ಬಾನಂಗಳದಲ್ಲಿ ಬಣ್ಣದ ಹಕ್ಕಿಗಳ ಹಾರಾಟ
ದೇವನಹಳ್ಳಿ: ಇಲ್ಲಿನ ಜೇಸಿಐ ಸಂಸ್ಥೆಯವರು ಪ್ರತಿವರ್ಷದಂತೆ ಜಿಲ್ಲಾ ಮಟ್ಟದ ಗಾಳಿಪಟ ಉತ್ಸವವನ್ನು ಇಲ್ಲಿನ ಸರ್ಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದರು.
ಈ ಉತ್ಸವದ ಉದ್ಘಾಟನೆಯನ್ನು ಸಮಾಜ ಸೇವಕ ಎನ್.ಮುನಿರಾಜು ಹಾಗೂ ತಾಲೂಕು ವೀರಶೈವ ಸಮಾಜ ಅಧ್ಯಕ್ಷ ಎಂ.ಎಸ್. ರಮೇಶ್ ಅವರು ಆಕಾಶ ಬುಟ್ಟಿ ಹಾರಿಬಿಡುವುದರ ಮೂಲಕ ನೆರವೇರಿಸಿದರು. ನಮ್ಮ ದೇಶದ ಪುರಾತನ ಸಾಂಪ್ರದಾಯಿಕ ಗಾಳಿಪಟ ಉತ್ಸವನ್ನು ಜೆಸಿಐ ಸಂಸ್ಥೆಯವರು ನಿರಂತರವಾಗಿ ಆಯೋಜಿಸುತ್ತಿರುವುದು ಅಭಿನಂದನೀಯ. ಇಂತಹ ಉತ್ಸವಗಳ ನಮ್ಮ ಮುಂದಿನ ಪೀಳಿಗೆಗೆ ಉಳಿಯಬೇಕಾಗಿದೆ ಎಂದರು.
ಈ ಉತ್ಸವದಲ್ಲಿ ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ತಾಲೂಕು ಯುವಕರು ಹೆಚ್ಚಾಗಿ ಭಗವಹಿಸಿದ್ದು ರಾಜ್ಯ ಸರ್ಕಾರದ ಅನ್ನ ಭಾಗ್ಯ ಯೋಜನೆ ಸಾರುವ ಪಟ, ಭಾರತ, ವೀರಹನುಮಾನ್, ಕನ್ನಡದ ಕೋಟ್ಯಾಧಿಪತಿ, ಕರಗ, ಪರಿಸರ ಉಳಿಸುವ ಬಗ್ಗೆ ವೃಕ್ಷದ ಪಟ, ಕಣ್ಣನ್ನು ಸುಡಬೇಡಿ ಅಂಧರ ಬಾಳಿಗೆ ದೃಷ್ಟಿ ತರಲು ರಕ್ಷಿಸಿ, ತಾಜ್‌ಮಹಲ್, ನಾಗರಹಾವು, ಬೃಂದಾವನ ಹೀಗೆ ಹತ್ತು ಹಲವಾರು ಬಣ್ಣ ಬಣ್ಣದ ಸರಣಿ ಪಟಗಳು ಬಾನಿನಲ್ಲಿ ಎರಡು ಗಂಟೆಗಳ ಕಾಲ ಹಾರಾಟ ನಡೆಸಿದವು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಮಾಜಿ ಅಧ್ಯಕ್ಷ ಎನ್.ರಮೇಶ್ ಬಹುಮಾನ ವಿತರಣೆ ಮಾಡಿದರು. ಸುಮಾರು 75 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದು ಪ್ರಥಮ ಮೂರು ಬಹುಮಾನವನ್ನು ದೊಡ್ಡಬಳ್ಳಾಪುರದ ಸರಣಿ ಗಾಳಿಪಟದ ಎಸ್. ಮುನಿರಾಜು, ಇಡಗುಂಜಿ ಗಣಪ ಪಟದ ಮಹೇಶ್ ಹಾಗೂ ಪರ್ವತ ಆಂಜನೇಯ ಪಟದ ಎನ್. ನವೀನ್‌ಕುಮಾರ್ ಪ್ರಥಮ ಬಹುಮಾನ ಪಡೆದರು. ಉಳಿದ ಹತ್ತು ಮಂದಿಗೆ ಸಮಾಧಾನಕರ ಬಹುಮಾನ ಹಾಗೂ ಭಾಗವಹಿಸಿದ್ದ ಎಲ್ಲ ಸ್ಪರ್ಧಾಳುಗಳಿಗೆ ಪ್ರಶಸ್ತಿ ಪತ್ರ ನೀಡಲಾಯಿತು.
ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಎ.ಎಂ. ಹರೀಶ್ ವಹಿಸಿ ಗಾಳಿಪಟ ಉತ್ಸವಕ್ಕೆ ಸಹಕಾರ ನೀಡಿದ ಎಲ್ಲರನ್ನು ಅಭಿನಂದಿಸಿದರು. ಯೋಜನಾ ನಿರ್ದೇಶಕರಾದ ಎಂ. ಮಂಜುನಾಥ್ ಸ್ವಾಗತ ಕೋರಿದರು. ಕಾರ್ಯದರ್ಶಿ ಎಸ್.ಪ್ರಭುದೇವ್ ವಂದನೆ ಅರ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

