ಕೊಂಡೋತ್ಸವದೊಂದಿಗೆ ಚಾಮುಂಡೇಶ್ವರಿ ಕರಗ ಮುಕ್ತಾಯ
ರಾಮನಗರ: ಚಾಮುಂಡೇಶ್ವರಿ ಅಮ್ಮನವರ ಕರಗವು ಬುಧವಾರ ಬೆಳಗ್ಗೆ ನಡೆದ ಕೊಂಡೋತ್ಸವ ಮತ್ತು ಪೂಜಾ ಕಾರ್ಯಕ್ರಮದೊಂದಿಗೆ ಮುಕ್ತಾಯವಾಗಿದೆ.
ಮಂಗಳವಾರ ರಾತ್ರಿ ಚಾಮುಂಡೇಶ್ವರಿ ದೇಗುಲದಿಂದ ಹೊರಟ ಕರಗದ ಮೆರವಣಿಗೆಯಲ್ಲಿ ನಗರದ ಆದಿಶಕ್ತಿ ದೇವಿ, ಮುತ್ತು ಮಾರಮ್ಮ, ಬಿಸಿಲು ಮಾರಮ್ಮ, ಕೊಲ್ಲಾಪುರದಮ್ಮ, ಭಂಡಾರದಮ್ಮ, ಮಗ್ಗದ ಕೇರಿ ಮಾರಮ್ಮ, ಆದಿ ಪರಾಶಕ್ತಿ ಮಾರಮ್ಮ ದೇವರ ಕರಗಗಳೂ ಭಾಗಿಯಾದವು.
ಏಳು ದೇಗುಲಗಳ ಅರ್ಚಕರು ಕರಗವನ್ನು ಹೊತ್ತು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆಯಲ್ಲಿ ತೆರಳಿದರು. ಮೆರವಣಿಗೆಯುದ್ದಕ್ಕೂ ಅಸಂಖ್ಯಾತ ಭಕ್ತರು ಪೂಜೆ, ಪುನಸ್ಕಾರ ನೆರವೇರಿಸಿದರು. ಎಲ್ಲೆಡೆ ರಂಗೋಲಿ ಬಿಟ್ಟು, ತಳಿರು ತೋರಣ ಮತ್ತು ದೀಪಾಲಂಕಾರದೊಂದಿಗೆ ಸ್ವಾಗತಿಸಲಾಯಿತು. ಭಕ್ತರು ಅಲ್ಲಲ್ಲಿ ಪಟಾಕಿ ಸಿಡಿಸಿದರು. ಕರಗಧಾರಿಗಳು ತಮಟೆಯ ಸದ್ದಿಗೆ ಕುಣಿಯುತ್ತಾ ಸಾಗಿದರು. ರಾತಿ ಮೆರವಣಿಗೆ ಬಳಿಕ ಬುಧವಾರ ಬೆ.11.45ರ ವೇಳೆಗೆ ಚಾಮುಂಡೇಶ್ವರಿ ಅಮ್ಮನವರ ಕೊಂಡೋತ್ಸವ ನಡೆಯಿತು. ಇತರೆ ದೇಗುಲಗಳ ಎದುರಲ್ಲೂ ಆಯಾ ದೇವರ ಕರಗಧಾರಿಗಳು ಕೊಂಡ ಹಾಯ್ದರು. ಕೊಂಡೋತ್ಸವ ಮುಕ್ತಾಯ ಬಳಿಕ ಮಹಾಮಂಗಳಾರತಿ ನೆರವೇರಿತು. ಬಳಿಕ ದೇವರ ದರ್ಶನಕ್ಕಾಗಿ ಭಕ್ತರಿಗೆ ಅವಕಾಶ ಕಲ್ಪಿಸಲಾಯಿತು. ಸಹಸ್ರಾರು ಭಕ್ತರು ದರ್ಶನ ಪಡೆದರು. ಅನ್ನ ಸಂತರ್ಪಣೆ, ಪ್ರಸಾದ ವಿನಿಯೋಗ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

