಂತರಾಜು, ಗಾಯಿತ್ರಮ್ಮ, ಪಾರ್ಥ, ಪ್ರತೀಪ್, ಭೂಮಾಪನ ಇಲಾಖೆ-ಡಿ.ಆರ್.ನಾಗರಾಜು, ನೋಂದಣಿ ಇಲಾಖೆ- ಸಿ.ಸಣ್ಣಪ್ಪ, ಅಬಕಾರಿ ಇಲಾಖೆ-ಶ್ರೀನಿವಾಸಮೂರ್ತಿ, ಸಿ.ಡಿ.ಪಿ.ಓ ಇಲಾಖೆ-ಡಾ.ತೇಜಸ್ವಿನಿ, ಪದವಿಪೂರ್ವ ಕಾಲೇಜು-ಗೋವಿಂದಯ್ಯ, ಕಂದಾಯ ಇಲಾಖೆ-ಎ.ರವಿಕುಮಾರ್, ಜಿ.ಗಿರೀಶ್, ಅರಣ್ಯ ಇಲಾಖೆ- ಗುರುಮೂರ್ತಿ, ಸಮಾಜ ಕಲ್ಯಾಣ ಇಲಾಖೆ-ಚಿಕ್ಕರಂಗಯ್ಯ, ಪ್ರೌಢಶಿಕ್ಷಣ ಇಲಾಖೆ- ರವಿಕುಮಾರ್, ಆಡಿಟ್ ಇಲಾಖೆ-ರವಿಕುಮಾರ್.ಇ, ಖಜಾನೆ ಇಲಾಖೆ-ಎಸ್.ನರೇಂದ್ರ, ಆಹಾರ ಇಲಾಖೆ-ರೇವಣ್ಣ, ಲೋಕೋಪಯೋಗಿ ಜಿಪಂ ಲಕ್ಷ್ಮಮ್ಮ, ಕೃಷಿ ಇಲಾಖೆ-ಆನಂದಕುಮಾರ್, ಎನ್.ಡಿ.ಎ- ಗಿರೀಶ್, ಜಲಾನಯನ ಇಲಾಖೆ-ನಟರಾಜು, ಪಶುಸಂಗೋಪನಾ ಇಲಾಖೆ- ಸಿ.ಎನ್.ಕುಮಾರ್, ರೇಷ್ಮೆ ಮತ್ತು ತೋಟಗಾರಿಕೆ-ಶ್ರೀನಿವಾಸಮೂರ್ತಿ, ತಾಪಂ-ಟಿ.ಕೆಂಪರಂಗಯ್ಯ, ಆರ್.ಟಿ.ಓ-ಸುರೇಶ್ರಾವ್ ಸಿಂಧೆ.
ಕ್ರೀಡೆಯಿಂದ ದೈಹಿಕ ಸದೃಢತೆ, ಮನೋ ವಿಕಸನ: ಸೂ.ರಂ. ರಾಮಯ್ಯ
ಸೂಲಿಬೆಲೆ: ಗ್ರಾಮೀಣ ವಿದ್ಯಾರ್ಥಿಗಳು ದೈಹಿಕ ಹಾಗೂ ಮನೋ ವಿಕಸನ ಹೊಂದಲು ಕ್ರೀಡಾ ಚಟುವಟಿಕೆಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಸ್ವಾತಂತ್ರ್ಯ ಹೋರಾಟಗಾರ ಸೂ.ರಂ ರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸೂಲಿಬೆಲೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಬುಧವಾರದಿಂದ ಪ್ರಾರಂಭವಾದ ಎರಡು ದಿನದ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಒದಿನಷ್ಟೇ ಕ್ರೀಡೆಯೂ ಮುಖ್ಯವಾಗಿದೆ. ಪೋಷಕರು ಮಕ್ಕಳ ಆಸಕ್ತಿಗೆ ಅನುಗುಣವಾಗಿ ಪ್ರೋತ್ಸಾಹಿಸಬೇಕು. ಸರ್ಕಾರಿ ಶಾಲೆಗಳಲ್ಲಿರುವ ಮಕ್ಕಳ ಕ್ರೀಡಾ ಚಟುವಟಿಕೆಗೆ ಅಗತ್ಯವಾಗಿರುವ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು.
ವಿವೇಕಾನಂದ ವಿದ್ಯಾಭಿವೃದ್ಧಿ ಸಂಘದ ಕಾರ್ಯದರ್ಶಿ ಪ್ರಸಾದ್ ಮಾತನಾಡಿದರು.
ಇದಕ್ಕೂ ಮುನ್ನ ಹೋಬಳಿ 32 ಸರ್ಕಾರಿ ಹಿರಿಯ ಹಾಗೂ 7ಕ್ಕೂ ಹೆಚ್ಚು ಪ್ರೌಢಶಾಲೆಗಳಿಂದ ಆಗಮಿಸಿದ್ದ ಸುಮಾರು 2000 ಸಾವಿರ ಕ್ರೀಡಾ ಪಟುಗಳಿಂದ ಪಥ ಸಂಚಲನ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

