ಬೆಂಗಳೂರು ಗ್ರಾಮಾಂತರ

ಜೆಡಿಎಸ್‌ಗೆ ಅಗ್ನಿ ಪರೀಕ್ಷೆ: ದೇವೇಗೌಡ

Published On :

ಕ.ಪ್ರ.ವಾರ್ತ್ಣೆ ಮಾಗಡಿ , ಜು.30
ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಉಪ ಚುನಾವಣೆ ಜೆಡಿಎಸ್‌ಗೆ ಅಗ್ನಿ ಪರೀಕ್ಷೆಯಿದ್ದಂತೆ ಎಂದು ಮಾಜಿ ಪ್ರಧಾನ ಮಂತ್ರಿ ಎಚ್.ಡಿ. ದೇವೇಗೌಡ ನುಡಿದರು.
ಅವರು  ಪಟ್ಟಣದಲ್ಲಿ ಉಪಚುನಾವಣೆ ಕುರಿತು ಜೆಡಿಎಸ್ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ  ಲೋಕಸಭಾ ಉಪಚುನಾವಣೆಗೆ ಸಂಬಂಧಿಸಿದಂತೆ ಆ.1 ರಂದು ಜೆಡಿಎಸ್  ನಾಯಕರ ಸಭೆ ಕರೆದು ಯಾರು ಅಭ್ಯರ್ಥಿಯಾಗಬೇಕೆಂದು ಮಹತ್ವದ ತೀರ್ಮಾನ ಕೈಗೊಳ್ಳಲಾಗುವುದು. ಉಪಚುನಾವಣೆಗೆ ಕಾಂಗ್ರೆಸ್  ನಾಯಕರು ಈಗಾಗಲೇ 1,350 ಕೋಟಿ ನಿಧಿ ಸಂಗ್ರಹ ಮಾಡಿದ್ದಾರೆ. ಬಿಜೆಪಿ ನಾಯಕರು 85 ಕೋಟಿ ನಿಧಿ ಸಂಗ್ರಹಿಸಿದ್ದಾರೆ. ನಾವು ಕೇವಲ 4 ಕೋಟಿ ನಿಧಿ ಸಂಗ್ರಹಿಸಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಈ ಬಾರಿಯ ಉಪ ಚುನಾವಣೆ ಜೆಡಿಎಸ್‌ಗೆ  ಅಗ್ನಿ ಪರೀಕ್ಷೆ ಇದ್ದಂತೆ. ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಸಂಚು ನಡೆಸಿ, ಜೆಡಿಎಸ್ ವಿರುದ್ಧ ಅಪಪ್ರಚಾರ  ಮಾಡಿದರು. ಕಾಂಗ್ರೆಸ್ ಪೊಲೀಸ್ ಜೀಪಿನಲ್ಲಿ ಹಣ ತಂದು ಹಂಚಿಕೆ ಮಾಡಿ  ಅಧಿಕಾರದ ಗದ್ದುಗೆ ಹಿಡಿದಿದೆ ಎಂದು ಆರೋಪಿಸಿದರು.
ಎಚ್‌ಡಿಕೆ  ಕೈ ಬಲಪಡಿಸಿ: ಈ ಬಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಮಣಿಸಬೇಕಾದರೆ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಒಗ್ಗಟ್ಟಾಗಿ ಜೆಡಿಎಸ್  ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಎಚ್‌ಡಿಕೆ ಕೈ ಬಲಪಡಿಸಬೇಕು ಎಂದು ದೇವೇಗೌಡ ಕರೆ ನೀಡಿದರು.
