'ಜೆಸಿಐ ಸಂಸ್ಥೆ ಸೇವೆ ಶ್ಲಾಘನೀಯ'
ವಿಜಯಪುರ: ಪಟ್ಟಣದ ಜೆಸಿಐ ಸಂಸ್ಥೆಯು ಕಳೆದ 29 ವರ್ಷಗಳಿಂದ ಸಾರ್ವಜನಿಕ ವಲಯದಲ್ಲಿ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ರಕ್ತದಾನ, ನೇತ್ರ ತಪಾಸಣಾ ಶಿಬಿರ, ಫಲಾನುಭವಿಗಳಿಗೆ ಚಿಕಿತ್ಸಾ ವೆಚ್ಚ ನೀಡುತ್ತಿದೆ ಎಂದು ವಿಜಯಪುರ ಜೆಸಿಐ ಸಂಸ್ಥೆಯ ಯೋಜನಾ ನಿರ್ದೇಶಕ ಎಂ.ಶಿವಕುಮಾರ್ ತಿಳಿಸಿದರು.
ಅವರು ಪಟ್ಟಣದ ಶ್ರೀ ಲಕ್ಷ್ಮೀ ವೆಂಕಟರಮಣ ಸ್ವಾಮಿ ಕಲ್ಲುಗಾಲಿ ಬ್ರಹ್ಮರಥೋತ್ಸವದ ಪ್ರಯುಕ್ತ ಎಸ್.ಎಲ್.ವಿ ಮಹಾದ್ವಾರದ ಬಳಿ ಏರ್ಪಡಿಸಿದ್ದ 5 ದಿನಗಳ ಗಾನ ಗಂಗೋತ್ರಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮದಲ್ಲಿ ವಿಜಯಪುರ ಜೆಸಿಐ ಸಂಸ್ಥೆಯ ಅಧ್ಯಕ್ಷ ಬಲಮುರಿ ಶ್ರೀನಿವಾಸ್ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಇದೇ ಸಂಧರ್ಭದಲ್ಲಿ ಶ್ರವಣ ದೋಷವುಳ್ಳ ರವಿಕುಮಾರ್ ಅವರಿಗೆ ಶ್ರವಣ ಸಾಧನ ಅಳವಡಿಸಿಕೊಳ್ಳಲು ಬೇಕಾದ ಧನ ಸಹಾಯವನ್ನು ಚೆಕ್ ಮೂಲಕ ನೀಡಲಾಯಿತು.ಸಂಸ್ಥೆಯ ವತಿಯಿಂದ ಬಳುವನಹಳ್ಳಿಯ ಸಂಗೀತ ವಿದ್ವಾಂಸ ಸೋಮಶೇಖರಾಚಾರಿ ಅವರಿಗೆ ಗಾಯನ ರತ್ನ ಪ್ರಶಸ್ತಿ, ಎಂ.ಹನುಮಂತಪ್ಪ ಅವರಿಗೆ ಸಂಗೀತ ರತ್ನ ಪ್ರಶಸ್ತಿ, ಹಿರಿಯ ರಂಗ ಭೂಮಿ ಕಲಾವಿದ ಈ ಭೈರೇಗೌಡ, ಅವರಿಗೆ ರಂಗಭೂಮಿ ರತ್ನ ಪ್ರಶಸ್ತಿಯನ್ನು ನೀಡಲಾಯಿತು.
ಪಟ್ಟಣದ ಶೃಂಗೇರಿ ಶಾರದಾ ಶಾಲೆ, ಜೇಸೀಸ್ ಶಾಲೆ ಮತ್ತು ಮಿಥುನ್ ಸೈಫ್ ಆಫ್ ತಂಡದ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಜೆಸಿಐ ವಿಜಯಪುರ ಸಂಸ್ಥಾಪಕ ಅಧ್ಯಕ್ಷ ಪಿ.ಮುಕುಂದರಾವ್, ಮಾಜಿ ಅಧ್ಯಕ್ಷರ ಸಂಘದ ಅಧ್ಯಕ್ಷ ವಿ.ಎನ್. ರಮೇಶ್, ಕಾರ್ಯದರ್ಶಿ ಕೆ.ವಿ. ಭೈರೇಗೌಡ, ಖಜಾಂಜಿ ಐ.ಟಿ. ರಾಮಾಂಜಿನಪ್ಪ, ಮಾಜಿ ಅಧ್ಯಕ್ಷ ಮುನಿವೀರಣ್ಣ, ವಿಜಯಪುರ ಬಲಿಜ ಸಂಘದ ಅಧ್ಯಕ್ಷ ಎಂ.ಮುನಿರಾಜು ಮತ್ತಿತರರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