ಜೋತಿ ಬಸು ನನ್ನನ್ನು ಪ್ರಧಾನ ಮಂತ್ರಿ ಮಾಡಿದ್ದು: ನಾನು ಈ ದೇಶದ ಪ್ರಧಾನ ಮಂತ್ರಿಯಾಗಿ ಉತ್ತಮ ಆಡಳಿತ ನೀಡುವ ಮೂಲಕ  ದೇಶದ  ಜನರ ಮನಸ್ಸನ್ನು ಗೆದ್ದಿದ್ದೇನೆ. ಹಿಂದಿ ಭಾಷೆ ಬಾರದ ನನ್ನನ್ನು ಜೋತಿ ಬಸು  ಪ್ರಧಾನ ಮಂತ್ರಿಯನ್ನಾಗಿ ಮಾಡಲು ಪ್ರಾಮಾಣಿಕವಾಗಿ ಶ್ರಮಿಸಿದ್ದರು ಎಂದರು.
 ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್ ಮತ್ತು ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಆ.ದೇವೇಗೌಡ ಇಬ್ಬರು ಲೋಕಸಭಾ ಚುನಾವಣೆ ಎದುರಿಸಲು ಅರ್ಹರಿದ್ದಾರೆ ಎಂದ ಎಚ್.ಡಿ. ದೇವೇಗೌಡ ಅವರು ಸಹಸ್ರಾರು ಕೋಟಿ ಹಗರಣ ಎದುರಿಸುತ್ತಿರುವ ಕೇಂದ್ರದಲ್ಲಿ ಯುಪಿಎ ಸರ್ಕಾರ ಸಂಕಷ್ಟದಲ್ಲಿದೆ. ಎನ್‌ಡಿಎಗೆ ಕೇಂದ್ರದಲ್ಲಿ ಅಧಿಕಾರ ಸಿಗದು, ರಾಜ್ಯದ ಜನತೆ ಎಲ್ಲವನ್ನು ನೋಡುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿಯ ಬೂಟಾಟಿಕೆ ನಡೆಯದು. ಜೆಡಿಎಸ್‌ನಿಂದ ಮಾತ್ರ ದೇಶದಲ್ಲಿನ 120 ಕೋಟಿ ಜನರನ್ನು ಸಮಾನತೆಯಿಂದ ಕಾಣಲು ಸಾಧ್ಯ. ಈ ಬಾರಿ ಉಪಚುನಾವಣೆಯಲ್ಲಿ ಜೆಡಿಎಸ್  ಅಭ್ಯರ್ಥಿಯನ್ನು ಬಹುಮತದಿಂದ ಗೆಲ್ಲಿಸಿಕೊಳ್ಳಲು  ಎಲ್ಲರು ಒಗ್ಗೂಡಬೇಕು ಎಂದರು.
ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ  ಕ್ಷೇತ್ರದಲ್ಲಿ ಪಾಪಸ್ ಕಳ್ಳಿ ಬೆಳಸಿದ ಫಲದಿಂದ ಈ ಬಾರಿ ವಿಧಾನ ಸಭಾ ಚುನಾವಣೆಯಲ್ಲಿ ನಾನು ಸೋಲನ್ನು ಅನುಭವಿಸಬೇಕಾಯಿತು ಎಂದರು.
 ನಾಗರಾಜಯ್ಯ, ಕೆ.ರಾಜು. ಬಿಡಿಸಿಸಿ ಬ್ಯಾಂಕ್ ಜಿಲ್ಲಾಧ್ಯಕ್ಷ ಎಚ್.ಎನ್. ಅಶೋಕ್, ಆ. ದೇವೇಗೌಡ ಮಾತನಾಡಿದರು.
 ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕ ನರಸಿಂಹಮೂರ್ತಿ, ಬಿಡಿಸಿಸಿ ಬ್ಯಾಂಕ್ ಸಹಕಾರ ಸಂಘದ ಅಧ್ಯಕ್ಷ  ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ಬಗಿನಗೆರೆ ರಾಮಣ್ಣ, ಹುಳ್ಳೇನಹಳ್ಳಿ ಎಂ. ರೇವಣ್ಣ, ಪೊಲೀಸ್ ರಾಮಣ್ಣ, ಜಿ.ಪಂ. ಸದಸ್ಯ ಧನಂಜಯ್ಯ, ಲೋಕೇಶ್, ರಹಮತ್  ಉಲ್ಲಾಖಾನ್, ಇನಾಯಿತ್  ಉಲ್ಲಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.